ಗೌರಿ ಲಂಕೇಶ್ ಹತ್ಯೆ: ಆಕ್ರೋಶ ವ್ಯಕ್ತಪಡಿಸಿದ ಹಿರಿಯ ಪತ್ರಕರ್ತರು
Recommended Video

ನವದೆಹಲಿ/ಬೋಪಾಲ್/ಹುಬ್ಬಳ್ಳಿ, ಸೆಪ್ಟೆಂಬರ್ 6: ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ತಮ್ಮ ಮನೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಸೆ.5 ರಂದು ಬಲಿಯಾದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ಭಾರತದಾದ್ಯಂತ ಹಿರಿಯ ಪತ್ರಕರ್ತರು ಖಂಡಿಸಿದ್ದಾರೆ.
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ. ಗೌರಿ ಲಂಕೇಶ್(55) ಹತ್ಯೆ ಪ್ರಕರಣವನ್ನು ಆದಷ್ಟು ತ್ವರಿತವಾಗಿ ಇತ್ಯರ್ಥಗೊಳಿಸುವುದಕ್ಕೆ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.

ಪತ್ರಕರ್ತ ಎಸ್.ವೆಂಕಟ್ ನಾರಾಯಣ್ ಮಾತನಾಡಿ, ಏನು ನಡೆದಿದೆಯೋ ಅದು ನಿಜಕ್ಕೂ ಸ್ವೀಕಾರಾರ್ಹವಲ್ಲ. ಕರ್ನಾಟಕ ಸರ್ಕಾರ ಆದಷ್ಟು ಶೀಘ್ರವಾಗಿ ಅಪರಾಧಿಗಳನ್ನು ಪತ್ತೆ ಮಾಡಿ, ಶಿಕ್ಷಿಸುತ್ತದೆಂದು ನಿರೀಕ್ಷಿಸುತ್ತೇನೆ ಎಂದರು.
ಎಂ.ಎಂ.ಕಲಬುರ್ಗಿ, ಗೋವಿಂದ್ ಪನ್ಸಾರೆ, ನರೇಂದ್ರ ದಾಮೋಳ್ಕರ್ ಮತ್ತು ಗೌರಿ ಲಂಕೇಶ್ ಹತ್ಯೆಗಳನ್ನು ಒಟ್ಟಾಗಿ ಉಲ್ಲೇಖಿಸಿದ ಪತ್ರಕರ್ತ ದೀಪಕ್ ತಿವಾರಿ, ಪ್ರಜಾಪ್ರಭುತ್ವದಲ್ಲಿ ಇಂಥ ಘಟನೆಗಳು ಸ್ವೀಕಾರಾರ್ಹವಲ್ಲ ಎಂದರು.
ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ್ ಸಿದ್ದಣ್ಣನವರ್, "ಗೌರಿ ಲಂಕೇಶ್ ಬಹಳ ಪ್ರತಿಭಾನ್ವಿತ ಪತ್ರಕರ್ತೆ. ಹತ್ಯೆ ನಿಜಕ್ಕೂ ಅತ್ಯಂತ ಕ್ರೂರ ನಡೆ. ಇಡೀ ಕರ್ನಾಟಕದ ಜನತೆ ಮತ್ತು ಪತ್ರಕರ್ತರು ಅವರ ಸಾವನ್ನು ಖಂಡಿಸುತ್ತೇವೆ" ಎಂದರು.
ನಿನ್ನೆ(ಸೆ.5) ರಾತ್ರಿ 8 ರ ಹೊತ್ತಿಗೆ 'ಲಂಕೇಶ್ ಪತ್ರಿಕೆ'ಯ ಸಂಪಾದಕಿಯಾಗಿದ್ದ ಗೌರಿ ಲಂಕೇಶ್ ಅವರನ್ನು ಅವರ ಮನೆಯಲ್ಲಿಯೇ ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆಗೈದಿದ್ದರು. ಅವರ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಯಲಿದೆ.












Click it and Unblock the Notifications