Get Updates
Get notified of breaking news, exclusive insights, and must-see stories!

ರಾಹುಲ್ ಗಾಂಧಿ ಬರೆದ ಮತಗಳ್ಳತನದ ಕಟ್ಟುಕಥೆ; ಆಧಾರರಹಿತ ಆರೋಪ, ಸುಳ್ಳಿನ ಸರಮಾಲೆ ಬಯಲು

ಭಾರತದ ಈಗಿನ ರಾಜಕೀಯ ಬಯಲುರಂಗ ನಾಟಕಗಳಿಗೆ ಸಾಕ್ಷಿಯಾಗುತ್ತಿದೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ದೇಶದ ಚುನಾವಣಾ ವ್ಯವಸ್ಥೆಯು ಮುರಿದುಹೋಗಿದೆ, ಭ್ರಷ್ಟವಾಗಿದೆ ಮತ್ತು ಪ್ರತಿಪಕ್ಷಗಳಿಗೆ ಅನ್ಯಾಯವಾಗಿದೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಅವರ ಭಾಷಣಗಳು ಸುಳ್ಳು ಆರೋಪಗಳಿಂದ ಕೂಡಿದ್ದು, ಸಾರ್ವಜನಿಕರನ್ನು ಕೆರಳಿಸುವ ಗುರಿಯನ್ನು ಹೊಂದಿರುವುದು ಮೇಲ್ನೋಟಕ್ಕೆ ಎದ್ದುಕಾಣುತ್ತಿದೆ. ಆದರೆ ನೀವು ಸತ್ಯಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಅವರ ಅನೇಕ ಹೇಳಿಕೆಗಳು ಸುಳ್ಳು ಎಂಬುದು ನಿಮಗೆ ತಿಳಿಯುತ್ತದೆ.

rahul-gandhis-vote-chori-drama-no-evidence-no-credibility-just-noise

ದೇಶದಾದ್ಯಂತ ಇವಿಎಂಗಳು ದುರ್ಬಲವಾಗಿವೆ ಹಾಗೂ ಮತದಾರರ ಪಟ್ಟಿಗಳು ನಕಲಿ ಹೆಸರುಗಳಿಂದ ತುಂಬಿವೆ ಎಂದು ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. ಚುನಾವಣಾ ಆಯೋಗವು ನಿಷ್ಪಕ್ಷಪಾತವಾಗಿಲ್ಲ, ಬದಲಾಗಿ ಆಡಳಿತ ಪಕ್ಷದ ಕೈಗೊಂಬೆ ಎಂದೆಲ್ಲ ಹಲವು ತಿಂಗಳುಗಳಿಂದ ಜನರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತಿದ್ದಾರೆ. ಅವರ ಭಾಷಣಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ. ಇದು ಜನರನ್ನು ಭಾವನಾತ್ಮಕವಾಗಿ ಪ್ರಚೋದಿಸಲು ಮಾಡಿರುವ ಕೆಲಸವಾಗಿದೆ. ಆದರೆ ಸತ್ಯವನ್ನು ಕೂಲಂಕಷವಾಗಿ ಪರೀಕ್ಷಿಸಿದ ತಕ್ಷಣ ಅವರ ಮಾತುಗಳು ಸುಳ್ಳಾಗುತ್ತಿವೆ.

ವಿಶೇಷವಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಮತದಾರರ ಸಂಖ್ಯೆಯು ಅನುಮಾನಾಸ್ಪದ ಏರಿಕೆಯಾಗಿದೆ, ಮತಗಳ್ಳತನವಾಗಿದೆ ಎಂಬ ಹೇಳಿಕೆ ನೀಡುವ ಮೂಲಕ ಜನರ ಗಮನ ಸೆಳೆಯುವ ಪ್ರಯತ್ನವನ್ನು ರಾಹುಲ್‌ ಮಾಡಿದ್ದಾರೆ.

ಮಹಾರಾಷ್ಟ್ರದಲ್ಲಿ ಲೋಕಸಭಾ ಚುನಾವಣೆಗಳು ಮತ್ತು ವಿಧಾನಸಭಾ ಚುನಾವಣೆಗಳ ನಡುವೆ ನೋಂದಾಯಿತ ಮತದಾರರಲ್ಲಿ ಶೇ 4.4ರಷ್ಟು ಹೆಚ್ಚಳವನ್ನು ರಾಹುಲ್ ಗಾಂಧಿ ಪುರಾವೆಯಾಗಿ ತೋರಿಸಿದ್ದಾರೆ. ಆದರೆ, ಐತಿಹಾಸಿಕ ದಾಖಲೆಗಳೇ ಅವರ ಮಾತನ್ನು ಸುಳ್ಳಾಗಿಸುತ್ತಿವೆ. 2004ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅಡಿಯಲ್ಲಿ ಶೇ 4.7ರಷ್ಟು ಮತದಾರರು ಹೆಚ್ಚಳವಾಗಿದ್ದರು. 2009ರಲ್ಲಿ ಅದು ಶೇ 4.1ರಷ್ಟಾಗಿತ್ತು. ಅವರ ಸ್ವಂತ ಪಕ್ಷವು ಅಧಿಕಾರದಲ್ಲಿದ್ದಾಗಲೇ ಈ ಬೆಳವಣಿಗೆ ನಡೆದಿದೆ ಎಂಬುದನ್ನು ರಾಹುಲ್‌ ಮರೆತಿರುವುದು ವಿಪರ್ಯಾಸವೇ ಸರಿ.

rahul-gandhis-vote-chori-drama-no-evidence-no-credibility-just-noise

ಈ ಬೆಳವಣಿಗೆಯು ಮತದಾರರ ನಿರಂತರ ದಾಖಲಾತಿ, ಪರಿಶೀಲನೆ ಮತ್ತು ಕಾನೂನಿನಿಂದ ಕಡ್ಡಾಯಗೊಳಿಸಲಾದ ತಿದ್ದುಪಡಿಗಳ ಫಲಿತಾಂಶ ಎಂದು ಚುನಾವಣಾ ಅಧಿಕಾರಿಗಳೇ ವಿವರಿಸಿದ್ದಾರೆ. ಮಹಾರಾಷ್ಟ್ರದ ಪ್ರತಿಯೊಬ್ಬ ಕಾಂಗ್ರೆಸ್ ಬೂತ್ ಏಜೆಂಟ್ ಮತದಾನ ಪ್ರಕ್ರಿಯೆಯ ಕೊನೆಯಲ್ಲಿ ಫಾರ್ಮ್ 17ಸಿಗೆ ಸಹಿ ಹಾಕಿದ್ದಾರೆ. ಆ ಮೂಲಕ ಯಾವುದೇ ಆಕ್ಷೇಪಣೆ ವ್ಯಕ್ತಪಡಿಸದೆ ಮತ ಎಣಿಕೆಯನ್ನು ಪ್ರಮಾಣೀಕರಿಸಿದ್ದಾನೆ. ಆದರೆ, ಈಗ ರಾಹುಲ್‌ ಗಾಂಧಿ ಮಾಡುತ್ತಿರುವ ಆರೋಪವು ತಮ್ಮದೇ ಪಕ್ಷದ ಏಜೆಂಟ್‌ರನ್ನು ಅವಮಾನ ಮಾಡಿದಂತಿದೆ.

ಚುನಾವಣಾ ಫಲಿತಾಂಶಗಳನ್ನು ಪ್ರಶ್ನಿಸಲು ಅವರ ಪಕ್ಷದಿಂದ ಒಂದೇ ಒಂದು ಚುನಾವಣಾ ಅರ್ಜಿಯನ್ನು ಸಲ್ಲಿಸಿಲ್ಲ. ರಾಹುಲ್‌ ಗಾಂಧಿ ಅವರು ಹೇಳಿಕೊಂಡಂತೆ ಆ ಸಂಖ್ಯೆಗಳು ನಿಜವಾಗಿಯೂ ಅನುಮಾನಾಸ್ಪದವಾಗಿದ್ದರೆ, ನ್ಯಾಯಾಲಯದಲ್ಲಿ ಏಕೆ ಹೋರಾಟ ಮಾಡಲಿಲ್ಲ ಎಂಬ ಪ್ರಶ್ನೆ ಮುನ್ನೆಲೆಗೆ ಬರುತ್ತದೆ.

ಇನ್ನು ಕರ್ನಾಟಕದ ವಿಚಾರಕ್ಕೆ ಬಂದರೆ ಮತದಾರರ ಪಟ್ಟಿಯಲ್ಲಿ ಭ್ರಷ್ಟಾಚಾರದ ಪುರಾವೆಯಾಗಿ ರಾಹುಲ್‌ ಗಾಂಧಿ ಬೆಂಗಳೂರಿನ ಮಹದೇವಪುರ ಕ್ಷೇತ್ರವನ್ನು ಪ್ರತ್ಯೇಕವಾಗಿ ಉಲ್ಲೇಖಿಸಿದ್ದಾರೆ. ಆದರೆ ಅಂಕಿಅಂಶಗಳು ಬೇರೆ ಕಥೆಯನ್ನೇ ಹೇಳುತ್ತವೆ. ಬೆಂಗಳೂರು ಕೇಂದ್ರ ಲೋಕಸಭೆಯ ಹಲವಾರು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷ ಮುನ್ನೆಡೆ ಸಾಧಿಸಿದೆ. ಹಾಗಾಗಿ ರಾಹುಲ್‌ ಗಾಂಧಿ ಅವರ ಆರೋಪಗಳೇ ಗೊಂದಲಗಳಿಂದ ಕೂಡಿವೆ. ಕಾಂಗ್ರೆಸ್‌ನ ಭದ್ರಕೋಟೆ ಹಾಗೂ ಅಲ್ಪಸಂಖ್ಯಾತರ ಪ್ರಾಬಲ್ಯದ ಕ್ಷೇತ್ರಗಳಾಗಿರುವ ಶಿವಾಜಿ ನಗರ ಮತ್ತು ಚಾಮರಾಜಪೇಟೆಯಲ್ಲೇ ನಕಲಿ ಮತದಾರರ ನಮೂದುಗಳು, ಕಾಣೆಯಾದ ಮನೆ ಸಂಖ್ಯೆಗಳು ಮತ್ತು ಮತದಾನದಲ್ಲಿ ಏರಿಕೆಗಳನ್ನು ತೋರಿಸಿವೆ.

ಇನ್ನು ಮಹಾರಾಷ್ಟ್ರದ ಮಾಲೆಗಾಂವ್ ಸೆಂಟ್ರಲ್‌ನಲ್ಲಿ ಶೇ 90ಕ್ಕಿಂತ ಹೆಚ್ಚು ಅಲ್ಪಸಂಖ್ಯಾತ ಜನಸಂಖ್ಯೆಯನ್ನು ಹೊಂದಿರುವ ಕ್ಷೇತ್ರದಲ್ಲಿ 2024ರ ಮತದಾನವು ಶೇ 43.51ರಷ್ಟು ಹೆಚ್ಚಾಗಿದೆ. ಮತದಾರ ಪಟ್ಟಿಯಲ್ಲಿ 9700ಕ್ಕೂ ಹೆಚ್ಚು ಮತದಾರರಿಗೆ ಸಂಪೂರ್ಣ ವಿಳಾಸದ ವಿವರಗಳೇ ಇಲ್ಲ. ಇತರ ಐದು ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದರೂ, ಆ ಒಂದೇ ವಿಧಾನಸಭಾ ಕ್ಷೇತ್ರವು ಲೋಕಸಭಾ ಫಲಿತಾಂಶವನ್ನ ತಲೆಕೆಳಗಾಗಿಸಿತು. ಇಲ್ಲಿನ ಸಂಖ್ಯೆಗಳೇ ಒಂದು ಕಥೆ ಹೇಳುತ್ತವೆ. ಆದರೆ ರಾಹುಲ್‌ ಗಾಂಧಿ ಅದನ್ನು ಹೇಳಲು ಬಯಸುವುದಿಲ್ಲ.

ಈ ಆಯ್ದ ಚುನಾವಣಾ ಫಲಿತಾಂಶಗಳನ್ನು ರಾಹುಲ್‌ ಹೇಗೆ ಪರಿಗಣಿಸುತ್ತಾರೆ ಎಂಬುದನ್ನು ಒತ್ತಿ ಹೇಳುತ್ತದೆ. ಜಾರ್ಖಂಡ್ ಅಥವಾ ಜಮ್ಮು ಮತ್ತು ಕಾಶ್ಮೀರದಂತೆ ಕಾಂಗ್ರೆಸ್ ಗೆದ್ದಾಗ ಮತದಾನ ಪ್ರಕ್ರಿಯೆಯನ್ನು ನ್ಯಾಯಯುತ ಹಾಗೂ ಜನರ ಪವಿತ್ರ ಧ್ವನಿಯ ಫಲಿತಾಂಶವೆಂದು ಶ್ಲಾಘಿಸಲಾಗುತ್ತದೆ. ಅದೇ ಮಹಾರಾಷ್ಟ್ರ ಅಥವಾ ಹರಿಯಾಣದಲ್ಲಿ ಬಿಜೆಪಿ ಗೆದ್ದಾಗ ಇದೇ ಮತದಾನ ಪ್ರಕ್ರಿಯೆಯನ್ನು ಪ್ರಜಾಪ್ರಭುತ್ವದ ಕುಸಿತ ಎಂದು ಆರೋಪಿಸಲಾಗುತ್ತದೆ. ಪ್ರಜಾಪ್ರಭುತ್ವದ ಸ್ವಯಂ ಘೋಷಿತ ರಕ್ಷಕರು ಎನಿಸಿಕೊಂಡಿರುವ ರಾಹುಲ್‌ ಅವರು ದ್ವಂದ್ವ ನಿಲುವಿಗೆ ಇದೊಂದು ಉತ್ತಮ ಉದಾಹರಣೆ ಎಂದರೆ ತಪ್ಪಾಗಲಾರದು.

ರಾಹುಲ್‌ ಗಾಂಧಿಯವರ ಆರೋಪಗಳಿಗೆ ಚುನಾವಣಾ ಆಯೋಗ ಕೂಡ ಸವಾಲು ಹಾಕಿದೆ. ಇಂತಹ ಆರೋಪಗಳು ಜನತಾ ಪ್ರಾತಿನಿಧ್ಯ ಕಾಯ್ದೆಯಡಿಯಲ್ಲಿ ಅವರ ಹಕ್ಕುಗಳಿಗೆ ಕಾನೂನುಬದ್ಧ ಸ್ಥಾನಮಾನ ನೀಡುತ್ತವೆ ನಿಜ. ಆದರೆ ಆರೋಪಗಳು ಸುಳ್ಳು ಎಂದು ಸಾಬೀತಾದರೆ, ಭಾರತೀಯ ನ್ಯಾಯ ಸಂಹಿತೆಯಡಿ ಅವರಿಗೆ ಶಿಕ್ಷೆಯೂ ಆಗಬಹುದು. ಇದೇ ಕಾರಣಕ್ಕೆ ಕಾನೂನು ಬದ್ಧ ಹೋರಾಟವನ್ನು ರಾಹುಲ್‌ ಗಾಂಧಿ ಇಲ್ಲಿಯವರೆಗೆ ನಿರಾಕರಿಸಿದ್ದಾರೆ. ಬದಲಿಗೆ ರ‍್ಯಾಲಿಗಳು ಮತ್ತು ಸಾರ್ವಜನಿಕ ಹೋರಾಟಕ್ಕೆ ಆದ್ಯತೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನೋಡುವುದಾದರೆ, ರಾಹುಲ್‌ ಗಾಂಧಿ ಅವರು ಕಾನೂನುಬದ್ಧ ಹೋರಾಟಕ್ಕಿಂತ ರಾಜಕೀಯ ಲಾಭಕ್ಕಾಗಿ ನಡೆಸುವ ಹೋರಾಟಕ್ಕೆ ಮನ್ನಣೆ ನೀಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ.

ರಾಹುಲ್ ಅವರ ಪ್ರಚಾರವು ದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ತಮ್ಮ ಆರೋಪಗಳ ಮೂಲಕ ವಿದೇಶಗಳಲ್ಲಿ ವಿಜೃಂಭಿಸಲು ಅವರು ಆರಂಭಿಸಿದ್ದಾರೆ. ಭಾರತದ ಪ್ರಜಾಪ್ರಭುತ್ವದ ಬಗ್ಗೆ ಕೆಟ್ಟ ಅಭಿಪ್ರಾಯವನ್ನು ಮೂಡಿಸುವ ಅಭ್ಯಾಸವನ್ನು ಅವರು ಬೆಳೆಸಿಕೊಂಡಿದ್ದಾರೆ. ಇಲ್ಲಿನ ವಿಚಾರಗಳ ಬಗ್ಗೆ ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ಮಾತನಾಡುತ್ತಿದ್ದಾರೆ. ಅದೇ ವರದಿಗಳನ್ನು ಉಲ್ಲೇಖಿಸಿ ಭಾರತದಲ್ಲಿ ಬಹಿರಂಗ ಭಾಷಣಗಳನ್ನು ಮಾಡುತ್ತಿದ್ದಾರೆ. ಇದು ಚುನಾಯಿತು ಸರ್ಕಾರವೊಂದನ್ನು ಅಸ್ಥಿರಗೊಳಿಸುವ ತಂತ್ರವಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

rahul-gandhis-vote-chori-drama-no-evidence-no-credibility-just-noise

ಬಿಹಾರದಂತಹ ರಾಜ್ಯಗಳಲ್ಲಿ ಜಾರಿಗೆ ತರಲಾದ ವ್ಯವಸ್ಥಿತ ಮತದಾರರ ಪಟ್ಟಿ ಶುದ್ಧೀಕರಣ ಮತ್ತು ದೃಢೀಕರಣ (ಎಸ್‌ಐಆರ್‌) ಪ್ರಕ್ರಿಯೆಯು 65 ಲಕ್ಷಕ್ಕೂ ಹೆಚ್ಚು ನಕಲಿ ನಮೂದುಗಳನ್ನು ತೆಗೆದುಹಾಕಿದೆ. ಮೃತ ಮತದಾರರು, ಸ್ಥಳಾಂತರಗೊಂಡ ಜನರು ಮತ್ತು ಸಂಪೂರ್ಣ ನಕಲುಗಳು ಇದರಲ್ಲಿ ಸೇರಿವೆ. ಬಿಹಾರದಲ್ಲಿ ಯಾವುದೇ ವಿರೋಧ ಪಕ್ಷವು ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲಿಲ್ಲ.

ಕೇರಳದಲ್ಲಿನ ಆಂತರಿಕ ಲೆಕ್ಕಪರಿಶೋಧನೆಗಳು 6.25 ಲಕ್ಷಕ್ಕೂ ಹೆಚ್ಚು ನಕಲಿ ಮತದಾರರನ್ನು ತೋರಿಸಿವೆ. ಒಬ್ಬನೇ ವ್ಯಕ್ತಿಗೆ ಸಂಬಂಧಿಸಿದ ಹಲವು ಗುರುತಿನ ಚೀಟಿಗಳು ಕಂಡುಬಂದಿವೆ. ಒಬ್ಬ ವ್ಯಕ್ತಿಯು ಒಂದಕ್ಕಿಂತ ಹೆಚ್ಚು ಬಾರಿ ಮತ ಚಲಾಯಿಸಿದ ಹಲವು ಪ್ರಕರಣಗಳನ್ನು ಬಹಿರಂಗಪಡಿಸಿವೆ. ಈ ಅಕ್ರಮಗಳಲ್ಲಿ ಕೆಲವು ರಾಹುಲ್‌ ಗಾಂಧಿಯವರ ಸ್ವಂತ ಕ್ಷೇತ್ರವಾದ ವಯನಾಡಿನಲ್ಲೇ ನಡೆದಿರುವುದು ವಿಶೇಷವಾಗಿದೆ.

ಎಸ್‌ಐಆರ್ ಪ್ರಕ್ರಿಯೆಗೆ ವಿರೋಧ ಮಾಡುವುದು ಕಾಂಗ್ರೆಸ್ ಕಾರ್ಯತಂತ್ರದ ಭಾಗವಾಗಿದೆ. ನಿಷ್ಠಾವಂತ ವೋಟ್‌ ಬ್ಯಾಂಕುಗಳನ್ನು ಹೊಂದಿರುವ ಕ್ಷೇತ್ರಗಳಲ್ಲಿ, ಅಲ್ಪಸಂಖ್ಯಾತರು ಹೆಚ್ಚಿರುವ ನಗರ ಪ್ರದೇಶಗಳಲ್ಲಿ ಪರಿಶೀಲನಾ ಪ್ರಕ್ರಿಯೆಯು ನಡೆಯುತ್ತಿವೆ. ಈ ಪ್ರಕ್ರಿಯೆಯು ಸಾಕಷ್ಟು ನಕಲಿ ಮತದಾರರ ಸಂಖ್ಯೆಗಳನ್ನು ಕಡಿಮೆ ಮಾಡುತ್ತಿದೆ. ಧುಲೆ, ಮಾಲೆಗಾಂವ್ ಸೆಂಟ್ರಲ್ ಮತ್ತು ಬೆಂಗಳೂರಿನ ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪಕ್ಷವು ವೋಟ್‌ ಬ್ಯಾಂಕ್‌ ಅನ್ನು ಹೊಂದಿದೆ. ಈ ಕ್ಷೇತ್ರಗಳು ಕಾಂಗ್ರೆಸ್ ಗೆಲುವಿನಲ್ಲಿ ನಿರ್ಣಾಯಕವಾಗಿವೆ. ಈ ಹಿನ್ನೆಲೆಯಲ್ಲಿ ಎಸ್‌ಐಆರ್‌ ಪ್ರಕ್ರಿಯೆಯನ್ನು ಕಾಂಗ್ರೆಸ್‌ ವಿರೋಧಿಸುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ.

ತಮ್ಮ ಬಯಲು ನಾಟಕಗಳ ಮೂಲಕ ರಾಜಕೀಯ ಬಿಕ್ಕಟ್ಟುಗಳನ್ನು ಸೃಷ್ಟಿಸುವ ಮಾದರಿಯು ರಾಹುಲ್‌ ಗಾಂಧಿಯವರಿಗೆ ಹೊಸದಲ್ಲ. ಸಿಎಎ ವಿರೋಧಿ ಪ್ರತಿಭಟನೆಗಳು, ರೈತರ ಆಂದೋಲನ, ವಕ್ಫ್‌ ಕಾಯ್ದೆಯ ಪ್ರದರ್ಶನಗಳು ಸೇರಿದಂತೆ ಹಲವು ನಾಟಕಗಳನ್ನು ಪ್ರಜಾಪ್ರತ್ವದ ಆತ್ಮಕ್ಕಾಗಿ ನಡೆಯುತ್ತಿರುವ ನೈತಿಕ ಯುದ್ಧವೆಂದು ರೂಪಿಸಲಾಯಿತು. ಆದರೆ ಬಹುಮತದ ದೃಷ್ಟಿಯಲ್ಲಿ ಸರ್ಕಾರವನ್ನು ಅಮಾನ್ಯಗೊಳಿಸಬಹುದಾದ ಯಾವುದೇ ರಾಷ್ಟ್ರವ್ಯಾಪಿ ಬೆಳವಣಿಗೆ ನಡೆಯಲೇ ಇಲ್ಲ. ಆದರೂ, ಆಡಳಿತ ಪಕ್ಷವನ್ನು ನಿರಂತರವಾಗಿ ಹೀಯಾಳಿಸುವುದು, ತೆಗಳುವುದು ಜಾರಿಯಲ್ಲಿ ಇದ್ದೇ ಇದೆ.

ಕಾಂಗ್ರೆಸ್ ಪಕ್ಷದೊಳಗೆ ಇಂತಹ ನಕಲಿ ನಿರೂಪಣೆಯ ಶಿಸ್ತನ್ನು ನಿಖರವಾಗಿ ಜಾರಿಗೊಳಿಸಲಾಗಿದೆ. ಇದಕ್ಕೆ ಯಾವುದೇ ವಿರೋಧ ಬಂದರೂ ಪಕ್ಷವು ಅದನ್ನು ಸಹಿಸುವುದಿಲ್ಲ ಎಂಬುದಕ್ಕೆ ಕರ್ನಾಟಕದಲ್ಲಿ ನಡೆದ ಬೆಳವಣಿಗೆಯೇ ಸಾಕ್ಷಿ. ಮತಗಳ್ಳತನದ ಬಗ್ಗೆ ರಾಹುಲ್‌ ಗಾಂಧಿಯವರ ಹೇಳಿಕೆಗಳನ್ನು ಸಾರ್ವಜನಿಕವಾಗಿ ಪ್ರಶ್ನಿಸಿದ ಪರಿಶಿಷ್ಟ ಪಂಗಡದ ಪ್ರಭಾವಿ ಸಚಿವ ಕೆ.ಎನ್.ರಾಜಣ್ಣ ಅವರನ್ನ ಸಚಿವ ಸ್ಥಾನದಿಂದ ತೆಗೆದುಹಾಕಲಾಯಿತು. ಮುಕ್ತ ಚರ್ಚೆ ಮತ್ತು ಪ್ರಜಾಪ್ರಭುತ್ವದ ಆದರ್ಶಗಳ ಪ್ರತಿಪಾದಕ ಎಂದು ತನ್ನನ್ನು ತಾನು ಪ್ರಸ್ತುತಪಡಿಸಿಕೊಳ್ಳುವ ನಾಯಕನಿಗೆ, ಆಂತರಿಕ ಪ್ರಶ್ನಿಸುವಿಕೆ ಇಷ್ಟವಾಗುವುದಿಲ್ಲ ಎಂಬ ಸಂದೇಶ ಪಕ್ಷದ ಸದಸ್ಯರಿಗೆ ಸ್ಪಷ್ಟವಾಗಿದೆ.

rahul-gandhis-vote-chori-drama-no-evidence-no-credibility-just-noise

ಈ ಹಿಂದೆ ಭಾರತ್ ಜೋಡೋ ಯಾತ್ರೆ ಮಾಡಿದ ರಾಹುಲ್‌ ಗಾಂಧಿ ವಿದೇಶಿ ನಿಧಿಯನ್ನು ಹೊಂದಿರುವ ಎನ್‌ಜಿಒಗಳ ಸಹಾಯವನ್ನು ಪಡೆದಿದ್ದರು. ಈ ಎನ್‌ಜಿಒಗಳು ಯಾತ್ರೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದವು. ಈ ಮೂಲಕ ದೇಶದ ರಾಜಕೀಯದಲ್ಲಿ ಅಂತರರಾಷ್ಟ್ರೀಯ ನಿರೂಪಣೆಯನ್ನು ಸೃಷ್ಟಿಸುವ ಪ್ರಯತ್ನಗಳನ್ನೂ ಅವರು ಮಾಡಿದ್ದರು ಎಂಬ ವಾದವೂ ಕೇಳಿಬಂದಿದೆ. ಈಗ ಪ್ರಜಾಪ್ರಭುತ್ವವನ್ನು ಉಳಿಸುವ ಅಭಿಯಾನದಲ್ಲಿ ವಿದೇಶಿ-ಸಂಬಂಧಿತ ದೃಷ್ಟಿಕೋನಗಳು ರಾಜಕೀಯವಾಗಿ ಪ್ರಬಲವಾಗಿವೆ. ಇದು ಭಾರತದ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯೂ ಆಗಿದೆ.

ಇದೆಲ್ಲವೂ ಸಾರ್ವಜನಿಕ ನಂಬಿಕೆಯನ್ನು ನಾಶಮಾಡುವುದರ ಮೇಲೆ ನಿರ್ಮಿಸಲಾದ ರಾಜಕೀಯ ತಂತ್ರ ಎಂದು ಸಹಜವಾಗಿ ಮೇಲ್ನೋಟಕ್ಕೆ ತಿಳಿಯುತ್ತದೆ. ಮತಗಳ ಬಗ್ಗೆ ಅನುಮಾನ ಮೂಡಿಸಿ, ಚುನಾವಣಾ ಆಯೋಗವನ್ನ ಪಕ್ಷಪಾತಿ ಎಂದು ಬಿಂಬಿಸಲಾಗುತ್ತಿದೆ. ಆಡಳಿತಾತ್ಮಕ ದೋಷಗಳನ್ನು ಪಿತೂರಿಯ ಪುರಾವೆಯಾಗಿ ಬಳಸಿಕೊಳ್ಳುವ ತಂತ್ರ ಹೆಣೆಯಲಾಗಿದೆ. ಅದು ತಮ್ಮ ರೀತಿಯಲ್ಲಿ ನಡೆದರೆ ಪ್ರಜಾಪ್ರಭುತ್ವ ಸಮರ್ಥ ಎನ್ನುವುದು, ಇಲ್ಲದಿದ್ದರೆ ಅದು ಸತ್ತಿದೆ ಎನ್ನುತ್ತಾರೆ.

ಭಾರತದ ಚುನಾವಣಾ ವ್ಯವಸ್ಥೆಗೆ ನಿರಂತರ ಜಾಗರೂಕತೆಯ ಅಗತ್ಯವಿದೆ. ಆದರೆ ಜಾಗರೂಕತೆ ಮತ್ತು ವಿಧ್ವಂಸಕತೆಯ ನಡುವೆ ವ್ಯತ್ಯಾಸವಿದೆ. ಮೊದಲನೆಯದು ಪುರಾವೆಗಳು, ಸೂಕ್ತ ಪ್ರಕ್ರಿಯೆ ಮತ್ತು ಅವುಗಳನ್ನು ನಿರ್ಣಯಿಸಲು ಅಧಿಕಾರ ಹೊಂದಿರುವ ವೇದಿಕೆಗಳಿಗೆ ಹಕ್ಕುಗಳನ್ನು ಸಲ್ಲಿಸುವ ಇಚ್ಛೆಯನ್ನು ಬಯಸುತ್ತದೆ. ಎರಡನೆಯದು ವ್ಯಂಗ್ಯ, ಆರೋಪಗಳಿಂದ ಕೂಡಿರುತ್ತವೆ.

ರಾಹುಲ್‌ ಗಾಂಧಿಯವರಿಗೆ ತಮ್ಮ ಪ್ರಕರಣವನ್ನು ಸಾಬೀತುಪಡಿಸಲು ಅರ್ಜಿಗಳಿಂದ ಅಫಿಡವಿಟ್‌ಗಳವರೆಗೆ ಸಾಧನಗಳನ್ನು ನೀಡಲಾಗಿದೆ. ಆದರೆ ಅವರು ತಮ್ಮ ಹೋರಾಟವನ್ನು ಸಾರ್ವಜನಿಕ ಅಭಿಪ್ರಾಯದ ನ್ಯಾಯಾಲಯದಲ್ಲಿ ಇರಿಸಿಕೊಳ್ಳಲು ಆಯ್ಕೆ ಮಾಡಿಕೊಂಡಿದ್ದಾರೆ. ಅಲ್ಲಿ ತೀರ್ಪುಗಳನ್ನು ಕಾನೂನಿನ ಮೂಲಕ ನೀಡುವ ಬದಲು ಚಪ್ಪಾಳೆ ಮತ್ತು ಹ್ಯಾಶ್‌ಟ್ಯಾಗ್‌ಗಳ ಮೂಲಕ ನೀಡಲಾಗುತ್ತದೆ.

ಭಾರತದಂತಹ ವಿಶಾಲ ಮತ್ತು ವೈವಿಧ್ಯಮಯ ದೇಶದಲ್ಲಿ ಮತಪೆಟ್ಟಿಗೆಯು ಒಂದು ಶತಕೋಟಿಗೂ ಹೆಚ್ಚು ಜನರನ್ನು ಕೆಲವೇ ಕ್ಷಣಗಳಲ್ಲಿ ಒಂದುಗೂಡಿಸುವ ಸಾಧನವಾಗಿದೆ. ಈ ಅಂತ್ಯವಿಲ್ಲದ ರಾಜಕೀಯ ನಾಟಕದಲ್ಲಿ ಮತ್ತೊಂದು ವೇದಿಕೆಯ ಆಧಾರವಾಗಿ ಅದನ್ನು ಪರಿಗಣಿಸುವುದು ಆ ವ್ಯವಸ್ಥೆ ಮೇಲಿನ ನಂಬಿಕೆಯನ್ನೇ ಕಸಿದುಕೊಳ್ಳುತ್ತದೆ. ರಾಹುಲ್‌ ಗಾಂಧಿ ಅವರು ಕೇವಲ ಘೋಷಣೆ ಹಾಗೂ ಚಪ್ಪಾಳೆಗಳನ್ನು ಗಿಟ್ಟಿಸಿಕೊಳ್ಳುವುದಕ್ಕೋಸ್ಕರ ಸಾರ್ವಜನಿಕ ಆರೋಪಗಳನ್ನು ಮಾಡುತ್ತಿಲ್ಲ. ಅವರು ಪ್ರಜಾಪ್ರಭುತ್ವ ಹಾಗೂ ನ್ಯಾಯಾಲಯಗಳ ಬಗ್ಗೆ ಜನರಲ್ಲಿ ವಿರೋಧಿ ಭಾವನೆಗಳನ್ನು ಕೆರಳಿಸಲು ತಂತ್ರಗಳನ್ನು ರೂಪಿಸುತ್ತಿರುವುದು ಕಂಡುಬರುತ್ತಿದೆ.

ಅಲ್ಲಿಯವರೆಗೆ ಈ ನಾಟಕ ಮುಂದುವರಿಯುತ್ತದೆ. ಆರೋಪಗಳ ಪ್ರತಿಧ್ವನಿ ಕೇಳಿಸುತ್ತಲೇ ಇರುತ್ತದೆ. ಇದನ್ನು ದೇಶವು ನೋಡುತ್ತಲೇ ಇರುತ್ತದೆ. ಆದರೆ ಮತದಾರರ ಅಂತಿಮ ಆಯ್ಕೆಯು ಜನಸಮೂಹದ ಗದ್ದಲದಿಂದಲೋ ಅಥವಾ ವಿದೇಶದಲ್ಲಿ ಮಾಡಿದ ಭಾಷಣದಿಂದಲೋ ನಿರ್ಧಾರವಾಗುವುದಿಲ್ಲ ಎಂಬುದನ್ನು ನಾವೆಲ್ಲರೂ ಅರಿಯಬೇಕಿದೆ. ಇದರಿಂದ ಮಾತ್ರ ಪ್ರಜಾಪ್ರಭುತ್ವ ಉಳಿಯಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+