ಯವ್ವಿ ಯವ್ವಿ ಇದೇನಿದು? ಎಟಿಎಂ ನಲ್ಲಿ ಮೋದಕ ಬರುತ್ತಾ?!

ಪುಣೆ, ಸೆಪ್ಟೆಂಬರ್ 18: ಕಾರ್ಡ್ ತುರುಕುತ್ತಿದ್ದಂತೆಯೇ ಹಣ ನೀಡುವ ಎಟಿಎಂ ನಲ್ಲಿ ಬಯಸಿದ್ದೆಲ್ಲ ಬರುವಂತಿದ್ದರೆ ಎಷ್ಟು ಚೆನ್ನ?! ಬಯಸಿದ್ದೆಲ್ಲ ಬರುತ್ತೋ ಇಲ್ವೋ, ಆದರೆ ಮಹಾರಾಷ್ಟ್ರದ ಪುಣೆಯ ಎಟಿಎಂ ವೊಂದರಲ್ಲಿ ಕಾರ್ಡ್ ಹಾಕಿದರೆ ಸಾಕು, ಗಣೇಶನ ಇಷ್ಟದ ಭಕ್ಷ್ಯ ಮೋದಕ ಬರುತ್ತೆ!

ಯವ್ವಿ ಯವ್ವಿ.. ದಿಟವಾ ಇದು ಅಂದ್ರಾ?! 100 % ನಿಜ. ಈ ಬಾರಿಯ ಗಣೇಶ ಚತುರ್ಥಿಗೆಂದು ವಿಶೇಷವಾಗಿ ನಿರ್ಮಿಸಿರುವ ಆಲ್ ಟೈಮ್ ಮೋದಕ್(ಎಟಿಎಂ) ಮಶಿನ್ ಗಾಗಿಯೇ ವಿಶೇಷ ಕಾರ್ಡ್ ವೊಂದನ್ನು ಭಕ್ತರಿಗೆ ನೀಡಲಾಗಿದೆ. ಎಟಿಎಂ ಮಶಿನ್ ನ ಸ್ಕ್ರೀನ್ ಮೇಲೆ ಗಣೇಶನ ಚಿತ್ರವಿದ್ದು, ಗಣೇಶನಿಗೆ ಭಕ್ತಿಯಿಂದ ನಮಸ್ಕರಿಸಿ, ವಿಶೇಷ ಕಾರ್ಡ್ ಅನ್ನು ಮಶಿನ್ ನಲ್ಲಿ ತುರುಕಿದರೆ, ನಿಮ್ಮ ಕೈಗೆ ಮೋದಕ ಬಂದು ಬೀಳುತ್ತೆ!

ಮಾಮೂಲಿ ಎಟಿ ಎಂ ಥರವೇ ಇರುವ ಈ ಯಂತ್ರವನ್ನು ರಚಿಸಿದ್ದು, ಸಂಜೀವ್ ಕುಲಕರ್ಣಿ ಎಂಬುವವರು. ಹೊಸ ಕಾಲಕ್ಕೆ ತಕ್ಕಂತೆ ತಂತ್ರಜ್ಞಾನದಲ್ಲಿ ಬದಲಾವಣೆ ತಂದು, ಸಂಸ್ಕೃತಿಯೊಂದಿಗೆ ಅದನ್ನು ಅಳವಡಿಸಿಕೊಳ್ಳುವ ಪುಟ್ಟ ಪ್ರಯತ್ನವಿದು ಎನ್ನುತ್ತಾರೆ ಸಂಜಿವ್ ಕುಲಕರ್ಣಿ.

Pune: Modak in ATM! Ganesh Chaturthi special!, All Time Modak

ಈ ಎಟಿಎಂ ಯಂತ್ರದಲ್ಲಿ ಸಂಖ್ಯೆಗಳ ಬದಲು 'ಸಮರ್ಪಣಾ ಭಾವ', 'ಅಕ್ಕರೆ,' 'ಶಾಂತಿ', 'ಜ್ಞಾನ', 'ಸನ್ನಡತೆ'.. ಇತ್ಯಾದಿ ಶಬ್ದಗಳನ್ನು ಬರೆಯಲಾಗಿದೆ. ಗಣೇಶನಿಂದ ಯಾರು ಏನು ಬಯಸುತ್ತಾರೋ ಆ ಬಟನ್ ಅನ್ನು ಒತ್ತಬಹುದು!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+