ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೋಟು ನಿಷೇಧ ಗೊಂದಲ: ಟ್ವಿಟ್ಟಿಗರಿಂದ RBIಗೆ ಮರು ನಾಮಕರಣ

5ಸಾವಿರ ರೂಪಾಯಿಗಳಿಗೂ ಹೆಚ್ಚಿನ ನೋಟುಗಳನ್ನು ಜಮೆ ಮಾಡುವವರನ್ನು ಬ್ಯಾಂಕ್ ಪ್ರಶ್ನಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ ಮೇಲೆ ಆರ್ಬಿಐ ನಿರ್ಧಾರ ಟ್ವಿಟ್ಟರ್ ನಲ್ಲಿ ವ್ಯಾಪಕ ಟೀಕೆಗೊಳಗಾಗುತ್ತಿದೆ.

By Balaraj
|
Google Oneindia Kannada News

ನವೆಂಬರ್ ಎಂಟರಂದು ಪ್ರಧಾನಿ ಮೋದಿ ಎರಡು ದೊಡ್ಡ ನೋಟಿನ ನಿಷೇಧದ ತೀರ್ಮಾನ ಪ್ರಕಟಿಸಿದ ನಂತರ, ಕೇಂದ್ರ ಸರಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ನಿರ್ಧಾರದಲ್ಲಿ ಹಲವು ಬದಲಾವಣೆಗಳನ್ನು ಮಾಡುತ್ತಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.

ಡಿಸೆಂಬರ್ 30ರ ತನಕ ಒಂದು ಬಾರಿ ಮಾತ್ರ ನಿಷೇಧಿತ ನೋಟನ್ನು ಬ್ಯಾಂಕಿಗೆ ಜಮಾ ಮಾಡಬಹುದು ಎನ್ನುವ ರಿಸರ್ವ್ ಬ್ಯಾಂಕಿನ ನಿರ್ಧಾರ ವ್ಯಾಪಕ ಟೀಕೆಗೆ ಒಳಗಾಗಿತ್ತು. ಖುದ್ದು ಬ್ಯಾಂಕ್ ಸಿಬ್ಬಂದಿಗಳೇ ವಿರೋಧ ವ್ಯಕ್ತ ಪಡಿಸಿದ್ದರು. (ಆರ್ಬಿಐನಿಂದ ಡೆಪಾಸಿಟ್ ಮಿತಿ ಆದೇಶ ವಾಪಸ್)

ಈ ನಿರ್ಧಾರದಿಂದ ಈಗ ಹಿಂದಕ್ಕೆ ಸರಿದಿರುವ ಆರ್ಬಿಐ, ಐದು ಸಾವಿರ ರೂಪಾಯಿಗಳಿಗೂ ಹೆಚ್ಚಿನ ನೋಟುಗಳನ್ನು ಜಮೆ ಮಾಡುವವರನ್ನು ಬ್ಯಾಂಕ್ ಪ್ರಶ್ನಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಕೇಂದ್ರ ಸರಕಾರದ ಅಣತಿಯಂತೆ ರಿಸರ್ವ್ ಬ್ಯಾಂಕ್ ಅಪನಗದೀಕರಣದ ವಿಚಾರದಲ್ಲಿ ಬದಲಾವಣೆ ಮತ್ತು ಹೊಸ ಹೊಸ ಕಾನೂನು ತರುತ್ತಿರುವುದಕ್ಕೆ, ಟ್ವಿಟ್ಟಿಗರು ಸಾಮಾಜಿಕ ತಾಣದಲ್ಲಿ ಸಖತ್ ಲೇವಡಿ ಮಾಡುತ್ತಿದ್ದಾರೆ.

ಜೊತೆಗೆ, ಟ್ವಿಟ್ಟರ್ ನಲ್ಲಿ ರಿಸರ್ವ್ ಬ್ಯಾಂಕಿಗೆ ಹೊಸ ಹೆಸರು ನಾಮಕರಣ ಮಾಡಲಾಗಿದೆ. ಮುಂದೆ ಓದಿ..

ಆರ್ಬಿಐ

ರಿಸರ್ವ್ ಬ್ಯಾಂಕ್ ಅನ್ನು ರಿವರ್ಸ್ ಬ್ಯಾಂಕ್ ಆಫ್ ಇಂಡಿಯಾ ಎಂದು ಕರೆಯಬಹುದು.

ಬ್ಯಾಂಕಿಂಗ್ ವ್ಯವಸ್ಥೆ

ಬ್ಯಾಂಕಿಂಗ್ ವ್ಯವಸ್ಥೆ

ಎರಡು ಬ್ಯಾಂಕಿಗೆ ದುಡ್ಡು ಜಮಾ ಮಾಡಲು ಹೋಗಿದ್ದೆ, ಬ್ಯಾಂಕ್ ಸಿಬ್ಬಂದಿ ಬ್ಯಾಂಕ್ ಬಿಟ್ಟು ಬೇರೆಲ್ಲಾದರೂ ಕೆಲಸ ಕೊಡಿ ಎಂದು ಮನವಿ ಮಾಡಿದರು.

ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್

ಬುಧವಾರ (ಡಿ21) ರಿಸರ್ವ್ ಬ್ಯಾಂಕ್ ತನ್ನ ನಿರ್ಬಂಧ ಸಡಿಲಿಸಿದ ನಂತರ ಅಮುಲ್ ಕಂಪೆನಿಯ ಜಾಹೀರಾತು.

ಪ್ರಶಾಂತ್ ಭೂಷಣ್

ರಿಸರ್ವ್ ಬ್ಯಾಂಕ್ ತಲೆಯಿಲ್ಲದ ಚಿಕನ್ ತರ ನಡೆದುಕೊಳ್ಳುತ್ತಿದೆ.

ಹಾಸ್ಯಾಸ್ಪದ ಟ್ವೀಟ್

ಹಾಸ್ಯಾಸ್ಪದ ಟ್ವೀಟ್

ನಾನು ಬಾತ್ ರೂಂನಲ್ಲಿದ್ದೆ, ಕಳೆದ ಐದು ನಿಮಿಷದಲ್ಲಿ ಆರ್ಬಿಐ ಏನಾದರೂ ಬದಲಾವಣೆ ತಂದಿದೆಯೇ ಎಂದು ಯಾರಾದರೂ ನಮಗೆ ತಿಳಿಸುವಿರಾ ಎನ್ನುವ ಹಾಸ್ಯಾಸ್ಪದ ಟ್ವೀಟ್ (ಚಿತ್ರದಲ್ಲಿ : ಆರ್ಬಿಐ ಗವರ್ನರ್)

ಭಕ್ತರಿಗೆ ಕಷ್ಟದ ಸಮಯ

ನಿನ್ನೆ ಆರ್ಬಿಐ ನಿರ್ಧಾರವನ್ನು ಬೆಂಬಲಿಸಿದ್ದ ಭಕ್ತರು ಈಗ ಮತ್ತೆ ಆರ್ಬಿಐ ಪರ ಮಾತಾನಾಡುತ್ತಿದ್ದಾರೆ.

English summary
Reverse Bank of India’: Twitter reacts to RBI’s U-turn on cash deposits. People on social media are having a laugh after the RBI’s latest announcement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X