ಮೋದಿಯ ತೆರೆಯ ಹಿಂದಿನ ರಾಜಕೀಯಕ್ಕೆ ಹೈರಾಣಾದರೆ ಶಶಿಕಲಾ?

Posted By:
Subscribe to Oneindia Kannada
ಹೆಜ್ಜೆ ಹೆಜ್ಜೆಗೂ ಕುತೂಹಲಕಾರಿಯಾಗಿ ಸಾಗುತ್ತಿರುವ ತಮಿಳುನಾಡು ರಾಜಕೀಯದಲ್ಲಿ, ಸಿಎಂ ಹುದ್ದೆ ಉಳಿಯುತ್ತೋ ಬಿಡುತ್ತೋ ಎನ್ನುವುದು ನಂತರದ ಲೆಕ್ಕಾಚಾರವಾದರೂ, ನಾನಾ ನೀನಾ ರಾಜಕೀಯ ಸಮರದಲ್ಲಿ ಪನ್ನೀರ್ ಸೆಲ್ವಂ, ಚಿನ್ನಮ್ಮನ ಎದುರು ಮೇಲುಗೈ ಸಾಧಿಸಿದ್ದಾರೆ.

ಪ್ರಧಾನಮಂತ್ರಿ ಕಾರ್ಯಾಲಯ ತಮಿಳುನಾಡು ರಾಜಕೀಯದಲ್ಲಿ ಕೈಯಿಟ್ಟಿದೆ ಎನ್ನುವ ಸೂಚನೆ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾಗೆ ಗೊತ್ತಿದ್ದರೂ, ಅದು ಈ ಮಟ್ಟಿಗೆ ಫಲಿತಾಂಶ ನೀಡಬಹುದು ಎನ್ನುವ ಲೆಕ್ಕಾಚಾರದಲ್ಲಿ ಶಶಿಕಲಾ ಮೇಲ್ನೋಟಕ್ಕೆ ಎಡವಿದ್ದಾರೆ. (ಶಶಿಕಲಾಗೆ ಜ್ಯೋತಿಷಿ ಹೇಳಿದ್ದ ಭವಿಷ್ಯದ ಕತೆ)

ತಮಿಳುನಾಡಿನ ಇತಿಹಾಸದಲ್ಲಿ ಅತ್ಯಂತ ಸೌಮ್ಯ ರಾಜಕೀಯ ವ್ಯಕ್ತಿಯಲ್ಲೊಬ್ಬರು ಎಂದೇ ಬಿಂಬಿಸಲಾಗುವ ಪನ್ನೀರ್ ಸೆಲ್ವಂ, ಇಷ್ಟು ದಿನ ತೆರೆಯ ಹಿಂದೇ ಎಲ್ಲವನ್ನೂ ನಿಯಂತ್ರಿಸುತ್ತಿದ್ದ ಶಶಿಕಲಾಗೆ ಈ ಮಟ್ಟಿಗೆ ಸೈಡ್ ಹೊಡೆಯುತ್ತಾರೆಂದರೆ ಅದಕ್ಕೆ ಮೋದಿ ಅಭಯಹಸ್ತವೇ ಕಾರಣ ಎನ್ನುವುದು ತಮಿಳುನಾಡಿನಲ್ಲಿ ಬಹು ಚರ್ಚಿತ ವಿಷಯ.

ಮಂಗಳವಾರ (ಫೆ 14) ಸರ್ವೋಚ್ಚ ನ್ಯಾಯಾಲಯದ ತೀರ್ಪು ಪ್ರಕಟವಾಗುತ್ತಿದ್ದಂತೇ, ತಮಿಳುನಾಡು ಬೀದಿ ಬೀದಿಯಲ್ಲಿ ಅಮ್ಮನಿಗೆ ಜೈ, ಪನ್ನೀರ್ ಸೆಲ್ವಂಗೆ ಜೈ ಎನ್ನುವ ಹರ್ಷೋದ್ಗಾರದ ನಡುವೆ ಮೋದಿಗೆ ಜೈ ಎನ್ನುವ ಜೈಕಾರಕ್ಕೇನೂ ಕಮ್ಮಿಯಿರಲಿಲ್ಲ.

ತಮಿಳುನಾಡಿನಲ್ಲಿ ಸದ್ಯ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಪ್ರಧಾನಿ ಮೋದಿ ಅಣತಿಯಂತೇ ನಡೆಯುತ್ತಿದೆ ಎನ್ನುವುದು ಅಲ್ಲಿನ ಬಹುತೇಕ ಜನರ ಅಭಿಪ್ರಾಯ, ಜೊತೆಗೆ ಶಶಿಕಲಾಗೆ ಜೈಲಾಗಿರುವುದಕ್ಕೆ ಸಂಭ್ರಮ ಪಟ್ಟವರು ಬಹುಸಂಖ್ಯಾತರು ಎನ್ನುವುದು ವಾಸ್ತವತೆ.

ತನಗೆ ಜೈಲಾಗಲಿದೆ ಎನ್ನುವುದರ ವಾಸನೆ ಅರಿತಂತಿದ್ದ ಶಶಿಕಲಾ, ಅದಕ್ಕೂ ಮುನ್ನ ತನ್ನ ಆಪ್ತರೊಬ್ಬರನ್ನು ಸಿಎಂ ಹುದ್ದೆಗೆ ನೇಮಿಸಿ ಪರಪ್ಪನ ಅಗ್ರಹಾರ ಜೈಲು ಸೇರುವ ಲೆಕ್ಕಾಚಾರ ಹಾಕಿಕೊಂಡಿದ್ದರು ಎನ್ನುವುದು ಸುಪ್ರೀಂ ತೀರ್ಪಿನ ನಂತರ ಜನರು ಆಡಿಕೊಳ್ಳುತ್ತಿರುವ ಮಾತು. ಸೋಲಾಗಲಿದೆ ಎಂದು ಗ್ರಹಿಸಿದ್ದ ಶಶಿಕಲಾ, ಮುಂದೆ ಓದಿ..

 ಇಬ್ಬರು ಕೇಂದ್ರದ ನಾಯಕರ ಮಧ್ಯಪ್ರವೇಶ

ಇಬ್ಬರು ಕೇಂದ್ರದ ನಾಯಕರ ಮಧ್ಯಪ್ರವೇಶ

ಇಬ್ಬರು ಕೇಂದ್ರದ ಬಿಜೆಪಿ ನಾಯಕರು ಎಐಎಡಿಎಂಕೆ ಬಿಕ್ಕಟ್ಟಿಗೆ ಕಾರಣ ಎನ್ನುವ ಮಾತನ್ನು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಪುನರುಚ್ಚಿಸಿದ್ದಾರೆ. ನಾಯಕರ ಹೆಸರನ್ನು ಬಹಿರಂಗ ಪಡಿಸದ ಸ್ವಾಮಿ, ಶಶಿಕಲಾಗೆ ರಾಜ್ಯಪಾಲರು ಬಹುಮತ ಸಾಬೀತು ಪಡಿಸಲು ಅವಕಾಶ ನೀಡಬೇಕಿತ್ತು ಎಂದು ಒತ್ತಿ ಒತ್ತಿ ಹೇಳಿದ್ದರು.

 ಒಂದು ದಿನವಾದರೂ ಸಿಎಂ ಆಗಬೇಕೆನ್ನುವ ಆಸೆ

ಒಂದು ದಿನವಾದರೂ ಸಿಎಂ ಆಗಬೇಕೆನ್ನುವ ಆಸೆ

' ವಿ ಕೆ ಶಶಿಕಲಾ, ಮಾಜಿ ಮುಖ್ಯಮಂತ್ರಿಗಳು, ತಮಿಳುನಾಡು' ಹೀಗೆ ಒಂದು ದಿನದ ಮಟ್ಟಿಗಾದರೂ ಮುಖ್ಯಮಂತ್ರಿಯಾಗಿ ತನ್ನ ಹೆಸರಿನ ಜೊತೆ ಮಾಜಿ ಸಿಎಂ ಇರಬೇಕು ಎನ್ನುವುದು ಶಶಿಕಲಾ ನಟರಾಜನ್ ಮಹದಾಸೆಯಾಗಿತ್ತು ಎನ್ನುವುದು ತಮಿಳುನಾಡು ಜನರು ಆಡಿಕೊಳ್ಳುತ್ತಿರುವ ಮಾತು.

 ತಮಿಳುನಾಡು ರಾಜ್ಯಪಾಲರ ನಡೆ

ತಮಿಳುನಾಡು ರಾಜ್ಯಪಾಲರ ನಡೆ

ಸರಕಾರ ರಚಿಸಲು ಅವಕಾಶ ನೀಡಬೇಕೆಂದು ಶಶಿಕಲಾ ಪದೇ ಪದೇ ಒತ್ತಾಯಿಸಿದ್ದರೂ, ದೆಹಲಿಯಲ್ಲಿ ಬೀಡುಬಿಟ್ಟಿದ್ದ ರಾಜ್ಯಪಾಲ ವಿದ್ಯಾಸಾಗರ್, ಎರಡ್ಮೂರು ದಿನದ ನಂತರ ಚೆನ್ನೈಗೆ ಬಂದಿದ್ದರು. ನಂತರ ರಾಜ್ಯಪಾಲರಿಗೆ ಶಶಿಕಲಾ ಮನವಿ ಸಲ್ಲಿಸಿದರೂ, ರಾಜ್ಯಪಾಲರು ಇದಕ್ಕೆ ಸ್ಪಂದಿಸಲಿಲ್ಲ. ಆಗಲೇ, ಶಶಿಗೆ ಸದ್ಯದ ಪರಿಸ್ಥಿತಿಯಲ್ಲಿ ನಾನು ಸಿಎಂ ಆಗಲಾರೆ ಎನ್ನುವ ವಾಸನೆ ಬಂದಿತ್ತು.

 ಸುಪ್ರೀಂ ಆದೇಶದ ನಂತರ ತೀರ್ಮಾನ

ಸುಪ್ರೀಂ ಆದೇಶದ ನಂತರ ತೀರ್ಮಾನ

ಸರ್ವೋಚ್ಚ ನ್ಯಾಯಾಲಯದ ಆದೇಶ ಬಂದ ನಂತರ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎನ್ನುವ ನಿರ್ಧಾರಕ್ಕೆ ರಾಜ್ಯಪಾಲರು ಬಂದ ನಂತರ, ಒಂದು ದಿನದ ಮಟ್ಟಿಗಾದರೂ ಸಿಎಂ ಆಗಬೇಕು ಎನ್ನುವ ಶಶಿಕಲಾ ಆಸೆಗೆ
ಭಾರೀ ಪೆಟ್ಟು ಬಿತ್ತು.

 ಮಹಿಳೆಯರಿಗೆ ರಾಜಕೀಯ ಕಷ್ಟ

ಮಹಿಳೆಯರಿಗೆ ರಾಜಕೀಯ ಕಷ್ಟ

ಭಾರತದಲ್ಲಿ ಮಹಿಳೆಯರು ರಾಜಕೀಯ ರಂಗದಲ್ಲಿ ನೆಲೆಕಾಣುವುದು ಬಹಳ ಕಷ್ಟ ಎನ್ನುವ ಮಾತನ್ನು ಶಶಿಕಲಾ ಆಡಿದ್ದರು. ಒಂದೊಂದೇ ಜನಪ್ರತಿನಿಧಿಗಳು ಶಶಿಕಲಾ ಕ್ಯಾಂಪಿನಿಂದ ಹೊರಬರುತ್ತಿದ್ದದ್ದು ಜೊತೆಗೆ ರಾಜ್ಯಪಾಲರ ವಿಳಂಬ ನೀತಿಯನ್ನು ಉಲ್ಲೇಖಿಸಿ ಶಶಿಕಲಾ ಈ ರೀತಿ ಹೇಳಿದ್ದರು.

 ಆಯಕಟ್ಟಿನ ಹುದ್ದೆಗೆ ಎಲ್ಲಾ ಶಶಿಕಲಾ ಆಪ್ತರು

ಆಯಕಟ್ಟಿನ ಹುದ್ದೆಗೆ ಎಲ್ಲಾ ಶಶಿಕಲಾ ಆಪ್ತರು

ಜೈಲು ಖಚಿತ, ಸೋಲು ನಿಶ್ಚಿತ ಎನ್ನುವುದನ್ನು ಅರಿತಿರುವ ಶಶಿಕಲಾ, ಆಯಕಟ್ಟಿನ ಜಾಗಕ್ಕೆ ತನ್ನವರನ್ನೇ ನೇಮಿಸಿದ್ದಾರೆ. ಸಿಎಂ ಅಭ್ಯರ್ಥಿಯಾಗಿ ಪಳನಿಸ್ವಾಮಿ, ಟಿಟಿವಿ ದಿನಕರನ್ ಅವರನ್ನು ಪಕ್ಷದ ಉಪಪ್ರಧಾನ ಕಾರ್ಯದರ್ಶಿಯಾಗಿ, ವೆಂಕಟೇಶನ್ ಅವರನ್ನು ಪಕ್ಷದ ಪ್ರಮುಖ ಹುದ್ದೆಗೆ ಶಶಿಕಲಾ ನೇಮಿಸಿದ್ದಾರೆ. ದಿನಕರನ್ ಮತ್ತು ವೆಂಕಟೇಶನ್ ಇಬ್ಬರನ್ನೂ ಜಯಾ ಪಕ್ಷದಿಂದ ಉಚ್ಚಾಟಿಸಿದ್ದರು.

 ರಣತಂತ್ರ ರೂಪಿಸಲೇ ಇಲ್ಲ

ರಣತಂತ್ರ ರೂಪಿಸಲೇ ಇಲ್ಲ

ಸುಪ್ರೀಂಕೋರ್ಟಿನಲ್ಲಿ ಅಕ್ರಮ ಆಸ್ತಿಗಳಿಕೆ ಪ್ರಕರಣದ ತೀರ್ಪು ಬರುತ್ತದೆ ಎನ್ನುವುದನ್ನು ಅರಿತಿದ್ದರೂ, ಆ ಬಗ್ಗೆ ಕಾರ್ಯತಂತ್ರ ರೂಪಿಸುವ ಬದಲು, ಶಶಿಕಲಾ ರಿಸಾರ್ಟಿನಲ್ಲಿ ಶಾಸಕರನ್ನು ನಿಯಂತ್ರಿಸುತ್ತಿದ್ದದ್ದು, ನನಗಿಲ್ಲದ ಸಿಎಂ ಹುದ್ದೆ ಪನ್ನೀರ್ ಸೆಲ್ವಂಗೂ ಸಿಗಬಾರದು ಎನ್ನುವ ನಿರ್ಧಾರಕ್ಕೆ ಬಂದಂತೆ ಇತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Is AIADMK General Secretary Sasikala Natarajan had a clue of what Supreme Court will give the verdict and Prime Minister Office game plan on party crisis.
Please Wait while comments are loading...