ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾತ್ರೋರಾತ್ರಿ ಪನ್ನೀರ್ ಮಾಡಿದ್ದು ಧ್ಯಾನವೋ, ಬಂಡಾಯದ ತೀರ್ಮಾನವೋ?

|
Google Oneindia Kannada News

ಮಂಗಳವಾರ ರಾತ್ರಿಯಿಂದ ತಮಿಳುನಾಡಿನ ರಾಜಕೀಯದಲ್ಲಿ ಭಾರೀ ಬದಲಾವಣೆ ಕಾಣಿಸಿಕೊಂಡಿದೆ. ಹಸುವಿನಿಂಥ ಮನುಷ್ಯ ಎನಿಸಿಕೊಂಡಿದ್ದ ಪನ್ನೀರ್ ಸೆಲ್ವಂರಂಥ ಪನ್ನೀರ್ ಸೆಲ್ವಂ ಬಂಡಾಯದ ಬಾವುಟ ಹಾರಿಸಿದ್ದಾರೆ. ಇದರಿಂದ ಶಶಿಕಲಾ ನಟರಾಜನ್ ಮುಖ್ಯಮಂತ್ರಿ ಗಾದಿಗೆ ಏರುವುದು ನಿಂತು ಹೋಗುತ್ತದೆ ಅಂತಲ್ಲ.

ಆದರೆ, ಈ ವ್ಯಕ್ತಿ ಅಸಮಾಧಾನ ತೋರಿಸುತ್ತಾರೆ ಅನ್ನೋದು ನಿರೀಕ್ಷೆ ಕೂಡ ಮಾಡಲಾಗದ ಸಂಗತಿ. ರಾತ್ರೋರಾತ್ರಿ ಚೆನ್ನೈನ ಮರೀನಾ ಬೀಚ್ ನಲ್ಲಿರುವ ಜಯಲಲಿತಾ ಸಮಾಧಿ ಎದುರು ಧ್ಯಾನ ಮಾಡಿ ಬಂದ ಪನ್ನೀರ್ ಸೆಲ್ವಂ ದಿಢೀರ್ ಬಂಡಾಯ ಎದ್ದಿದ್ದು ಹೇಗೆ? ಇನ್ನು ಟಾಟಾ ಸನ್ಸ್ ನ ಮಧ್ಯಂತರ ಅಧ್ಯಕ್ಷ ರತನ್ ಟಾಟಾ ಬೆಂಗಳೂರಿಗೆ ಬಂದಿದ್ದರು.[ತಿರುಗಿ ಬಿದ್ದ ಪನ್ನೀರ್, ತ.ನಾಡು ರಾಜಕೀಯದ 8 ಸಾಧ್ಯತೆ]

ಮುಂಬೈನಲ್ಲಿ ನಟ ಓಂಪುರಿ ಶ್ರದ್ಧಾಂಜಲಿ ಸಭೆಯಲ್ಲಿ ಪತ್ನಿ ನಂದಿತಾ-ಮಗ ಇಶಾನ್ ಪಾಲ್ಗೊಂಡಿದ್ದರು. ಮುಂಬೈನ ಥಾಣೆಯಲ್ಲಿ ಅಪರಾಧ ವಿಭಾಗದ ಪೊಲೀಸರು ಮೂವತ್ತು ಲಕ್ಷ ರುಪಾಯಿಯಷ್ಟು ಹಳೆ 500, 1000 ರುಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ. ಯುಎಇಯಿಂದ ಬಂದ ಬಾಲಕನೊಬ್ಬನಿಗೆ ತುಂಬ ಅಪರೂಪದ ಶಸ್ತ್ರಚಿಕಿತ್ಸೆಯನ್ನು ನವದೆಹಲಿಯಲ್ಲಿ ಮಾಡಲಾಗಿದೆ. ಒಟ್ಟಾರೆ ತುಂಬ ಆಸಕ್ತಿಕರವಾದ ಸಂಗತಿಗಳ ಬಗ್ಗೆ ಫೋಟೋಗಳು ಇಲ್ಲಿವೆ.

ಮೂನ್ ಶಾಟ್ ವಾಹನ

ಮೂನ್ ಶಾಟ್ ವಾಹನ

ಟಾಟಾ ಸನ್ಸ್ ನ ಮಧ್ಯಂತರ ಅಧ್ಯಕ್ಷ ರತನ್ ಟಾಟಾ ಅವರು ವಿದ್ಯಾರ್ಥಿಗಳ ಜೊತೆಗೆ ಇಂಡಸ್ ಫೌಂಡೇಷನ್ ನ ಮೂನ್ ಶಾಟ್ ವಾಹನವನ್ನು ಬೆಂಗಳೂರಿನಲ್ಲಿ ಮಂಗಳವಾರ ಪ್ರದರ್ಶಿಸಿದರು.

ಧ್ಯಾನವೋ, ಬಂಡಾಯದ ತೀರ್ಮಾನವೋ

ಧ್ಯಾನವೋ, ಬಂಡಾಯದ ತೀರ್ಮಾನವೋ

ತಮಿಳುನಾಡು ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಮಂಗಳವಾರ ಚೆನ್ನೈನ ಮರೀನಾ ಬೀಚ್ ನಲ್ಲಿರುವ ಜಯಲಲಿತಾ ಸಮಾಧಿ ಎದುರು ಧ್ಯಾನ ಮಾಡಿದರು. ಕಳೆದ ಭಾನುವಾರವಷ್ಟೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಶಶಿಕಲಾ ನಟರಾಜನ್ ಅವರಿಗೆ ದಾರಿ ಮಾಡಿಕೊಟ್ಟಿರುವ ಒಪಿಎಸ್, ಇದೀಗ ಬಂಡಾಯದ ಧ್ವನಿ ಎತ್ತಿದ್ದಾರೆ.

ಹಳೇ ನೋಟುಗಳು ಪೊಲೀಸರ ವಶಕ್ಕೆ

ಹಳೇ ನೋಟುಗಳು ಪೊಲೀಸರ ವಶಕ್ಕೆ

ಮುಂಬೈನ ಥಾಣೆಯಲ್ಲಿ ಮೂವತ್ತು ಲಕ್ಷದಷ್ಟು 500, 1000 ರುಪಾಯಿಯ ಹಳೆ ನೋಟುಗಳನ್ನು ವಶಪಡಿಸಿಕೊಂಡಿದ್ದನ್ನು ಕ್ರೈಂ ಬ್ರ್ಯಾಂಚ್ ಪೊಲೀಸರು ಮಂಗಳವಾರ ಪ್ರದರ್ಶಿಸಿದರು.

ಓಂಪುರಿ ಶ್ರದ್ಧಾಂಜಲಿ

ಓಂಪುರಿ ಶ್ರದ್ಧಾಂಜಲಿ

ಮುಂಬೈನಲ್ಲಿ ಮಂಗಳವಾರ ಆಯೋಜಿಸಿದ್ದ ನಟ ಓಂಪುರಿ ಶ್ರದ್ಧಾಂಜಲಿ ಸಭೆಯಲ್ಲಿ ಓಂಪುರಿ ಅವರ ಪತ್ನಿ ನಂದಿತಾ, ಮಗ ಇಶಾನ್ ಮತ್ತು ಚಿತ್ರ ನಿರ್ದೇಶಕ ಶ್ಯಾಮ್ ಬೆನಗಲ್ ಭಾಗವಹಿಸಿದ್ದರು.

ಯುಎಇ ಬಾಲಕನಿಗೆ ಚಿಕಿತ್ಸೆ

ಯುಎಇ ಬಾಲಕನಿಗೆ ಚಿಕಿತ್ಸೆ

ಯುಎಇನಿಂದ ಬಂದ ಹದಿಮೂರು ವರ್ಷದ ಬಾಲಕ ಖಾಲಿದ್ ಮೊಹಮ್ಮದ್ ಇತ್ತೀಚೆಗೆ ನವದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಕ್ರಿಗ್ಲರ್ ನಜ್ಜರ್ ಸಿಂಡ್ರೋಂ ಚಿಕಿತ್ಸೆಯಾಗಿ ಅಪರೂಪದ ಯಕೃತ್ತು ಕಸಿ ಮಾಡಲಾಯಿತು.

English summary
National events with a major theme Tamil nadu political development represent through PTI photos.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X