ಭಾರತದಲ್ಲಿ ಹಕ್ಕಿಜ್ವರ; ವಿಜ್ಞಾನಿಗಳಿಂದ ಬಂತು ಹೈ ಅಲರ್ಟ್

ನವದೆಹಲಿ,

ಜನವರಿ
11:
ಭಾರತದಲ್ಲಿ
ಕೊರೊನಾ
ಸೋಂಕಿನ
ನಡುವೆ
ಹಕ್ಕಿ
ಜ್ವರದ
ಭೀತಿಯೂ
ಎದುರಾಗಿದೆ.
ದೇಶದ
ಏಳು
ರಾಜ್ಯಗಳಲ್ಲಿ
H1N8
ಹಕ್ಕಿ
ಜ್ವರ
ಪ್ರಕರಣಗಳು
ಕಂಡುಬಂದಿದ್ದು,
ಕೇಂದ್ರ
ಸರ್ಕಾರ
ಜಿಲ್ಲೆಗಳಲ್ಲಿ
ಹೈ
ಅಲರ್ಟ್
ಘೋಷಿಸಿದೆ.

id="toptextpromo">
id='are-slot-1'
class='oiad
oi-axt
oiadv'>

ಕೇರಳ,

ರಾಜಸ್ಥಾನ,
ಮಧ್ಯ
ಪ್ರದೇಶ,
ಹಿಮಾಚಲ
ಪ್ರದೇಶ,
ಹರಿಯಾಣ,
ದೆಹಲಿ,
ಮಹಾರಾಷ್ಟ್ರ
ಹಾಗೂ
ಉತ್ತರ
ಪ್ರದೇಶದಲ್ಲಿ
ಹಕ್ಕಿ
ಜ್ವರದ
ಪ್ರಕರಣಗಳು
ದೃಢಪಟ್ಟಿವೆ.
ಅಕ್ಕಪಕ್ಕದ
ರಾಜ್ಯಗಳಲ್ಲಿಯೂ
ಅಲರ್ಟ್
ಘೋಷಿಸಲಾಗಿದೆ.
ನಡುವೆ
ಹಕ್ಕಿ
ಜ್ವರದ
ಕುರಿತು
ವಿಜ್ಞಾನಿಗಳು
ಎಚ್ಚರಿಕೆ
ಕೊಟ್ಟಿದ್ದಾರೆ.
ನಿಗಾ
ವಹಿಸದೇ
ಇದ್ದ
ಪಕ್ಷದಲ್ಲಿ
ಅಪಾಯ
ಖಂಡಿತ
ಎಂದಿದ್ದಾರೆ.
ಮುಂದೆ
ಓದಿ...

id='are-slot-2'
class='oiad
oi-axt
oiadv'>

 ಜನವರಿ ಮೊದಲ ವಾರದಲ್ಲಿ ಕಂಡುಬಂದ ಪ್ರಕರಣ

ಜನವರಿ ಮೊದಲ ವಾರದಲ್ಲಿ ಕಂಡುಬಂದ ಪ್ರಕರಣ

ಭೋಪಾಲ್ ಮೂಲದ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್ (NISHAD) ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಹರಿಯಾಣ, ಗುಜರಾತ್ ಹಾಗೂ ಉತ್ತರ ಪ್ರದೇಶದಲ್ಲಿ ಹಕ್ಕಿ ಜ್ವರದ ಪ್ರಕರಣಗಳನ್ನು ದೃಢಪಡಿಸಿದೆ. ಇದೇ ಜನವರಿಯ ಮೊದಲ ವಾರದಲ್ಲಿ ಹಕ್ಕಿ ಜ್ವರ ಪ್ರಕರಣ ರಾಜಸ್ಥಾನದಲ್ಲಿ ಕಂಡುಬಂದಿತು. ಆನಂತರ ಏಳು ರಾಜ್ಯಗಳಲ್ಲಿ ಪ್ರಕರಣ ದೃಢಪಟ್ಟಿತು. ಸೋಂಕು ಕಂಡುಬಂದ ಅಕ್ಕಪಕ್ಕದ ರಾಜ್ಯಗಳಲ್ಲೂ ಹೈ ಅಲರ್ಟ್ ಘೋಷಿಸಲಾಗಿದೆ.

 ವಿಜ್ಞಾನಿಗಳು ಕೊಟ್ಟ ಎಚ್ಚರಿಕೆ

ವಿಜ್ಞಾನಿಗಳು ಕೊಟ್ಟ ಎಚ್ಚರಿಕೆ

ಹಕ್ಕಿ ಜ್ವರದ H1N8 ವೈರಸ್ ಹಕ್ಕಿಗಳಿಂದ ಮನುಷ್ಯರಿಗೆ ಬರುವ ಸಾಧ್ಯತೆಗಳು ಇವೆ ಎಂದು ವಿಜ್ಞಾನಿಗಳು ಎಚ್ಚರಿಕೆ ಕೊಟ್ಟಿದ್ದಾರೆ. ಸೋಂಕು ಹರಡುವ ಸಾಧ್ಯತೆ ಸದ್ಯಕ್ಕೆ ಕಡಿಮೆಯಿದ್ದರೂ, ಆ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಈ ವೈರಸ್ ನಲ್ಲಿ ಝೂನೋಟಿಕ್ ಎಂಬ ಅಂಶವಿದ್ದು, ಇದು ಪ್ರಾಣಿಗಳಿಂದ ಮನುಷ್ಯರಿಗೆ ರೋಗಕಾರಕ ಹರಡುವ ಅಂಶ ಎಂದು ಹಿರಿಯ ವಿಜ್ಞಾನಿ ಸಿ ತೋಶ್ ತಿಳಿಸಿದ್ದಾರೆ. ಹೀಗಾಗಿ ಹಕ್ಕಿ ಜ್ವರ ಪ್ರಕರಣಗಳು ಹೆಚ್ಚದಂತೆ ನಿಗಾ ವಹಿಸಬೇಕು ಎಂದು ಸೂಚಿಸಿದ್ದಾರೆ.

 ಹಕ್ಕಿ ಜ್ವರದಿಂದ ಆರ್ಥಿಕ ಹೊಡೆತ

ಹಕ್ಕಿ ಜ್ವರದಿಂದ ಆರ್ಥಿಕ ಹೊಡೆತ

ಹಕ್ಕಿ ಜ್ವರದಿಂದಾಗಿ ಹೈನೋದ್ಯಮಕ್ಕೆ ಆರ್ಥಿಕ ಹೊಡೆತ ಬಿದ್ದಿದ್ದು, ಕೋಳಿ ಸಾಗಣೆದಾರರಿಗೆ ನಷ್ಟ ಸಂಭವಿಸಿದೆ. ಹಕ್ಕಿ ಜ್ವರದಿಂದಾಗಿ ಕೋಳಿ ಮಾಂಸದ ದರ ಇಳಿಯುತ್ತಿದ್ದಂತೆ ಕೋಳಿಯ ಮೇವಿನ ಬೆಳೆಯಾದ ಜೋಳಕ್ಕೂ ಬೆಲೆ ತಗ್ಗಿದ್ದು, ನಷ್ಟ ಸಂಭವಿಸಿ ಆದಾಯ ಕಡಿಮೆಯಾಗಿರುವುದಾಗಿ ತಿಳಿದುಬಂದಿದೆ.

 ಭಾರತದಲ್ಲಿ 24 ಬಾರಿ ಹಕ್ಕಿ ಜ್ವರದ ಭೀತಿ

ಭಾರತದಲ್ಲಿ 24 ಬಾರಿ ಹಕ್ಕಿ ಜ್ವರದ ಭೀತಿ

ಇದುವರೆಗೂ 24 ಬಾರಿ ಭಾರತದಲ್ಲಿ ಹಕ್ಕಿಜ್ವರ ಭೀತಿ ಎದುರಾಗಿದೆ. 2004ರಿಂದ ಈ ಪ್ರಕರಣ ಕಂಡುಬಂದಿದ್ದು, 2016ರಲ್ಲಿ ಕೊನೆ ಪ್ರಕರಣ ಕಂಡುಬಂದಿತ್ತು. ಇದೀಗ ಮತ್ತೆ ಹಕ್ಕಿ ಜ್ವರ ಪ್ರಕರಣಗಳು ಕಂಡುಬಂದಿವೆ. ಕೇರಳ ಹಾಗೂ ಹರಿಯಾಣದಲ್ಲಿ ಹಕ್ಕಿಗಳನ್ನು ಕೊಲ್ಲುವ ಪ್ರಕ್ರಿಯೆ ಮುಗಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+