ರಾಷ್ಟ್ರಪತಿ ಚುನಾವಣೆ: ಸಮಾಜವಾದಿ ಪಕ್ಷದ ನಿಲುವೇನು?
ಲಕ್ನೊ, ಜೂನ್ 22: ಎನ್ ಡಿಎ ತನ್ನ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ರಾಮ್ ನಾಥ್ ಕೋವಿಂದ್ ಅವರನ್ನು ಆಯ್ಕೆ ಮಾಡುತ್ತಿದ್ದಂತೆಯೇ ರಾಜಕೀಯ ಪಾಳೆಯದಲ್ಲಿ ಚಟುವಟಿಕೆ ಗರಿಗೆದರಿದೆ.
ಕೋವಿಂದ್ ಎದುರು ಮತ್ತೊಬ್ಬ ದಲಿತ ಅಭ್ಯರ್ಥಿಯನ್ನು ನಿಲ್ಲಿಸುವ ಬಗ್ಗೆ ಕಾಂಗ್ರೆಸ್ ಸೇರಿದಂತೆ ಕೆಲವು ವಿಪಕ್ಷಗಳು ಯೋಚಿಸುತ್ತಿದ್ದರೆ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಎನ್ ಡಿಎ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ. ಆದರೆ ಸಮಾಜವಾದಿ ಪಕ್ಷದ ನಿಲುವೇನು ಎಂಬುದು ಈಗಲೂ ಪ್ರಶ್ನಾರ್ಥಕವಾಗಿಯೇ ಇದೆ.

ರಾಮ್ ನಾಥ್ ಕೋವಿಂದ್ ರಾಷ್ಟ್ರಪತಿ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿ, ಆದರೆ ನಮ್ಮ ನಿಲುವನ್ನು ನಾವು ಜೂನ್ 22 ಗುರುವಾರದಂದು ತಿಳಿಸುತ್ತೇವೆ ಎಂದು ಸಮಾಜವಾದಿ ಪಕ್ಷದ ಸಂಸದ ನರೇಶ್ ಅಗರ್ವಾಲ್ ಹೇಳಿದ್ದಾರೆ.
ರಾಷ್ಟ್ರಪತಿ ಅಭ್ಯರ್ಥಿಯಾಗುವವನು ಕಳಂಕ ಮುಕ್ತನಾಗಿರಬೇಕು, ರಾಮ್ ನಾಥ್ ಕೋವಿಂದ್ ರಾಜಕೀಯ ಕ್ಷೇತ್ರದಲ್ಲಿ ಯಾವುದೇ ಕಳಂಕ ಹೊಂದಿಲ್ಲದ ವ್ಯಕ್ತಿ ಎಂದು ಅವರನ್ನು ಹೊಗಳಿರುವ ಎಸ್ಪಿ, ಎನ್ ಡಿಎ ಅಭ್ಯರ್ಥಿಗೆ ತನ್ನ ಬೆಂಬಲ ನೀಡುವ ಎಲ್ಲಾ ಸೂಚನೆಗಳೂ ಕಾಣಿಸುತ್ತಿವೆ.











Click it and Unblock the Notifications