ಕೇಂದ್ರ ಸಚಿವ ರಾಜೀವ್ ಪ್ರತಾಪ್ ರೂಡಿ ರಾಜೀನಾಮೆ
ನವದೆಹಲಿ, ಆಗಸ್ಟ್ 31: ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಖಾತೆ ಹೊಂದಿದ್ದ ಕೇಂದ್ರ ಸಚಿವ ರಾಜೀವ್ ಪ್ರತಾಪ್ ರೂಡಿ ತಮ್ಮ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡಿದ್ದಾರೆ. ಸಂಪುಟ ಪುನಾರಚನೆ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಿದ್ದಾರೆ. ಇನ್ನೂ ಇಬ್ಬರಿಂದ ಮೂವರು ಸಚಿವರು ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಪಕ್ಷ ಸಂಘಟನೆಗೆ ತೆರಳುವುದಾಗಿ ರೂಡಿ ತಿಳಿಸಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಗೂ ಮುನ್ನ ನಡೆಯುವ ಪ್ರಮುಖ ಸಂಪುಟ ಪುನಾರಚನೆ ಈ ಬಾರಿ ಆಗಲಿದೆ. ಕಳೆದ ಕೆಲವು ದಿನಗಳಿಂದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇದೇ ವಿಚಾರವಾಗಿ ಹಲವು ಸಭೆಗಳನ್ನು ನಡೆಸಿದ್ದಾರೆ.

ಜಪಾನ್ ನಲ್ಲಿ ಮುಂದಿನ ತಿಂಗಳ ನಡೆಯುವ ರಕ್ಷಣಾ ಸಚಿವರ ಸಭೆಯ ಹೊತ್ತಿಗೆ ಅರುಣ್ ಜೇಟ್ಲಿ ತಮ್ಮ ಬಳಿ ಇರುವ ಎರಡು ಖಾತೆ ಪೈಕಿ ಒಂದನ್ನು ಬಿಡಬೇಕಾಗುತ್ತದೆ. ಸದ್ಯಕ್ಕೆ ಅವರು ಹಣಕಾಸು ಹಾಗೂ ರಕ್ಷಣಾ ಖಾತೆ ನಿರ್ವಹಿಸುತ್ತಿದ್ದಾರೆ. ಹಲವರ ನಿರೀಕ್ಷೆ ಪ್ರಕಾರ ರೈಲ್ವೆ ಖಾತೆಯಲ್ಲಿ ಬದಲಾವಣೆ ಆಗಲಿದೆ.
ಗುಜರಾತ್ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಭೂಪೇಂದ್ರ ಯಾದವ್ ಗೆ ಸ್ಥಾನ ನೀಡಬೇಕಿದೆ. ಇನ್ನು ನಿತೀಶ್ ಕುಮಾರ್ ರ ಜೆಡಿಯುಗೆ ಕೇಂದ್ರದಲ್ಲಿ ಸ್ಥಾನ ನೀಡಬೇಕಿದೆ.












Click it and Unblock the Notifications