ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಫೋಟೋ ತೆಗೆದ ಫೋಟೋಗ್ರಾಫರ್ ಗೆ ಒಂದು ಸಲಾಂ!

|
Google Oneindia Kannada News

ತಮಿಳುನಾಡಿನಲ್ಲಿ ಜಲ್ಲಿಕಟ್ಟು ಬಿಸಿ ಇನ್ನೂ ಆರಿಲ್ಲ. ಮೊದಮೊದಲು ಶಾಂತಿಯುತವಾಗಿಯೇ ನಡೆಯುತ್ತಿದ್ದ ಜಲ್ಲಿಕಟ್ಟು ಕ್ರೀಡೆ ಪರವಾದ ಪ್ರತಿಭಟನೆ ಆ ನಂತರ ಹಿಂಸಾಚಾರಕ್ಕೆ ತಿರುಗಿದೆ. ಕಲ್ಲು-ಬಾಟಲಿಯನ್ನು ಪೊಲೀಸರತ್ತ ತೂರಿ, ವಾಹನಗಳಿಗೆ ಬೆಂಕಿ ಸಹ ಹಚ್ಚಲಾಗಿದೆ. ಆಕ್ರೋಶಿತರ ಕಣ್ಣುಗಳಲ್ಲಿ ಬೆಂಕಿ ಜ್ವಾಲೆಯ ಬಿಂಬ. ಅಂಥ ಸಿಟ್ಟನ್ನು ಹೊರಹಾಕುತ್ತಿರುವ ಯುವಕನೊಬ್ಬನ ಫೋಟೋ ಇಲ್ಲಿದೆ.

ಇನ್ನು ನಟ ಜಾಕಿಚಾನ್ ತಮ್ಮ ಹೊಸ ಸಿನಿಮಾ 'ಕುಂಗ್ ಫು ಯೋಗ'ದ ಪ್ರಚಾರಕ್ಕಾಗಿ ಭಾರತಕ್ಕೆ ಬಂದಾಗ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ನಗುನಗುತ್ತಾ ಅವರ ಜತೆಗೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಉಜ್ಜಯಿನಿಯ ಮಹಾಕಾಲೇಶ್ವರನಿಗೆ ವಿದೇಶಾಂಗ ಖಾತೆಗಳ ರಾಜ್ಯ ಸಚಿವ ವಿ.ಕೆ.ಸಿಂಗ್ ಪೂಜೆ ಸಲ್ಲಿಸಿದ್ದಾರೆ.[ಟ್ರಂಪ್ ಮೇಲಿನ ಸಿಟ್ಟು ಬಟ್ಟೆ ಮೇಲೆ ಯಾಕೆ ಚೆಲುವೆ?]

ಹಿಂದಿಯ ಬಿಗ್ ಬಾಸ್ ಸೆಟ್ ನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ತಮ್ಮ ಸೋದರಳಿಯನೊಂದಿಗೆ ಕಾಣಿಸಿಕೊಂಡಿದ್ದಾರೆ. ಮುಂಬೈನ ಕೊಳೆಗೇರಿ ಪ್ರದೇಶದಲ್ಲಿ ನಡೆದ ಅಗ್ನಿ ಅವಘಡ, ಗಣರಾಜ್ಯೋತ್ಸವಕ್ಕೆ ಮುನ್ನ ದೆಹಲಿಯ ಸಂಸತ್ ಭವನದ ಬಳಿಯ ಕಾರಂಜಿ ಝಗಮಗ..ಪ್ಯಾರಿಸ್ ನಲ್ಲಿ ನಡೆದ ಬೇಸಿಗೆಯ ಫ್ಯಾಷನ್ ವಸ್ತ್ರಗಳ ಪ್ರದರ್ಶನ... ಹೀಗೆ ಚೆಂದದ, ಗಾಬರಿ ಹುಟ್ಟಿಸುವ ಫೋಟೋಗಳು ಇಲ್ಲಿವೆ.

ಯೋಗಾಯೋಗ

ಯೋಗಾಯೋಗ

ಮುಂಬೈಗೆ "ಕುಂಗ್ ಫು ಯೋಗ" ಸಿನಿಮಾದ ಪ್ರಚಾರಕ್ಕಾಗಿ ಬಂದಿದ್ದ ಜಾಕಿಚಾನ್ ಜತೆಗೆ ನಟಿ ಶಿಲ್ಪಾ ಶೆಟ್ಟಿ ನಗೆ ಬೀರುತ್ತಾ ಕಾಣಿಸಿಕೊಂಡಿದ್ದು ಹೀಗೆ.

ಜಲ್ಲಿಕಟ್ಟು ಆಕ್ರೋಶ

ಜಲ್ಲಿಕಟ್ಟು ಆಕ್ರೋಶ

ಜಲ್ಲಿಕಟ್ಟು ವಿಚಾರವಾಗಿ ತಮಿಳುನಾಡು ಹೊತ್ತಿ ಉರಿಯುತ್ತಿದೆ. ಕೆಲವೆಡೆ ಹಿಂಸಾರೂಪದಲ್ಲಿ, ಮತ್ತೆ ಕೆಲವೆಡೆ ಆಕ್ರೋಶ ರೂಪದಲ್ಲಿ ವ್ಯಕ್ತವಾಗುತ್ತಿದೆ. ಚೆನ್ನೈನ ಮರೀನಾ ಬೀಚ್ ಬಳಿ ಆಕ್ರೋಶಗೊಂಡ ಯುವಕನೊಬ್ಬ ಪೊಲೀಸರ ಕಡೆಗೆ ಬಾಟಲಿ ಎಸೆಯುವಾಗ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕಿದ್ದು ಹೀಗೆ.

ಅಗ್ನಿ ಅವಘಡ

ಅಗ್ನಿ ಅವಘಡ

ಮುಂಬೈನ ಮಸೀದಿ ಸ್ಟೇಷನ್ ಬಳಿಯ ಕೊಳೆಗೇರಿ ಪ್ರದೇಶದಲ್ಲಿ ಸೋಮವಾರ ಭಾರೀ ಅಗ್ನಿ ಅವಘಡ ಸಂಭವಿಸಿತು.

ಮಹಾಕಾಲೇಶ್ವರನಿಗೆ ಪೂಜೆ

ಮಹಾಕಾಲೇಶ್ವರನಿಗೆ ಪೂಜೆ

ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಲೇಶ್ವರ ದೇಗುಲದಲ್ಲಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಕೆ.ಸಿಂಗ್ ಪೂಜೆ ಸಲ್ಲಿಸಿದರು.

ಸೋದರಳಿಯನ ಜತೆಗೆ ಸಲ್ಮಾನ್ ಖಾನ್

ಸೋದರಳಿಯನ ಜತೆಗೆ ಸಲ್ಮಾನ್ ಖಾನ್

ಬಾಲಿವುಡ್ ನಟ ಸಲ್ಮಾನ್ ಖಾನ್ ಮುಂಬೈನ 'ಬಿಗ್ ಬಾಸ್' ಟಿವಿ ಶೋ ಸೆಟ್ ನಲ್ಲಿ ಅಳಿಯ ಅಖಿಲ್ ನ ಜೊತೆಗೆ ಕಾಣಿಸಿಕೊಂಡರು.

ಗಣರಾಜ್ಯೋತ್ಸವ ತಯಾರಿ

ಗಣರಾಜ್ಯೋತ್ಸವ ತಯಾರಿ

ಗಣರಾಜ್ಯೋತ್ಸವ ಆಚರಣೆಗಾಗಿ ದೇಶವೇ ಸಜ್ಜಾಗುತ್ತಿದೆ. ಅದೇ ರೀತಿ ದೇಶದ ರಾಜಧಾನಿ ನವದೆಹಲಿಯ ಸಂಸತ್ ಭವನದ ಬಳಿ ಝಗಮಗಿಸುತ್ತಿದ್ದ ಕಾರಂಜಿ.

ಬೇಸಿಗೆ ಕಾಲದ ಬಟ್ಟೆ

ಬೇಸಿಗೆ ಕಾಲದ ಬಟ್ಟೆ

ನೆದರ್ಲೆಂಡ್ಸ್ ನ ಐರಿಸ್ ವ್ಯಾನ್ ಹರ್ಪೆನ್ ರೂಪಿಸಿರುವ ಬೇಸಿಗೆ ಕಾಲದ ವಸ್ತ್ರ ಧರಿಸಿದ್ದ ರೂಪದರ್ಶಿ ಪ್ಯಾರಿಸ್ ನಲ್ಲಿ ನಡೆದ ಬೇಸಿಗೆ ಫ್ಯಾಷನ್ ವಸ್ತ್ರಗಳ ಪ್ರದರ್ಶನದಲ್ಲಿ ಕಾಣಿಸಿಕೊಂಡಿದ್ದು ಹೀಗೆ.

English summary
A special photo feature with a major theme of Jallikattu and Republic day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X