18 ವರ್ಷದಿಂದ ಪೊಲೀಸರ ರಕ್ಷಣೆಯಲ್ಲಿದ್ದ ಕಾಶ್ಮೀರದ ಪತ್ರಕರ್ತನ ಹತ್ಯೆ
ಶ್ರೀನಗರ್, ಜೂನ್ 14: 'ರೈಸಿಂಗ್ ಕಾಶ್ಮೀರ್'ನ ಸಂಪಾದಕ ಶುಜಾತ್ ಬುಖಾರಿ ಅವರನ್ನು ಗುರುವಾರ ಹತ್ಯೆ ಮಾಡಲಾಗಿದೆ. ಜಮ್ಮು- ಕಾಶ್ಮೀರದ ಶ್ರೀನಗರ್ ನಲ್ಲಿರುವ ಪ್ರೆಸ್ ಕಾಲೊನಿಯಲ್ಲಿರುವ ಬುಖಾರಿ ಕಚೇರಿಯ ಹೊರ ಭಾಗದಲ್ಲಿ ದಾಳಿ ನಡೆದ ನಂತರ ಅವರು ಮೃತಪಟ್ಟಿದ್ದಾರೆ. ಹಲವು ಗುಂಡುಗಳು ಶುಜಾತ್ ಬುಖಾರಿ ಅವರ ದೇಹವನ್ನು ಹೊಕ್ಕಿದ್ದವು.
ಈ ಘಟನೆಯಲ್ಲಿ ಶುಜಾತ್ ರ ಜತೆಗಿದ್ದ ಇಬ್ಬರು ರಕ್ಷಣಾ ಸಿಬ್ಬಂದಿಗೆ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಹಳ ಕಾಲದ ನಂತರ ಕಾಶ್ಮೀರದಲ್ಲಿ ಪತ್ರಕರ್ತರೊಬ್ಬರ ಮೇಲೆ ನಡೆಯುತ್ತಿರುವ ದಾಳಿ ಇದಾಗಿದೆ. ಅಂದಹಾಗೆ ಶುಜಾತ್ ಬುಖಾರಿ ಅವರ ಮೇಲೆ ಹದಿನೆಂಟು ವರ್ಷದ ಹಿಂದೆ ದಾಳಿ ನಡೆದಿತ್ತು.

ಆ ಘಟನೆ ನಂತರ ಅವರಿಗೆ ರಕ್ಷಣೆ ಒದಗಿಸಲಾಗಿತ್ತು. "ಆತ ನಮ್ಮ ನೆಚ್ಚಿನ ಸ್ನೇಹಿತ. ಎರಡು ದಶಕಗಳಿಗಿಂತ ಹೆಚ್ಚು ಕಾಲ ಜತೆಯಾಗಿ ಕಾರ್ಯ ನಿರ್ವಹಿಸಿದವರು ನಾವು. ಇದೀಗ ಅವರ ಹತ್ಯೆಯಾಗಿದೆ. ಈ ಸುದ್ದಿ ನಮಗೆ ನಿಜಕ್ಕೂ ಆಘಾತಕಾರಿ" ಎಂದು ಶುಜಾತ್ ಬುಖಾರಿ ಅವರ ಬಹು ಕಾಲದ ಒಡನಾಡಿ ಹಾಗೂ ಸ್ನೇಹಿತರೊಬ್ಬರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.












Click it and Unblock the Notifications