Rain Alert: ಕೇರಳದಲ್ಲಿ ಭಾರೀ ಮಳೆ ಸಾಧ್ಯತೆ- ಕರ್ನಾಟಕದ ಈ ಜಿಲ್ಲೆಗಳಲ್ಲೂ ಮಳೆ ಮುನ್ಸೂಚನೆ, ವರದಿ, ವಿವರ
ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇದೇ ರೀತಿ ಕೊಡುಗು ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಐಎಂಡಿ ಹೇಳಿದೆ. ಉತ್ತರ ಒಳನಾಡಿನ ಅಲ್ಲಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂಬ ಮನ್ಸೂಚನೆಯನ್ನು ನೀಡಲಾಗಿದೆ.
ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಕೊಂಕಣ ಗೋವಾ, ತಮಿಳುನಾಡು, ಕರಾವಳಿ ಕರ್ನಾಟಕ ಮತ್ತು ಕೇರಳದಲ್ಲಿ ಪ್ರತ್ಯೇಕವಾದ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಕೇರಳದ 9 ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ. ಅಲಪ್ಪುಳ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ, ತ್ರಿಶೂರ್, ಮಲಪ್ಪುರಂ, ಕೋಝಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡುಗಳಲ್ಲಿ ಪ್ರತ್ಯೇಕವಾದ ಭಾರೀ ಮಳೆಯನ್ನು ನಿರೀಕ್ಷಿಸಬಹುದು ಎಂದು ಹವಾಮಾನ ಇಲಾಖೆ ಹೇಳಿದೆ.
ಪತ್ತನಂತಿಟ್ಟ, ಆಲಪ್ಪುಳ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ, ತ್ರಿಶೂರ್, ಮಲಪ್ಪುರಂ, ಕೋಝಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡುಗಳಿಗೆ ಶುಕ್ರವಾರ ಹಳದಿ ಎಚ್ಚರಿಕೆ ನೀಡಲಾಗಿದೆ. ಶನಿವಾರ ಎರ್ನಾಕುಲಂ, ಇಡುಕ್ಕಿ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಯಿಕ್ಕೋಡ್, ವಯನಾಡ್, ಕಣ್ಣೂರು ಮತ್ತು ಕಾಸರಗೋಡುಗಳಲ್ಲಿ ಭಾರೀ ಮಳೆಯಾಗಲಿದೆ. ಅಕ್ಟೋಬರ್ 1 ರಂದು ಎರ್ನಾಕುಲಂ, ಇಡುಕ್ಕಿ, ಕೋಝಿಕ್ಕೋಡ್ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಸೆಪ್ಟೆಂಬರ್ 28-29 ರಂದು ತಮಿಳುನಾಡಿನಲ್ಲಿ ಗುಡುಗು ಸಹಿತ ಪ್ರತ್ಯೇಕವಾದ ಮಳೆಯಾಗಲಿದೆ. ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 2 ರ ವರೆಗೆ ಕರಾವಳಿ ಕರ್ನಾಟಕದಲ್ಲಿ ಭಾರೀ ಮಳೆಯಾಗಲಿದೆ. ಸೆಪ್ಟೆಂಬರ್ 28ರಿಂದ 30 ರ ವರೆಗೆ ಕೇರಳ ಹಾಗೂ ಕರ್ನಾಕಟದ ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ಹಂಚಿಕೊಂಡಿದೆ.

ನಿನ್ನೆ ಕರ್ನಾಟಕದಲ್ಲಿ ಸುರಿದ ಮಳೆ ಪ್ರಮಾಣ
ಉತ್ತರ ಕನ್ನಡ: 84 ಮಿ.ಮೀ
ವಿಜಯಪುರ: 75.5 ಮಿ.ಮೀ
ಬೆಳಗಾವಿ: 74.5 ಮಿ.ಮೀ
ಉಡುಪಿ: 74.5 ಮಿ.ಮೀ
ಗದಗ: 61.5 ಮಿ.ಮೀ
ದಕ್ಷಿಣ ಕನ್ನಡ: 61 ಮಿ.ಮೀ
ಬಳ್ಳಾರಿ: 60 ಮಿ.ಮೀ
ರಾಯಚೂರು: 56 ಮಿ.ಮೀ
ಬಾಗಲಕೋಟೆ: 54.5 ಮಿ.ಮೀ
ಕೊಪ್ಪಳ: 54.5 ಮಿ.ಮೀ
ಬೀದರ್: 54 ಮಿ.ಮೀ
ಕಲಬುರಗಿ: 39 ಮಿ.ಮೀ
ಶಿವಮೊಗ್ಗ: 37.5 ಮಿ.ಮೀ
ಕೊಡಗು: 37 ಮಿ.ಮೀ
ಮೈಸೂರು: 30 ಮಿ.ಮೀ

ಹೆಚ್ಚು ಮಳೆ ಬಿದ್ದ ಪ್ರದೇಶಗಳು
ಕಲ್ಲಬ್ಬೆ, ಉತ್ತರ ಕನ್ನಡ: 84 ಮಿ.ಮೀ
ಮಜಾಲಿ, ಉತ್ತರ ಕನ್ನಡ: 83 ಮಿ.ಮೀ
ಕೋಟ್ಯಾಲ್, ಉತ್ತರ ಕನ್ನಡ: 75.5 ಮಿ.ಮೀ
ಚಂದಾವರ, ಉತ್ತರ ಕನ್ನಡ: 75.5 ಮಿ.ಮೀ
ಮೇಕಲಮರಡಿ, ಬೆಳಗಾವಿ: 74.5 ಮಿ.ಮೀ












Click it and Unblock the Notifications