ಇನ್ನು ಮುಂದೆ ಚೈನ್ ಎಳೆದರೆ ರೈಲುಗಳು ನಿಲ್ಲೋಲ್ಲ
ನವದೆಹಲಿ, ಜೂ. 09 : ಇನ್ನು ಮುಂದೆ ತುರ್ತು ಸಂದರ್ಭದಲ್ಲಿ ಚೈನ್ ಎಳೆದರೆ ರೈಲು ನಿಲ್ಲುವುದಿಲ್ಲ. ಅನಗತ್ಯವಾಗಿ ಚೈನು ಎಳೆಯುವುದರಿಂದ ರೈಲ್ವೆ ಇಲಾಖೆಗೆ ನಷ್ಟವಾಗುತ್ತಿದೆ. ಆದ್ದರಿಂದ, ಚೈನಿನ ಬದಲು ಚಾಲಕನೊಡನೆ ನೇರವಾಗಿ ಮಾತನಾಡುವ ಸೌಲಭ್ಯವನ್ನು ಇಲಾಖೆ ಮುಂದಾಗಿದೆ.
ಸಾಮಾನ್ಯವಾಗಿ ರೈಲಿನಲ್ಲಿ ಅಪಾಯ ಸಂಭವಿಸಿದಾಗ ಅಥವ ತುರ್ತು ಸಂದರ್ಭದಲ್ಲಿ ಚೈನ್ ಎಳೆಯುವ ಸೌಲಭ್ಯವನ್ನು ನೀಡಲಾಗಿತ್ತು. ಆದರೆ, ಈ ಸೌಲಭ್ಯವನ್ನು ಸ್ಥಗಿತಗೊಳಿಸಲು ಇಲಾಖೆ ಮುಂದಾಗಿದೆ. ರೈಲುಗಳಲ್ಲಿ ಚೈನುಗಳನ್ನು ತೆಗೆಯುವ ಕಾರ್ಯಕ್ಕೂ ಚಾಲನೆ ನೀಡಲಾಗಿದೆ. [ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು ಏಕಿಲ್ಲ?]

ಈಶಾನ್ಯ ರೈಲ್ವೆ ವಲಯದ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಂದ್ರ ಸಿಂಗ್ ಈ ಕುರಿತು ಮಾಹಿತಿ ನೀಡಿದ್ದಾರೆ. ಕೆಲವರು ಅನಗತ್ಯವಾಗಿ ಚೈನ್ ಎಳೆದು ರೈಲನ್ನು ನಿಲ್ಲಿಸುತ್ತಿದ್ದಾರೆ. ಚೈನ್ ಎಳೆದ ತಕ್ಷಣ ನಿಧಾನವಾಗಿ ರೈಲು ಚಲಿಸಿ ನಿಲ್ಲುತ್ತದೆ ಇದರಿಂದ ಇಲಾಖೆಗೆ ಮೂರು ಸಾವಿರ ಕೋಟಿ ನಷ್ಟ ಉಂಟಾಗಿದೆ. ಆದ್ದರಿಂದ ಈ ಸೇವೆಯನ್ನು ಸ್ಥಗಿತಗೊಳಿಸಲಾಗುತ್ತದೆ ಎಂದರು.[ಮೈಸೂರು-ಚೆನ್ನೈ ನಡುವೆ ಸೆಮಿ ಸ್ಪೀಡ್ ರೈಲು ಸಂಚಾರ]
ಈಗಾಗಲೇ ರೈಲಿನ ಬೋಗಿಯಲ್ಲಿರುವ ಚೈನುಗಳನ್ನು ತೆಗೆಯಲಾಗುತ್ತಿದೆ. ಈ ಸೇವೆಗೆ ಪರ್ಯಾಯವಾಗಿ ಪ್ರಯಾಣಿಕರು ತುರ್ತು ನಿರ್ಗಮನಕ್ಕಾಗಿ ರೈಲು ಚಾಲಕ ಹಾಗೂ ಸಹ ಚಾಲಕನಿಗೆ ಕರೆಮಾಡಿ ಸೂಚನೆ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ವಿವರಣೆ ನೀಡಿದರು. [30 ಸೆಕೆಂಡ್ ನಲ್ಲಿ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಹೇಗೆ?]
ಚಾಲಕನಿಗೆ ಕರೆ ಮಾಡಲು ಮೂರು ಬೋಗಿಗಳ ನಡುವೆ ಒದೊಂದು ವಾಕಿಟಾಕಿ ಮತ್ತು ಕರೆ ಮಾಡಬೇಕಾದ ನಂಬರ್‌ಗಳನ್ನು ಅಳವಡಿಸಲಾಗುತ್ತಿದೆ. ಸದ್ಯ ಉತ್ತರ ಭಾರತದ ರಾಜ್ಯಗಳಲ್ಲಿ ಚೈನ್‌ಗಳನ್ನು ತೆರವುಗೊಳಿಸಿ ವಾಕಿಟಾಕಿ ಅಳವಡಿಸಲಾಗುತ್ತಿದೆ ಎಂದು ಹೇಳಿದರು.












Click it and Unblock the Notifications