ದೇಶಾದ್ಯಂತ ರಾಮ ನಾಮ ಜಪ, ಪಾನಕ-ಮಜ್ಜಿಗೆ

Written By:
Subscribe to Oneindia Kannada

ಬೆಂಗಳೂರು, ಏಪ್ರಿಲ್, 15: ದೇಶದಲ್ಲೆಡೆ ಶುಕ್ರವಾರ ಶ್ರೀರಾಮನ ಆರಾಧನೆ. ಬೆಂಗಳೂರು ಸೇರಿದಂತೆ ಎಲ್ಲ ಮಹಾನಗರದ ದೇವಾಲಯಗಳಲ್ಲಿ, ಪುಣ್ಯ ಕ್ಷೇತ್ರಗಳಲ್ಲಿ ವಿಶೇಷ ಪೂಜೆ ನಡೆದವು.

ಹರಿದ್ವಾರದ ಗಂಗಾನದಿಯಲ್ಲಿ ಪುಣ್ಯ ಸ್ನಾನ ಮಾಡಿದ ಭಕ್ತರು ಪುಣ್ಯ ಪ್ರಾಪ್ತಿ ಮಾಡಿಕೊಂಡರು. ಬೆಂಗಳೂರಿನ ದೇವಾಲಯಲ್ಲಿ ಪಾನಕ ಸೇವೆ ಏರ್ಪಡಿಸಲಾಗಿತ್ತು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಉಪ ರಾಷ್ಟ್ರಪತಿ ಹಮೀದ್‌ ಅನ್ಸಾರಿ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಜನತೆಗೆ ಹಬ್ಬದ ಶುಭಾಶಯ ಹೇಳಿದ್ದಾರೆ.[ಹಬ್ಬಗಳಿಗೆ ಮುನ್ನುಡಿ, ನಿಸರ್ಗದ ಮರುಹುಟ್ಟು ಈ ಯುಗಾದಿ]

festival

ಬೆಂಗಳೂರಿನ ಗಾಳಿ ಆಂಜನೇಯ, ರಾಗಿಗುಡ್ಡದ ಆಂಜನೇಯ, ಮಹಾಲಕ್ಷ್ಮಿ ಲೇಔಟ್ ದೊಡ್ಡಾಂಜನೇಯ, ರಾಜಾಜಿನಗರ ಶ್ರೀರಾಮ ಮಂದಿರ ಇಸ್ಕಾನ್ ಸೇರಿದಂತೆ ನಗರದ ಇನ್ನಿತರ ಎಲ್ಲ ದೇವಾಲಯಗಳಲ್ಲಿ ರಾಮನವಮಿ ಪೂಜೆ ನೆರವೇರಿತು.

ಇದಲ್ಲದೆ ವಿವಿಧ ಸಂಘಸಂಸ್ಥೆಗಳು ರಾಮನಪೂಜೆ ಮಾಡಿ ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸಿದ್ದು ವಿಶೇಷವಾಗಿತ್ತು. ಹರಿದ್ವಾರದಲ್ಲಿ ಪುಣ್ಯ ಸ್ನಾನ, ಮಕ್ಕಳ ಶ್ರೀರಾಮನ ಅವತಾರ, ವಿಶೇಷ ಪೂಜೆ ಎಲ್ಲ ಚಿತ್ರಗಳನ್ನು ನೋಡಿಕೊಂಡು ಬನ್ನಿ... (ಪಿಟಿಐ ಚಿತ್ರಗಳು)

-
-
-
-

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
President Pranab Mukherjee, Vice-President Hamid Ansari and Prime Minister Narendra Modi have greeted the people on the occasion of Ram Naavmi . Ram Navami celebrated across the country with religious fervour and gaiety
Please Wait while comments are loading...