ಸರ್ದಾರ್ ಪಟೇಲರಿಗೆ ಮೊದಲ ಭಾರತರತ್ನ ಲಭಿಸಬೇಕಿತ್ತು: ಅಮಿತ್ ಶಾ

Posted By:
Subscribe to Oneindia Kannada

ಕಾಂಗ್ರಾ(ಹಿಮಾಚಲ ಪ್ರದೇಶ), ಅಕ್ಟೋಬರ್ 31: " ನಿಜ ಹೇಳಬೇಕೆಂದರೆ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ಸರ್ದಾರ್ ವಲ್ಲಭಭಾಯ್ ಪಟೇಲ್ ಆಗಬೇಕಿತ್ತು" ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದರು.

ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ಅವರಿಗೆ ಟ್ವಿಟ್ಟಿಗರ ನಮನ

ಹಿಮಾಚಲ ಪ್ರದೇಶದ ಕಾಂಗ್ರಾ ಎಂಬಲ್ಲಿ ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಭಾರತ ರತ್ನ ಈ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ಪ್ರಜೆ ಇವರೇ ಆಗಬೇಕಿತ್ತು. ಸರ್ದಾರ್ ಪಟೇಲ್ ಗಿಂತ ಈ ಪ್ರಶಸ್ತಿಗೆ ಸಮರ್ಥರು ಇನ್ಯಾರಿರಲು ಸಾಧ್ಯ ಎಂದು ಅವರು ಪ್ರಶ್ನಿಸಿದರು.

Sardar Patel should have been first recipient of Bharat Ratna: Amit Shah

ಸರ್ದಾರ್ ಪಟೇಲ್ ಅವರ 142 ನೇ ಜನ್ಮದಿನವಾದ ಇಂದು(ಅ.31) ಸ್ವತಂತ್ರ್ಯ ಭಾರತಕ್ಕೆ ಉಕ್ಕಿನ ಮನುಷ್ಯ ಪಟೇಲ್ ನೀಡಿದ ಕೊಡುಗೆಯನ್ನು ಅವರು ಸ್ಮರಿಸಿದರು. ಭಾರತವನ್ನು ಮುನ್ನೂರಕ್ಕೂ ಹೆಚ್ಚು ಪ್ರಾಂತಗಳನ್ನಾಗಿ ವಿಭಜಿಸಿದ್ದ ಬ್ರಿಟಿಷರಿಗೆ, ಈ ಎಲ್ಲವನ್ನೂ ಒಗ್ಗೂಡಿಸಿ ಒಗ್ಗಟ್ಟಿನ ಭಾರತದ ಪರಿಕಲ್ಪನೆಯನ್ನು ತೋರಿಸಿದ ಕೀರ್ತಿ ಪಟೇಲ್ ಅವರಿಗೆ ಸಲ್ಲುತ್ತದೆಂದು ಅವರು ಶ್ಲಾಘಿಸಿದರು.

ಈ ಸವಿನೆನಪಿಗಾಗಿ ಅವರ ಹುಟ್ಟಿನ ದಿನವಾದ ಅಕ್ಟೋಬರ್ 31 ಅನ್ನು ಇಡೀ ದೇಶವೂ ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bharatiya Janata Party (BJP) President Amit Shah on Monday said that Sardar Vallabhbhai Patel should have been the first recipient of Bharat Ratna- country's highest civilians award.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ