ಗಿನ್ನಿಸ್ ದಾಖಲೆ ಮಾಡುವಷ್ಟು ಚುನಾವಣೆ ಸೋತಿದ್ದಾರಾ ರಾಹುಲ್?

Posted By:
Subscribe to Oneindia Kannada

ಮಧ್ಯಪ್ರದೇಶ, ಮಾರ್ಚ್ 21: ಮಧ್ಯಪ್ರದೇಶದ ಹೊಶನ್ ಬಾಗ್ ನ ವಿಶಾಲ್ ದಿವಾನ್ ಎಂಬ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ರಾಹುಲ್ ಗಾಂಧಿ ಹೆಸರನ್ನು ಗಿನ್ನಿಸ್ ದಾಖಲೆಯ ಪುಸ್ತಕಕ್ಕೆ ಸೇರಿಸಬೇಕೆಂದು ಗಿನ್ನಿಸ್ ಬುಕ್ಸ್ ಆಫ್ ವರ್ಲ್ಡ್ ರೆಕಾರ್ಡ್ ಆಡಳಿತ ಮಂಡಳಿಗೆ ಪತ್ರ ಬರೆದಿದ್ದಾರೆ![ಹಾಸ್ಯ : ಸೆಹ್ವಾಗ್ ದಾಖಲೆ ಮುರಿದ ಮೋದಿ, ರಾಹುಲ್ ಕಥೆ ಏನು?]

ಸಾಲು ಸಾಲು ಚುನಾವಣೆಯ ಸೋಲೇ ರಾಹುಲ್ ಗಾಂಧಿಯವರ ದಾಖಲೆ ಎಂದಿರುವ ವಿದ್ಯಾರ್ಥಿ ತನ್ನ ಮನವಿಯನ್ನು ಗಿನ್ನಿಸ್ ಪರಿಗಣಿಸುತ್ತದೋ ಇಲ್ಲವೋ ಗೊತ್ತಿಲ್ಲ, ಆದರೆ ತಾನು ಪತ್ರ ಬರೆದಿದ್ದಂತೂ ನಿಜ ಎಂದಿದ್ದಾರೆ.

ಇದುವರೆಗೂ ಕಾಂಗ್ರೆಸ್ 27 ಚುನಾವಣೆಗಳನ್ನು ಸತತವಾಗಿ ಸೋತಿದ್ದು, ಈ ಎಲ್ಲಾ ಚುನಾವಣೆಯ ಸೋಲಿಗೂ ರಾಹುಲ್ ಗಾಂಧಿಯವರ ಹೆಸರೇ ಕೇಳಿಬರುತ್ತಿದೆ[ಟ್ವಿಟ್ಟರ್ ಜೋಕ್ಸ್: ರಾಹುಲ್ ಬಿಜೆಪಿಗೆ ವೋಟ್ ಮಾಡಿದ್ದಾರಾ?]

Rahul Gandhi's name in Guinness world record?!

ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಅನ್ನು ನಿರ್ಧರಿಸುವ ಸಂಸ್ಥೆ ಅಮೆರಿಕ ಮೂಲದ್ದಾಗಿದ್ದು, ವಿಶಾಲ್ ಬರೆದ ಪತ್ರಕ್ಕೆ ಅಲ್ಲಿಂದ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ!

ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ನಗೆಪಾಟಲಾಗಿರುವ ರಾಹುಲ್ ಗಾಂಧಿ ಸೋಲಿನ ಸರದಾರನೆಂದು ಗಿನ್ನಿಸ್ ದಾಖಲೆಯನ್ನೇನಾದರೂ ಹೊತ್ತರೆ ಟೀಕಾಕಾರರಿಗೆ ಹಬ್ಬವಾಗುವುದು ಖಂಡಿತ![ತಾವೂ ಮುಳುಗಿ ಎಸ್ಪಿಯನ್ನೂ ಮುಳುಗಿಸಿದ ರಾಹುಲ್!]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
An engineering student from Madhya Pradesh has sent a letter to guinness book of world records and proposed Congress Vice President Rahul Gandhi's name to guinness world record for losing maximum elections!
Please Wait while comments are loading...