Same Sex Marriage Case Update: ಸಲಿಂಗ ವಿವಾಹ ಪ್ರಕರಣ ವಿಚಾರಣೆಗೆ ಹೊಸ ಸಂವಿಧಾನ ಪೀಠ ರಚನೆ
ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾದ ಅರ್ಜಿಗಳ ಸರಣಿಯನ್ನು ಆಲಿಸಲು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಹೊಸ ಸಂವಿಧಾನ ಪೀಠವನ್ನು ರಚಿಸುವುದಾಗಿ ಸುಪ್ರೀಂ ಕೋರ್ಟ್ ಏಪ್ರಿಲ್ 15 ರಂದು ಘೋಷಿಸಿದೆ. ಈ ಪೀಠದಲ್ಲಿ ಸಂಜಯ್ ಕಿಶನ್ ಕೌಲ್, ಎಸ್. ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿ.ಎಸ್. ನರಸಿಂಹ ನಾಲ್ವರು ಸಹಾಯಕ ನ್ಯಾಯಾಧೀಶರು ಇರಲಿದ್ದಾರೆ.
ಏಪ್ರಿಲ್ 18ರಿಂದ ವಿಚಾರಣೆ ಆರಂಭವಾಗಲಿದ್ದು, ನೇರ ಪ್ರಸಾರವಾಗುವ ನಿರೀಕ್ಷೆಯಿದೆ. ಹಿಂದಿನ ವಿಚಾರಣೆಯಲ್ಲಿ ಮುಖ್ಯ ನ್ಯಾಯಾಧೀಶರು ಸಲಿಂಗ ಒಕ್ಕೂಟಗಳು ಭಾರತೀಯ ಸಾಮಾಜಿಕ ನೀತಿಯ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬ ಸರ್ಕಾರದ ಆತಂಕದ ಬಗ್ಗೆ ಕಾಳಜಿ ವಹಿಸಿದ್ದರು. ಅಂತಹ ಸಂಬಂಧವು ಮಕ್ಕಳ ಮೇಲೆ ಬೀರುವ ಮಾನಸಿಕ ಪ್ರಭಾವದ ಬಗ್ಗೆ ಕೇಂದ್ರವು ಆತಂಕ ವ್ಯಕ್ತಪಡಿಸಿದೆ.

ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಸುಪ್ರೀಕೋರ್ಟ್ಗೆ ಸಲ್ಲಿಸಲಾದ ಅರ್ಜಿಗಳ ವಿರುದ್ಧ ವಾದ ಮಂಡಿಸಿದ ಕೇಂದ್ರ ಸರ್ಕಾರ ಈ ರೀತಿಯ ವ್ಯವಸ್ಥೆಗೆ ಅನುಮತಿ ನೀಡಿದಲ್ಲಿ ಭಾರತೀಯ ಕುಟುಂಬ ವ್ಯವಸ್ಥೆಗೆ ಧಕ್ಕೆ ಬರಲಿದೆ. ವಿವಾಹ ಪರಿಕಲ್ಪನೆಯೇ ಅರ್ಥ ಕಳೆದುಕೊಳ್ಳಲಿದೆ ಎಂದು ಪ್ರಬಲ ವಾದ ಮಂಡಿಸಿತು.
ಮದುವೆ ಎಂಬುದು ವಿರುದ್ಧ ಲಿಂಗದ ಇಬ್ಬರು ವ್ಯಕ್ತಿಗಳ ನಡುವಿನ ಹೊಂದಾಣಿಕೆಯನ್ನು ಸೂಚಿಸುತ್ತದೆ. ಈ ಕಲ್ಪನೆಗೆ ಕೋರ್ಟ್‌ಗೆ ಹೊಸ ವ್ಯಾಖ್ಯಾನದಿಂದ ತೊಂದರೆಗೊಳಗಾಗಬಾರದು ಅಥವಾ ದುರ್ಬಲಗೊಳಿಸಬಾರದು. ಮದುವೆಗೆ ಸಂಬಂಧಿಸಿದ ಎಲ್ಲಾ ವೈಯಕ್ತಿ ಮತ್ತು ಶಾಸನಬದ್ಧ ಕಾನೂನುಗಳು ಪುರುಷ ಮತ್ತು ಮಹಿಳೆಯ ನಡುವಿನ ಸಂಬಂಧವನ್ನು ಗುರುತಿಸುತ್ತವೆ ಎಂದು ಸರ್ಕಾರ ವಾದಿಸಿತ್ತು.
ಕಾನೂನು ರಚನೆ ಶಾಸಕಾಂಗಕ್ಕೆ ಬಿಡಬೇಕು. ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಬೇಕೇ ಬೇಡವೇ ಎಂಬುದನ್ನು ಶಾಸಕಾಂಗಕ್ಕೆ ಬಿಡಬೇಕು. ಸಮಾಜ ಮತ್ತು ಮಕ್ಕಳ ಮೇಲೆ ಸಾಮಾಜಿಕ, ಮಾನಸಿಕ ಮತ್ತು ಇತರ ಪರಿಣಾಮಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಬೇಕು. ಶಾಸಕಾಂಗ ನಿರ್ಧಾರ ತೆಗೆದುಕೊಳ್ಳುವಾಗ ಕಾನೂನು ಬದ್ಧ ಹಿತಾಸಕ್ತಿಗಳನ್ನು ಪರಿಗಣಿಸಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಸಲಿಂಗ ವ್ಯಕ್ತಿಗಳ ಲೈಂಗಿಕ ಸಂಬಂಧ ಹೊಂದುವುದು, ಸಹಜೀವನ ನಡೆಸುವುದು ಅಪರಾಧವಲ್ಲದಿದ್ದರೂ, ಅದು ಪತಿ, ಪತ್ನಿ ಮತ್ತು ಮಕ್ಕಳನ್ನು ಒಳಗೊಂಡ ಭಾರತೀಯ ಕುಟುಂಬ ಪರಿಕಲ್ಪನೆಯೊಂದಿಗೆ ಹೋಲಿಸಲಾಗುವುದಿಲ್ಲ. ಇದು ಜೈವಿಕ ಜನಿಸಿದ ಮಕ್ಕಳು ಕುಟುಂಬ ವ್ಯವಸ್ಥೆಯ ಆಧಾರ, ಪುರುಷ ತಂದೆ ಮತ್ತು ಮಹಿಳೆ ತಾಯಿಯಾಗಿ ಅವರನ್ನು ಷೋಷಿಸಬೇಕು ಎಂದು ಕೇಂದ್ರ ಸರ್ಕಾರ ತನ್ನ ಅಫಿಡವಿಟ್‌ನಲ್ಲಿ ಸಮರ್ಥಿಸಿಕೊಂಡಿದೆ.
ಸಲಿಂಗ ವಿವಾಹಕ್ಕೆ ಅನುಮತಿ ನೀಡದಿರುವುದು ಸಂವಿಧಾನದಲ್ಲಿನ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಂತಾಗುವುದಿಲ್ಲ. ಭಿನ್ನಲಿಂಗೀಯ ವಿವಾಹಗಳಿಗೆ ಸಮಾಜದಲ್ಲಿ ಫ್ರೋತ್ಸಾಹವಿದೆ. ಆದರೆ, ಸಲಿಂಗ ವಿವಾಹದಲ್ಲಿ ಸಾಮಾಜಿಕ ಸ್ಥಿರತೆ ಇರುವುದಿಲ್ಲ. ಹೀಗಾಗಿ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಅನಿವಾರ್ಯವಾಗುವುದಿಲ್ಲ ಎಂದು ಸರ್ಕಾರ ವಾದಿಸಿತು.
ಸಲಿಂಗ ವಿವಾಹವನ್ನು ಪರಿಗಣಿಸದೇ ಇರುವುದು ಲಿಂಗ ತಾರತಮ್ಮ ಮಾಡಿದಂತಾಗುವುದಿಲ್ಲ. ಭಿನ್ನ ಲಿಂಗಿಗಳು ಮಾತ್ರ ವೈವಾಹಿಕ ಜೀವನದ ಅಡಿಪಾಯವಾಗಿದ್ದಾರೆ. ಸಲಿಂಗಗಳು ಕುಟುಂಬ ವ್ಯವಸ್ಥೆಯ ವಿರುದ್ಧವಾಗಿದ್ದಾರೆ. ಅವರ ಸಹಜೀವನ ಸಾಮಾಜಿಕ ಸ್ವಾಸ್ಥ್ಯಕ್ಕೆ ತಕ್ಕುದಲ್ಲ. ಭಿನ್ನಲಿಂಗೀಯ ವಿವಾಹದಂತಹ ಸ್ಥಾನಮಾನವನ್ನು ಬೇರೆ ಯಾವುದೇ ರೀತಿಯ ಸಹಜೀವನವು ಸರಿ ಹೊಂದುವುದಿಲ್ಲ ಎಂದು ಸರ್ಕಾರ ಸುಪ್ರೀಕೋರ್ಟ್‌ಗೆ ತಿಳಿಸಿತು.
ಸರ್ಕಾರದ ವಾದದ ಬಳಿಕ, ಸಲಿಂಗ ಸಂಬಂಧದಲ್ಲಿ ಒಟ್ಟಿಗೆ ವಾಸಿಸುವ ವ್ಯಕ್ತಿಗಳನ್ನು ಭಾರತೀಯ ಕುಟುಂಬದ ಪರಿಕಲ್ಪನೆಯೊಂದಿಗೆ ಹೋಲಿಸಲಾಗುವುದಿಲ್ಲ ಎಂದು ಹೇಳಿತು. ಕುಟುಂಬ ವ್ಯವಸ್ಥೆ ಪತಿ, ಪತ್ನಿ ಮತ್ತು ಜನಸಿದ ಮಕ್ಕಳ ಒಕ್ಕೂಟವಾಗಿದೆ ಎಂದು ಅಭಿಪ್ರಾಯಪಟ್ಟ ಕೋರ್ಟ್, ಸಲಿಂಗ ವಿವಾಹವನ್ನು ಪ್ರತಿಪಾದಿಸುವ ಅರ್ಜಿಗಳನ್ನು ಐವರು ನ್ಯಾಯಾಧೀಶರನ್ನು ಒಳಗೊಂಡ ಸಂವಿಧಾನ ಪೀಠದ ಮುಂದೆ ವಿಚಾರಣೆ ನಡೆಸಬೇಕು ಎಂದು ಪ್ರಕರಣವನ್ನು ವರ್ಗಾಯಿಸಿತು. ಏಪ್ರಿಲ್ 18ರಿಂದ ಸಾಂವಿಧಾನಿಕ ಪೀಠದ ಮುಂದೆ ಪ್ರಕರಣದ ವಿಚಾರಣೆ ನಡೆಯಲಿದೆ.












Click it and Unblock the Notifications