ವಿಜಯ ದಶಮಿ ಭಾಷಣ: ಮೋದಿಗೆ ಭಾಗವತ್ ಸಲಹೆ

ನಾಗ್ಪುರ, ಅ.22: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ತಮ್ಮ ವಿಜಯ ದಶಮಿ ಭಾಷಣದಲ್ಲಿ ಮೋದಿ ಸರ್ಕಾರಕ್ಕೆ ಕಿವಿಮಾತು ಹೇಳಿದ್ದಾರೆ. ರೈತರು, ಕಾರ್ಮಿಕರು, ಕಲಾವಿದರು ಹಾಗೂ ಸಹಕಾರಿ ಕ್ಷೇತ್ರದ ಬಗ್ಗೆ ಹೆಚ್ಚಿನ ಗಮನ ಹರಿಸಿ ಎಂದು ಸಲಹೆ ನೀಡಿದ್ದಾರೆ.

ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಮೋಹನ್ ಭಾಗವತ್ ಅವರು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕಾರ್ಯ ವೈಖರಿಯನ್ನು ಶ್ಲಾಘಿಸಿದರು. ಭಾರತದ ನಾಗರೀಕರಿಗೆ ಭರವಸೆ ಮೂಡಿಸಿದ್ದೀರಿ, ಭಾರತ ವಿಶ್ವನಾಯಕನಾಗುವತ್ತ ದಾಪುಗಾಲಿರಿಸಿದೆ. ನಿಮ್ಮ ಯೋಜನೆಗಳು ಜನಪಯೋಗಿಯಾಗಿದೆ ಎಂದಿದ್ದಾರೆ. [ಭಾರತ ಹಿಂದೂಗಳ ರಾಷ್ಟ್ರ: ಭಾಗ್ವತ್ ಹೇಳಿಕೆಗೆ ವಿಎಚ್ ಪಿ ಬೆಂಬಲ]

 RSS Chief Mohan Bhagwat to PM Modi

ಮುದ್ರಾ ಬ್ಯಾಂಕ್, ಜನಧನ್, ಅನಿಲ ಗ್ಯಾಸ್ ಸಬ್ಸಿಡಿ, ಕ್ಲೀನ್ ಇಂಡಿಯಾ, ಸ್ಕಿಲ್ ಇಂಡಿಯಾ, ಡಿಜಿಟಲ್ ಇಂಡಿಯಾ ಯೋಜನೆಗಳು ದೇಶದ ಜನತೆಯಲ್ಲಿ ಧನಾತ್ಮಕ ಭಾವನೆ ಬೆಳೆಸುತ್ತಿದೆ ಎಂದರು.

ಭಾರತ ಕೆಲವು ನೆರೆ ದೇಶಗಳಿಂದ ಅಪಾಯ ಎದುರಿಸುತ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಎಚ್ಚರಿಕೆಯಿಂದ ಇರಬೇಕಿದೆ ಎಂದು ಪಾಕಿಸ್ತಾನಕ್ಕೆ ಪರೋಕ್ಷ ಎಚ್ಚರಿಕೆ ನೀಡಿದರು.

ಭಾರತೀಯರೆಲ್ಲರೂ ದೇಶಕ್ಕಾಗಿ ಹೋರಾಡಬೇಕು ಎಂದು ಕರೆ ನೀಡಿರುವ ಭಾಗವತ್, ಭಾರತದ 125 ಕೋಟಿ ಜನತೆ ಇಂದು ಹೊಸ ಭರವಸೆಯೊಂದಿಗೆ ಭವಿಷ್ಯದ ನಿರೀಕ್ಷೆಯಲ್ಲಿದ್ದಾರೆ. ಜನತೆಯ ಆಶೋತ್ತರಗಳಂತೆ ನಾವು ಕರ್ತವ್ಯ ನಿರ್ವಹಿಸಬೇಕಾಗಿದೆ.

ಇದಕ್ಕೆ ಸರ್ವರ ಸಹಕಾರ ಅಗತ್ಯವಾಗಿದೆ. ಭಾರತಕ್ಕೆ ನೆರೆಹೊರೆಯ ಕೆಲ ದೇಶಗಳಿಂದ ಗಂಡಾಂತರವಿದೆ. ಭಾರತ ಸರ್ಕಾರ ಅತ್ಯಂತ ಜಾಗರೂಕತೆಯಿಂದ ವ್ಯವಹರಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ

ಆರ್.ಎಸ್.ಎಸ್ ಸಮಾವೇಶದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೇರಿದಂತೆ ಪ್ರಮುಖರು ಭಾಗವಹಿಸಿದ್ದಾರೆ. ಮೋಹನ್ ಭಾಗವತ್ ಅವರ ಭಾಷಣದ ಪೂರ್ಣ ಪಾಠ ಇಲ್ಲಿದೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+