ವನ್ಯಜೀವಿಗಳನ್ನು ಗುರುತಿಸಲು ಆರ್ಟಿಫಿಷಿಯಲ್ ಇಂಟಲಿಜೆನ್ಸ್
ಇದೊಂದು ಒಳ್ಳೆ ಸುದ್ದಿ. ಸಂಶೋಧಕರು ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟಲಿಜೆನ್ಸ್) ಅಭಿವೃದ್ಧಿಪಡಿಸಿದ್ದು, ಆ ವ್ಯವಸ್ಥೆ ಮೂಲಕ ಕ್ಯಾಮೆರಾ ಟ್ರ್ಯಾಪ್ಸ್ ನಲ್ಲಿ ಸೆರೆಯಾದ ಫೋಟೋ ಸಹಾಯದಿಂದ ವನ್ಯಜೀವಿಗಳನ್ನು ತಾನಾಗಿಯೇ ಗುರುತಿಸಿ, ಲೆಕ್ಕ ಹಾಕಿ ಆ ಬಗ್ಗೆ ವಿವರಣೆ ನೀಡಲಿದೆ. ಇದನ್ನು ಮೋಷನ್- ಸೆನ್ಸಾರ್ ಕ್ಯಾಮೆರಾ ಅಂತ ಕರೆಯುತ್ತಾರೆ.
ಪ್ರೊಸಿಡಿಂಗ್ಸ್ ಆಫ್ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ನಲ್ಲಿ ಸಂಶೋಧನೆಯ ಮಾಹಿತಿಯನ್ನು ಪ್ರಕಟಿಸಲಾಗಿದೆ. ಈ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಸಹಾಯದಿಂದ ಶೇ 99.3ರಷ್ಟು ವನ್ಯಜೀವಿಗಳ ಫೋಟೋಗಳನ್ನು ಶೇ 96.6ರಷ್ಟು ನಿಖರವಾಗಿ ಗುರುತಿಸಬಹುದಾಗಿದೆ. ಸ್ವಯಂಸೇವಕರು ತಂಡಗಳಾಗಿ ಕೆಲಸ ಮಾಡುವಾಗ ದೊರೆಯುವ ಯಶಸ್ಸಿಗೆ ಇದು ಸರಿಸಮ.
"ಈ ತಂತ್ರಜ್ಞಾನದ ಸಹಾಯದಿಂದ ನಿಖರವಾಗಿ, ಕಡಿಮೆ ಖರ್ಚಿನಲ್ಲಿ ಮತ್ತು ಯಾವುದೇ ಅನುಮಾನಕ್ಕೆ ಎಡೆ ಇಲ್ಲದಂತೆ ವನ್ಯಜೀವಿಗಳ ಮಾಹಿತಿ ಸಂಗ್ರಹಿಸಬಹುದು. ಇದರಿಂದ ವಿಜ್ಞಾನದ ಬಹಳ ಶಾಖೆಗಳಿಗೆ ಅನುಕೂಲವಾಗುತ್ತವೆ" ಎಂದು ಈ ಸಂಶೋಧನೆಯ ಭಾಗವಾಗಿರುವ ಸಹಾಯಕ ಪ್ರೊಫೆಸರ್ ವೊಬ್ಬರು ಹೇಳಿದ್ದಾರೆ.

ಡೀಪ್ ನ್ಯೂರಲ್ ನೆಟ್ ವರ್ಕ್ಸ್ ಎಂಬುದು ಸಮಗ್ರವಾಗಿ ಅಭಿವೃದ್ಧಿ ಪಡಿಸಿರುವ ಬುದ್ಧಿಮತ್ತೆ. ಪ್ರಾಣಿಗಳ ಮೆದುಳು ಹೇಗೆ ನೋಡುತ್ತದೆ ಮತ್ತು ಜಗತ್ತನ್ನು ಹೇಗೆ ಅರ್ಥ ಮಾಡಿಕೊಳ್ಳುತ್ತದೆ ಎಂಬುದನ್ನು ಅರ್ಥೈಸಿಕೊಳ್ಳುತ್ತದೆ. ಈ ಹೊಸ ಆಳವಾದ ಅಧ್ಯಯನ ತಂತ್ರಜ್ಞಾನದಿಂದ ಫೋಟೋಗಳನ್ನು ಹೆಸರಿಸಲು ಅಪಾರ ಸಮಯ ಎತ್ತಿಡುತ್ತಿದ್ದ ಸ್ವಯಂಸೇವಕರ ಶ್ರಮ ಉಳಿತಾಯ ಆಗುತ್ತದೆ ಎಂದು ಸಂಶೋಧಕರು ಅಭಿಪ್ರಾಯ ಪಡುತ್ತಾರೆ.
ವನ್ಯಪ್ರಾಣಿಗಳ ಪರಿಸರ ವಿಜ್ಞಾನದಲ್ಲಿ ಇದೊಂದು ಬದಲಾವಣೆಯ ಪರ್ವ. ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಸಾಧನೆಯನ್ನು ಈ ಡೀಪ್ ಲರ್ನಿಂಗ್ ನಿಂದ ಮಾಡಲು ಸಾಧ್ಯವಾಗಿದೆ ಎಂದು ಮಿನಿಸೋಟಾ ವಿ.ವಿ.ಯ ಕ್ರೇಗ್ ಪ್ಯಾಕರ್ ಹೇಳಿದ್ದಾರೆ.












Click it and Unblock the Notifications