Ram Mandir Inauguration: ರಾಮ ಮಂದಿರ ಉದ್ಘಾಟನೆ ದಿನ ಇದೆ 2 ಶುಭ ಯೋಗ...
ಅಯೋಧ್ಯೆ ಜನವರಿ 9: ಇದೇ ತಿಂಗಳು ಅಯೋಧ್ಯೆಯಲ್ಲಿ ರಾಮಮಂದಿರವನ್ನು ಉದ್ಘಾಟಿಸಲಾಗುತ್ತಿದೆ. ಈ ನಡುವೆ ಜನರಲ್ಲಿ ಪ್ರಶ್ನೆಯೊಂದು ಉದ್ಬವಿಸಿದೆ. ರಾಮಮಂದಿರವನ್ನು ಜನವರಿ 22ರಂದೇ ಯಾಕೆ ಉದ್ಘಾಟಿಸಲಾಗುತ್ತಿದೆ? ಎನ್ನುವ ಪ್ರಶ್ನೆ. ಇದಕ್ಕೆ ಉತ್ತರವನ್ನು ಈ ತೀರ್ಥ ಕ್ಷೇತ್ರದ ಟ್ರಸ್ಟ್ ಖಜಾಂಚಿ ಅವರು ನೋಡಿದ್ದಾರೆ.
ಜನವರಿ 22ರಂದು ರಾಮಮಂದಿರ ನಿರ್ಮಾಣಕ್ಕಾಗಿ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈ ದಿನಕ್ಕಾಗಿ ಇಡೀ ದೇಶವೇ ಕಾದು ಕುಳಿತಿದೆ. ರಾಮಮಂದಿರದಲ್ಲಿ ರಾಮಲಲ್ಲಾನ ಮೂರ್ತಿ ಪ್ರತಿಷ್ಠಾಪನೆಯನ್ನು ಕಣ್ತುಂಬಿಕೊಳ್ಳಲು ದೇಶ ಹಾಗೂ ವಿದೇಶದಲ್ಲಿನ ವಿವಿಧ ಗಣ್ಯರನ್ನು ಆಹ್ವಾನಿಸಲಾಗಿದೆ.

ಜನವರಿ 22ರಂದು 12.20ಕ್ಕೆ ಪ್ರಾಣ ಪ್ರತಿಷ್ಠೆ ನಿಗದಿಯಾಗಿದ್ದು, ಆ ದಿನವೇ ಆಯ್ಕೆ ಮಾಡಲಾಗಿರುವ ಕುರಿತು ಹಲವರಿಂದ ಪ್ರಶ್ನೆಗಳು ಕೇಳಿ ಬಂದ ಹಿನ್ನಲೆಯಲ್ಲಿ ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಖಜಾಂಚಿ ಮಹಾಂತ ಗೋವಿಂದ್ ದೇವ್ ಗಿರಿ ಅವರು ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಮಹಾಂತ ಗೋವಿಂದ್ ದೇವ್ ಗಿರಿ ಮಾತನಾಡಿ, ''ಹಿಂದೂ ಪಾಂಚಾಂಗದಂತೆ ಜನವರಿ 22ರ ಸೋಮವಾರ ಅಮೃತ ಸಿದ್ಧಿ ಯೋಗ ಮತ್ತು ಸರ್ವತ್ರ ಸಿದ್ಧಿ ಯೋಗ ಮುಹೂರ್ತವಿದೆ. ಕಾಶಿಯ ಪಾರಂಪರಿಕ ವಿದ್ವಾಂಸರು, ಜ್ಯೋತಿಷ್ಯರು ಹವನಗಳಿಗೆ ಈ ಮುಹೂರ್ತಗಳು ಹೆಚ್ಚು ಫಲಪ್ರದಾಯಕ ಎಂದು ನಿರ್ಧರಿಸಿದ್ದಾರೆ. ದೇಶದ ಕಲ್ಯಾಣಕ್ಕೆ ಇದು ಪೂರಕವಾಗಲಿದೆ. ಹಾಗಾಗಿ ಜನವರಿ 22 ಅನ್ನು ಆಯ್ಕೆ ಮಾಡಿದ್ದೇವೆ'' ಎಂದು ತಿಳಿಸಿದ್ದಾರೆ.
ಜನವರಿ 22ರಂದು ಪ್ರಾಣ ಪ್ರತಿಷ್ಠಾಪನ ದಿನದಂದು ಛತ್ತಿಸ್‌ಗಢದಲ್ಲಿ ಮದ್ಯಪಾನ ನಿರ್ಬಂಧ ದಿನ ಎಂದು ಸಿಎಂ ವಿಷ್ಣುದೇವ್ ಸಾಯ್ ಘೋಷಿಸಿದ್ದಾರೆ. ನಮ್ಮ ಆಡಳಿತಕ್ಕೆ ರಾಮನೇ ಆದರ್ಶ. ಛತ್ತಿಸ್‌ಗಢವು ಧಾಮದೇವರ ತಾಯಿಯ ಕಡೆಯ ಅಜ್ಜ-ಅಜ್ಜಿಯ ನಾಡು. ಈ ಪುಣ್ಯದ ನೆಲದಲ್ಲಿ ಮದ್ಯಪಾನ ನಿರ್ಬಂಧಿಸಿದ್ದೇವೆ ಎಂದು ಸಾಯ್ ಹೇಳಿದ್ದಾರೆ.

ಅಯೋಧ್ಯೆಯಲ್ಲಿ ಜನವರಿ 22ರಂದು ಶ್ರೀರಾಮ ಪಟ್ಟಾಭಿಷೇಕಕ್ಕೆ ಸಿದ್ಧತೆಗಳು ಅಂತಿಮ ಹಂತದಲ್ಲಿವೆ. ಗರ್ಭಗುಡಿಯಿಂದ ನೆಲ ಅಂತಸ್ತಿನವರೆಗೆ ಎಲ್ಲ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ದೇವಾಲಯದ ಅಗಾಧ ವೈಭವ ಮತ್ತು ಸೌಂದರ್ಯವನ್ನು ನೋಡಿ ಜನ ಮಂತ್ರಮುಗ್ಧರಾಗುತ್ತಿದ್ದಾರೆ. ದೇವಾಲಯದ ಗೋಡೆಗಳ ಮೇಲೆ ಶ್ರೀರಾಮನಿಗೆ ಸಂಬಂಧಿಸಿದ ದೃಶ್ಯಗಳನ್ನು ಕೆತ್ತಲಾಗಿದೆ. ಈ ಭವ್ಯವಾದ ಶ್ರೀರಾಮನ ದೇವಸ್ಥಾನವನ್ನು ಕಣ್ತುಂಬಿಕೊಳ್ಳಲು ದೇಶ ವಿದೇಶಗಳಿಂದಲೂ ಜನ ಆಗಮಿಸುತ್ತಿದ್ದಾರೆ.
ಅಯೋಧ್ಯೆಯಲ್ಲಿ ಟೈಟ್ ಸೆಕ್ಯೂಟಿ
ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಸಮಾರಂಭದ ಬಗ್ಗೆ ಇಡೀ ಅಯೋಧ್ಯೆ ಭದ್ರತೆಯ ಅಡಿಯಲ್ಲಿರಲಿದೆ. ರಾಮನಗರಿಯ ವಿವಿಧ ಪ್ರದೇಶಗಳಲ್ಲಿ ಏಳು ದೊಡ್ಡ ಭದ್ರತಾ ಏಜೆನ್ಸಿಗಳು ತನಿಖೆಯಲ್ಲಿ ತೊಡಗಿವೆ. ಇದಲ್ಲದೇ ಜಿಲ್ಲೆಯ ಗಡಿ ಭಾಗದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಒಳಬರುವ ಮತ್ತು ಹೊರಹೋಗುವ ವಾಹನಗಳ ತೀವ್ರ ಶೋಧದ ನಂತರವೇ ಪ್ರವೇಶ ನೀಡಲಾಗುತ್ತಿದೆ.
ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ನಿರ್ಮಿಸಲಾಗಿರುವ ಹೋಟೆಲ್‌ಗಳು, ಲಾಡ್ಜ್‌ಗಳು ಮತ್ತು ಧರ್ಮಶಾಲೆಗಳ ಬಗ್ಗೆಯೂ ತಂಡಗಳು ತನಿಖೆ ನಡೆಸುತ್ತಿವೆ. ಇಲ್ಲಿ ತಂಗಿರುವ ಮತ್ತು ಬುಕ್ಕಿಂಗ್ ಮಾಡುವವರನ್ನೂ ಪರಿಶೀಲಿಸಲಾಗುತ್ತಿದೆ. ಅದೇ ಸಮಯದಲ್ಲಿ, ರಾಮ ಮಂದಿರದ ಭದ್ರತೆಗಾಗಿ ಎತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಕಣ್ಗಾವಲು ಕೊಠಡಿಗಳನ್ನು ನಿರ್ಮಿಸಲಾಗುವುದು. ಇವುಗಳ ಮೂಲಕ ಚೌಧರಿ ಚರಣ್ ಸಿಂಗ್ ಘಾಟ್ ನಿಂದ ಗುಪ್ತರ್ ಘಾಟ್ ವರೆಗೆ ಎಲ್ಲರ ಮೇಲೆಯೂ ನಿಗಾ ಇಡಲಾಗುವುದು.












Click it and Unblock the Notifications