ನರೇಂದ್ರ ಮೋದಿ ದೇಶದ ಜನತೆ ಭಯಪಡುವ ಪ್ರಧಾನಿ: ಎಂ.ಕೆ. ಫೈಝಿ

ತಂಜಾವೂರು, ಅಕ್ಟೋಬರ್ 24: ನರೇಂದ್ರ ಮೋದಿ ಅವರು ದೇಶದ ಜನತೆ ಭಯಪಡುವ ಪ್ರಧಾನಿಯಾಗಿದ್ದಾರೆ ಎಂದು ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ. ಫೈಝಿ ಗಂಭೀರ ಆರೋಪ ಮಾಡಿದ್ದಾರೆ.

ಎಸ್‌ಡಿಪಿಐ ತಮಿಳುನಾಡು ರಾಜ್ಯ ಪ್ರತಿನಿಧಿ ಸಭೆಯನ್ನು ಉದ್ಘಾಟಿಸಿ ಭಾನುವಾರ ಮಾತನಾಡಿದ ಅವರು, "ಮೋದಿ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ ಎಂದರೆ, ಜನರು ಭಯಭೀತರಾಗಿ ತಮ್ಮ ದೇವರನ್ನು ನೆನದು ಮುಂಬರುವ ಅನಾಹುತಗಳಿಂದ ರಕ್ಷಿಸುವಂತೆ ಪ್ರಾರ್ಥಿಸುತ್ತಾರೆ. ಜಗತ್ತಿನಲ್ಲಿ ಎಲ್ಲಿಯೂ ಇಂತಹ ಪರಿಸ್ಥಿತಿಯಿಲ್ಲ" ಎಂದು ಫೈಝಿ ಆರೋಪಿಸಿದ್ದಾರೆ.

"ದೇಶದ ಸಾರ್ವಜನಿಕ ಕ್ಷೇತ್ರಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಒಂದೊಂದಾಗಿ ಮಾರಾಟ ಮಾಡುತ್ತಿದ್ದಾರೆ. ಈ ಹಿಂದೆ ಸಂಘಪರಿವಾರ ಮುಸ್ಲಿಮರನ್ನು ಮಾತ್ರ ಹೆದರಿಸುತ್ತಿತ್ತು, ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಕ್ರೈಸ್ತರು, ದಲಿತರು, ಮಹಿಳೆಯರು ಮತ್ತು ರೈತರು ಎಲ್ಲರೂ ಇಂದು ಭಯದಲ್ಲಿದ್ದಾರೆ. ದೇಶದ ಒಕ್ಕೂಟ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬಲಹೀನ ಗೊಳಿಸಿದ್ದಾರೆ. ರಾಜ್ಯಗಳು ಯಾವುದೇ ಅಧಿಕಾರವನ್ನು ಹೊಂದಿರದ ರೀತಿಯಲ್ಲಿ ಪ್ರತಿಯೊಂದು ಕಾನೂನು ಮಾಡಲಾಗುತ್ತಿದೆ" ಎಂಬ ಗಂಭಿರ ಆರೋಪವನ್ನು ತಮಿಳುನಾಡು ಎಸ್‌ಡಿಪಿಐ ರಾಜ್ಯ ಪ್ರತಿನಿಧಿ ಸಭೆಯಲ್ಲಿ ಮಾತನಾಡಿದ್ದಾರೆ.

SDPI National President M.K. Faizi has made serious allegations on Prime Minister Narendra Modi

"ಇಡೀ ದೇಶವನ್ನು ತಮ್ಮ ಪೊಲೀಸ್ ಪಡೆಗಳ ಅಧೀನಕ್ಕೆ ತರಲು ಪ್ರಯತ್ನಿಸುತ್ತಿದೆ. ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಮತ್ತು ಬಂಗಾಳ ಮುಖ್ಯಮಂತ್ರಿ ಮಮತಾ ಮುಂತಾದವರಿಗೆ ಸಮಸ್ಯೆ ಸೃಷ್ಟಿಸಲು ಬಿಎಸ್‌ಎಫ್‌ಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಅದೆಷ್ಟೋ ಏಜೆನ್ಸಿಗಳು ಜನರನ್ನು ಹೆದರಿಸಲಿಕ್ಕಾಗಿಯೇ ಮುಂದೆ ಬರುತ್ತಿದೆ."

"ದೇಶವು ಅತ್ಯಂತ ಗಂಭೀರ ಪರಿಸ್ಥಿತಿಯನ್ನು ಎದುರಿಸುತ್ತಿರುವಾಗ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಹಾಗೂ ಇತರ ಪಕ್ಷಗಳ ನಿಲುವು ಶೋಚನೀಯವಾಗಿದೆ. ಎಲ್ಲರೂ ಬಿಜೆಪಿ ಹೇಳುವುದರ ಜೊತೆಗೆ ನಿಲ್ಲುತ್ತಿದ್ದಾರೆ. ಬಿಜೆಪಿಯು ಅತೀ ದೊಡ್ಡ ಶ್ರೀರಾಮನ ಪ್ರತಿಮೆಯನ್ನು ನಿರ್ಮಿಸಲು ಮುಂದಾಗುತ್ತಿದ್ದರೆ, ಅಖಿಲೇಶ್ ಪರಶುರಾಮನ ಅತಿ ದೊಡ್ಡ ಪ್ರತಿಮೆಯನ್ನು ನಿರ್ಮಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಯಾರೂ ಸಾರ್ವಜನಿಕ ಆಸ್ಪತ್ರೆಗಳು ಅಥವಾ ವಿಶ್ವವಿದ್ಯಾಲಯಗಳನ್ನು ನಿರ್ಮಿಸಲು ಪ್ರಯತ್ನಿಸುತ್ತಿಲ್ಲ. ದೇಶದ ನಿರ್ಣಾಯಕರಾದ ಮುಸ್ಲಿಮರು, ಆದಿವಾಸಿಗಳು ಅಥವಾ ದಲಿತರನ್ನು ಯಾವ ಪಕ್ಷಗಳು ಗಣನೆಗೆ ತೆಗೆದುಕೊಳ್ಳುತ್ತಿಲ್ಲ." ಎಂದು ಫೈಝಿ ಆರೋಪಿಸಿದ್ದಾರೆ.

ಇಂದು ದೇಶದಲ್ಲಿ ಬಿಜೆಪಿಯನ್ನು ನೇರವಾಗಿ ಎದುರಿಸುತ್ತಿರುವ ಏಕೈಕ ರಾಜಕೀಯ ಪಕ್ಷ ಎಸ್‌ಡಿಪಿಐ ಮಾತ್ರ. ದೇಶದ ಸುರಕ್ಷತೆಯನ್ನು ಬಯಸುವವರಿಗೆ ಎಸ್‌ಡಿಪಿಐ ಜೊತೆಗೆ ನಿಲ್ಲುವುದನ್ನು ಬಿಟ್ಟು ಬೇರೆ ದಾರಿಯೇ ಇಲ್ಲ ಎಂಬ ವಾತಾವರಣ ನಿರ್ಮಾಣವಾಗಿದೆ. ದೇಶದಲ್ಲಿ ಧಾರ್ಮಿಕ ಮುಖಂಡರು ಸೇರಿದಂತೆ ಅನೇಕರು ಮೌನವಾಗಿದ್ದಾರೆ. ಯಾಕೆಂದರೆ ಅವರು ಮೋದಿ, ಅಮಿತ್ ಶಾ, ಯೋಗಿ ಅವರಿಗೆ ಹೆದರಿದ್ದು, ಈ ಪರಿಸ್ಥಿತಿ ಬದಲಾಗಲಿದ್ದು, ನಿರ್ಭೀತಿಯ ಪರಿಸ್ಥಿತಿ ನಿರ್ಮಾಣವಾಗಲಿದೆ ಇದಕ್ಕಾಗಿಯೇ ಎಸ್.ಡಿ.ಪಿ.ಐ ಕೆಲಸ ಮಾಡುತ್ತಿದೆ ಎಂದರು.

SDPI National President M.K. Faizi has made serious allegations on Prime Minister Narendra Modi

ರಾಜ್ಯ ಪ್ರತಿನಿಧಿ ಸಭೆಯಲ್ಲಿ ತಮಿಳುನಾಡು ಎಸ್‌ಡಿಪಿಐ ರಾಜ್ಯಾಧ್ಯಕ್ಷ ನೆಲ್ಲಯ್ ಮುಬಾರಕ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಮೈಸೂರು, ರಾಷ್ಟ್ರೀಯ ಉಪಾಧ್ಯಕ್ಷ ದಹ್ಲಾನ್ ಬಾಖವಿ, ರಾಷ್ಟ್ರೀಯ ಕಾರ್ಯದರ್ಶಿ ಮಂಡಳಿ ಸದಸ್ಯ ಅಬ್ದುಲ್ ಮಜೀದ್ ಫೈಝಿ ಭಾಗವಹಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+