ಹೆಣ್ಣು ಮಕ್ಕಳ ನೇಮಕಾತಿ ವೇಳೆ ಎದೆಯಳತೆ ಮಾನದಂಡವು ಅತಿರೇಕದ ಕ್ರಮ: ಹೈಕೋರ್ಟ್

ಜೋಧಪುರ, ಆಗಸ್ಟ್ 17: ಸರ್ಕಾರಿ ನೇಮಕಾತಿ ಅಥವಾ ಯಾವುದೇ ಹುದ್ದೆಗಳ ನೇಮಕ ಪ್ರಕ್ರಿಯೆಯಲ್ಲಿ ಮಹಿಳಾ ಅಭ್ಯರ್ಥಿಗಳ ಎದೆಯಳೆಯತೆ ಮಾಡುವ ಕ್ರಮ ಅದು ಅವರ ಘನತೆಗೆ ಧಕ್ಕೆ ತರುತ್ತದೆ. ಇದು ಅತಿರೇಕದ ಕ್ರಮವಾಗಿದ್ದು, ಹೆಣ್ಣುಮಕ್ಕಳಿಗೆ ಮುಜುಗರವಾಗದಂತೆ ನೋಡಿಕೊಳ್ಳಿ ಎಂದು ಎಂದು ರಾಜಸ್ಥಾನ ಹೈಕೋರ್ಟ್‌ ಸೂಚಿಸಿದ ಆದೇಶ ಹೊರಡಿಸಿದೆ.

ಅರಣ್ಯ ಅಧಿಕಾರಿಗಳ ಹುದ್ದೆಗೆ ಇಲ್ಲವೇ ಇತರ ಹುದ್ದೆಗಳ ಭರ್ತಿ ಪ್ರಕ್ರಿಯೆಯಲ್ಲಿ ಮಹಿಳಾ ಅಭ್ಯರ್ಥಿಗಳ ಶ್ವಾಸಕೋಶ ಸಾಮರ್ಥ್ಯ ಮಾಪನಕ್ಕಾಗಿ ದೆಯಳತೆಯ ಮಾನದಂಡದ ಕ್ರಮವನ್ನು ರಾಜಸ್ಥಾನ ಹೈಕೋರ್ಟ್ ಸಹಿಸಿಕೊಂಡಿಲ್ಲ. ಇಂತಹ ಕ್ರಮ ಅತಿರೇಕದ ಜೊತೆಗೆ ನಿರಂಕುಶವಾದದ್ದು ಎಂದು ಹೇಳಿದೆ. ಮುಂದೆ ಮಹಿಳೆಯರ ಘನತೆಗೆ ಕುಂದು ತರದಂತೆ ನೋಡಿಕೊಳ್ಳಿ ಎಂದು ಹೇಳಿದೆ.

Rajasthan High Court Outrages To Women Candidates Breast Size Criteria In Any Job recruitment

ಉದ್ಯೋಗ ನೇಮಕಾತಿ ಪ್ರಕ್ರಿಯೆಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಮುಜಗರವಾಗದಂತೆ ತಡೆಯಲು ಹಾಗೂ ಆಪೇಕ್ಷೆಯಂತೆ ಶ್ವಾಸಕೋಶ ಸಾಮರ್ಥ್ಯ ಮಾಪನ ಮಾಡಲು ಬೇರೊಂದು ಮಾರ್ಗ ವಿಧಾನವನ್ನು ಅನುಸರಿಸುವ ಕುರಿತು ತಜ್ಞರ ಅಭಿಪ್ರಾಯ ಕೇಳುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಅರಣ್ಯ ಇಲಾಖೆ ಕ್ರಮದ ವಿರುದ್ಧ ಹೈಕೋರ್ಟ್‌ಗೆ ಅರ್ಜಿ

ಅರಣ್ಯ ಇಲಾಖೆ ವ್ಯಾಪ್ತಿಯಡಿ ನೇಮಕಾತಿಯೊಂದರಲ್ಲಿ ದೈಹಿಕವಾಗಿ ಎಲ್ಲ ಅರ್ಹತೆ ಇದ್ದರೂ ಸಹಿತ ಎದೆಯಳತೆ ಮಾನದಂಡದ ಆಧಾರದಲ್ಲಿ ಅನರ್ಹಗೊಳಿಸಿದ ಕ್ರಮವನ್ನು ಪ್ರಶ್ನಿಸಿ ಮೂವರು ಮಹಿಳಾ ಅಭ್ಯರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ಕೈಗೊತ್ತಿಕೊಂಡ ನ್ಯಾಯಪೀಠ ಈ ಮೇಲಿನಂತೆ ಅಭಿಪ್ರಾಯಪಟ್ಟು ಆದೇಶ ಹೊರಡಿಸಿತು.

ಇನ್ನೂ ಅರಣ್ಯ ಇಲಾಖೆಯಲ್ಲಿ ಈಗಾಗಲೇ ನಡೆದ ನೇಮಕಾತಿ ಪ್ರಕ್ರಿಯೆಯಲ್ಲಿ ನ್ಯಾಯಪೀಠ ಮಧ್ಯಪ್ರವೇಶವನ್ನು ಬಯಸುತ್ತದೆ. ಅರಣ್ಯ ಇಲಾಖೆ ಮಾತ್ರವಲ್ಲದೇ ಯಾವ ಹುದ್ದೆಗಳ ನೇಮಕಾತಿ ಆದರೂ ಸಹ ಧಕ್ಕೆ ಉಂಟು ಮಾಡುವ ಈ ಕ್ರಮದ ಬಗ್ಗೆ ತಜ್ಞರ ಅಭಿಪ್ರಾಯ ಪಡೆಯಿರಿ, ಸಮಾಲೋಚಿಸಿ ಎಂದು ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+