ಸರ್ಕಾರಕ್ಕೆ ತಿರುಗೇಟು ನೀಡಲು ಬರುವುದಿಲ್ಲ: ರಾಹುಲ್ ಗಾಂಧಿ

ನವದೆಹಲಿ, ನವೆಂಬರ್ 23: ಭೂತಾನ್ ಪ್ರದೇಶದ ಗಡಿಭಾಗದೊಳಗೆ ಹಳ್ಳಿಯನ್ನು ನಿರ್ಮಿಸುವ ಮೂಲಕ ದೋಕ್ಲಾಂನಲ್ಲಿ ಚೀನಾದಿಂದ ಭಾರತಕ್ಕೆ ಮತ್ತೆ ಅಪಾಯದ ಬೆದರಿಕೆ ಎದುರಾಗಿದೆ ಎಂಬ ವರದಿಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, 'ಚೀನಾದ ಭೂರಾಜಕೀಯ ತಂತ್ರಗಳಿಗೆ ಭಾರತದ ಸಾರ್ವಜನಿಕ ಸಂಪರ್ಕ ಚಾಲಿತ ಮಾಧ್ಯಮ ತಂತ್ರಗಳಿಂದ ಎದುರೇಟು ನೀಡಲು ಸಾಧ್ಯವಿಲ್ಲ. ಈ ಸರಳ ಸಂಗತಿಯು ಭಾರತ ಸರ್ಕಾರವನ್ನು ನಡೆಸುತ್ತಿರುವವರ ಮನಸಿನೊಳಗೆ ಇದೆಲ್ಲ ಮೂಡುವುದಿಲ್ಲ' ಎಂದು ಟೀಕಿಸಿದ್ದಾರೆ.

ಭೂತಾನ್‌ನ ಎರಡು ಕಿಮೀ ಗಡಿಯೊಳಗೆ ಚೀನಾವು ಹಳ್ಳಿಯನ್ನು ನಿರ್ಮಿಸಿದ್ದು, ಅಲ್ಲಿ ಕಾರ್ಯಚಟುವಟಿಕೆ ನಡೆಸುತ್ತಿದೆ ಎಂದು ವರದಿಯಾಗಿತ್ತು. ಈ ಪ್ರದೇಶವು ಈ ಹಿಂದೆ ದೋಕ್ಲಂನಲ್ಲಿ ಬಿಕ್ಕಟ್ಟು ತಲೆದೋರಿದ್ದ ಸ್ಥಳದಿಂದ ಕೇವಲ 9 ಕಿಮೀ ದೂರವಿದ್ದು, ಭಾರತಕ್ಕೆ ಅಪಾಯ ತಂದೊಡ್ಡಲಿದೆ ಎಂದು ಹೇಳಲಾಗಿತ್ತು. ಆದರೆ ಇದನ್ನು ಭೂತಾನ್ ನಿರಾಕರಿಸಿತ್ತು. ಭೂತಾನ್ ಒಳಗೆ ಚೀನಾದ ಯಾವುದೇ ಹಳ್ಳಿ ಇಲ್ಲ ಎಂದು ರಾಯಭಾರ ಕಚೇರಿ ಸ್ಪಷ್ಟಪಡಿಸಿತ್ತು. ಈ ವರದಿ ಬಂದ ಕೆಲವು ದಿನಗಳ ಬಳಿಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

 Rahul Gandhi Attacks Centre, Chinas Geopolitical Strategy Cannot Be Countered By PR.

2017ರಲ್ಲಿ ಭಾರತ ಮತ್ತು ಚೀನಾ ನಡುವೆ 73 ದಿನಗಳ ಕಾಲ ದೋಕ್ಲಾಂ ಬಿಕ್ಕಟ್ಟು ತಲೆದೋರಿತ್ತು. ಪ್ರಸ್ತುತ ಭಾರತ-ಚೀನಾ ಪಡೆಗಳ ಪೂರ್ವ ಲಡಾಖ್‌ನ ಗಡಿ ವಾಸ್ತವ ನಿಯಂತ್ರಣ ರೇಖೆಯಲ್ಲಿ ಮೇ ತಿಂಗಳಿನಿಂದ ಪರಸ್ಪರ ಕಾದಾಟ ನಡೆಸುತ್ತಿವೆ. ತಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದಿದ್ದರೆ, ಕೆಲವೇ ಗಂಟೆಗಳಲ್ಲಿ ಚೀನಾ ಪಡೆಗಳನ್ನು ನೂರು ಕಿಮೀ ಗಡಿಯೊಳಗೆ ಓಡಿಸುತ್ತಿತ್ತು ಎಂದು ಈ ಹಿಂದೆ ರಾಹುಲ್ ಗಾಂಧಿ ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+