ಪ್ರವಾಹಪೀಡಿತ ಕೇರಳಕ್ಕೆ ಭೇಟಿ ನೀಡಲಿರುವ ರಾಹುಲ್ ಗಾಂಧಿ
Recommended Video

ಕೇರಳದ ಪ್ರವಾಹ ಪೀಡಿತ ಸ್ಥಳಗಳಿಗೆ ಆಗಸ್ಟ್ 28ರಂದು ಭೇಟಿ ಕೊಡಲಿದ್ದಾರೆ ರಾಹುಲ್ ಗಾಂಧಿ | Oneindia Kannada
ತಿರುವನಂತಪುರಂ, ಆಗಸ್ಟ್ 27: ಪ್ರವಾಹದಿಂದ ತತ್ತರಿಸಿರುವ ಕೇರಳಕ್ಕೆ ಆಗಸ್ಟ್ 28 ರಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ ನೀಡಲಿದ್ದಾರೆ.
ಮಂಗಳವಾರದಂದು ಕೇರಳ ರಾಜಧಾನಿ ತಿರುವನಂತಪುರಂ ಗೆ ಆಗಮಿಸಲಿರುವ ರಾಹುಲ್ ಗಾಂಧಿ, ನಂತರ ಪ್ರವಾಹಪೀಡಿತ ಸ್ಥಳಗಳಾದ ಚೆಂಗನ್ನೂರ್, ಆಲಪ್ಪಿ, ಅಂಗಮಲಿ ಮುಂತಾದೆಡೆ ಭೇಟಿ ನೀಡಲಿದ್ದಾರೆ.
ಎರಡು ದಿನಗಳ ಕಾಲ ಕೇರಳದ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಲಿರುವ ರಾಹುಲ್ ಗಾಂಧಿ, ಆ.29 ರಂದು ವೈನಾಡಿಗೆ ತೆರಳಿ, ಪರಿಸ್ಥಿತಿ ಅವಲೋಕಸಲಿದ್ದಾರೆ. ಆಗಸ್ಟ್ 24 ರಂದೇ ರಾಹುಲ್ ಗಾಂಧಿ ಅವರ ಕೇರಳ ಪ್ರವಾಸ ನಿಗದಿಯಾಗಿತ್ತಾದರೂ, ಅವರು ವಿದೇಶಿ ಪ್ರವಾಸದಲ್ಲಿದ್ದಿದ್ದರಿಂದ ಅದನ್ನು ಮುಂದೂಡಲಾಗಿತ್ತು.

ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಕೇರಳಕ್ಕೆ ಭೇಟಿ ನೀಡಿ ವೈಮಾನಿಕ ಸಮೀಕ್ಷೆ ನಡೆಸಿದ್ದರು. ಕೇರಳದಲ್ಲಿ ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಉಂಟಾದ ಪ್ರವಾಹಕ್ಕೆ ಇದುವರೆಗೂ ಸುಮಾರು 350 ಕ್ಕೂ ಹೆಚ್ಚು ಜನ ಮೃತರಾಗಿದ್ದು, ಲಕ್ಷಾಂತರ ಜನ ನಿರಾಶ್ರಿತರಾಗಿದ್ದಾರೆ.












Click it and Unblock the Notifications