ವಂದೇ ಭಾರತ್ ಎಕ್ಸ್‌ಪ್ರೆಸ್‌ಗಾಗಿ ಇತರೆ ರೈಲುಗಳ ನಿಲುಗಡೆ ವಿರೋಧಿಸಿ ಪ್ರತಿಭಟನೆ

ಎರ್ನಾಕುಲಂ, ನವೆಂಬರ್‌ 21: ವಂದೇ ಭಾರತ್ ರೈಲುಗಳು ಅಡೆತಡೆ ಇಲ್ಲದೆ ಸಂಚರಿಸಲು ಇತರೆ ರೈಲಗಳ ವೇಳಾಪಟ್ಟಿಯನ್ನು ಬದಲಾಯಿಸಲಾಗಿದೆ ಎಂದು ಆರೋಪಿಸಿ ಎರ್ನಾಕುಲಂ-ಕಾಯಂಕುಲಂ ಅನ್‌ರಿಸರ್ವ್ಡ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ. 06451) ನಲ್ಲಿ ಕಪ್ಪು ಮಾಸ್ಕ್ ಧರಿಸಿ ರೈಲಿನಲ್ಲಿ ಪ್ರಯಾಣಿಸಿದ ಪ್ರಯಾಣಿಕರು ಪ್ರತಿಭಟನೆ ನಡೆಸಿದರು.

ಎರ್ನಾಕುಲಂ- ಕಾಯಂಕುಲಂ ಎಕ್ಸ್‌ಪ್ರೆಸ್ ಸೇರಿದಂತೆ ಇತರೆ ರೈಲುಗಳ ಹಿಂದಿನ ವೇಳಾಪಟ್ಟಿಯನ್ನು ಎಂದಿನಂತೆ ಮುಂದುವರೆಸಬೇಕು. ವಂದೇ ಭಾರತ್‌ಗಾಗಿ ಇತರೆ ರೈಲುಗಳನ್ನು ವಿಳಂಬ ಮಾಡುವುದು ನಮ್ಮ ಕೆಲಸದ ಸ್ಥಳಗಳಿಗೆ ಸರಿಯಾದ ಸಮಯಕ್ಕೆ ತಲುಪುವುದು ಸೇರಿದಂತೆ ದೈನಂದಿನ ವೇಳಾಪಟ್ಟಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಪ್ರಯಾಣಿಕರು ಫಲಕಗಳನ್ನು ಹಿಡಿದಿದ್ದರು.

trains-for-vande-bharat-express

ಎರ್ನಾಕುಲಂ- ಕಾಯಂಕುಲಂ ಅನ್‌ರಿಸರ್ವ್ಡ್ ಎಕ್ಸ್‌ಪ್ರೆಸ್ ಎರ್ನಾಕುಲಂ ಜಂಕ್ಷನ್‌ನಿಂದ ಬೆಳಿಗ್ಗೆ 6 ಗಂಟೆಗೆ ಹೊರಡುತ್ತಿತ್ತು. ವಂದೇ ಭಾರತ್ ರೈಲು ಪ್ರಾರಂಭವಾದಗಿನಿಂದ ವೇಳಾಪಟ್ಟಿಯನ್ನು 6.05 ಕ್ಕೆ ಬದಲಾಯಿಸಲಾಯಿತು. ಈ ವಿಳಂಬದಿಂದಾಗಿ ಕುಂಬಳಂ ನಿಲ್ದಾಣದಲ್ಲಿ ಸುಮಾರು 40 ನಿಮಿಷದಿಂದ ಒಂದು ಗಂಟೆಯವರೆಗೆ ರೈಲು ನಿಲ್ಲಬೇಕಾಯಿತು. ನಂತರ ಆರಂಭದ ಸಮಯವನ್ನು 6.25 ಗಂಟೆಗೆ ಮರು ನಿಗದಿಪಡಿಸಲಾಗಿದ್ದು, ಹಲವಾರು ಪ್ರಯಾಣಿಕರಿಗೆ ತೊಂದರೆಯಾಗಿದೆ ಎಂದು ಅವರು ಹೇಳಿದರು.

ಆಲಪ್ಪುಳದ ಮೂಲಕ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ದಾರಿ ಮಾಡಿಕೊಡಲು ರೈಲುಗಳನ್ನು ತಡೆಹಿಡಿಯಲಾಗಿರುವುದರಿಂದ ಕಡಿಮೆ-ದೂರ ಪ್ರಯಾಣಿಕ ರೈಲುಗಳ ಪ್ರಯಾಣಿಕರು ತಮ್ಮ ಕೆಲಸದ ಸ್ಥಳಗಳು ಮತ್ತು ಮನೆಗಳನ್ನು ಸಮಯಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದು, ಎಂದಿನಂತೆ ಇತರೆ ರೈಲಿಗಳನ್ನು ಸರಿಯಾದ ಸಮಯಕ್ಕೆ ಓಡಿಸುವಂತೆ ಒತ್ತಾಯಿಸಿದ್ದಾರೆ.

ಬೆಂಗಳೂರು ಬೆಳಗಾವಿ ಪ್ರಾಯೋಗಿಕ ಸಂಚಾರ:

ಬೆಂಗಳೂರಿನಿಂದ ಬೆಳಗಾವಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಪ್ರಾಯೋಗಿಕ ಚಾಲನೆ ಮಂಗಳವಾರ ನಡೆಯಲಿದ್ದು, ಚೆನ್ನೈನಿಂದ ಎಂಟು ಬೋಗಿಗಳ ರೈಲು ಕೋಚ್‌ ಅನ್ನು ಸೇವೆಗೆ ನಿಯೋಜಿಸಲಾಗಿದೆ. ಸೋಮವಾರ ಸಂಜೆ ವಂದೇ ಭಾರತ್ ವಿಶೇಷ ರೈಲು (ಸಂಖ್ಯೆ 06031) ಚೆನ್ನೈನಿಂದ ಹೊರಟು ರಾತ್ರಿ 10 ಗಂಟೆ ಸುಮಾರಿಗೆ ಎಸ್‌ಎಂವಿಟಿ ಬೆಂಗಳೂರಿಗೆ ಆಗಮಿಸಿತು.

ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲು ರೈಲು ಓಡಿಸಲಾಗುತ್ತಿದೆ ಎಂದು ದಕ್ಷಿಣ ರೈಲ್ವೆ ತಿಳಿಸಿದರೆ, ಮಂಗಳವಾರ ಹುಬ್ಬಳ್ಳಿ-ಧಾರವಾಡ ಮೂಲಕ ಕೆಎಸ್‌ಆರ್ ಬೆಂಗಳೂರು ಮತ್ತು ಬೆಳಗಾವಿ ನಡುವೆ ಪ್ರಾಯೋಗಿಕ ಓಡಾಟಕ್ಕೆ ನಿಯೋಜಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದೆ.

ಬೆಂಗಳೂರಿನ ಹೆಚ್ಚುವರಿ ವಿಭಾಗೀಯ ರೈಲ್ವೇ ಮ್ಯಾನೇಜರ್ (ಆಡಳಿತ) ಕುಸುಮಾ ಹರಿಪ್ರಸಾದ್ ಅವರು ಚೆನ್ನೈನಿಂದ ರೈಲು ಸೆಟ್ ಅನ್ನು ಪ್ರಾಯೋಗಿಕವಾಗಿ ಓಡಿಸಲಾಗುವುದು. ಪ್ರಾಯೋಗಿಕ ಸಂಚಾರದಲ್ಲಿ ರೈಲು ಕೆಎಸ್ಆರ್ ಬೆಂಗಳೂರಿನಿಂದ ಬೆಳಿಗ್ಗೆ 5.45 ಕ್ಕೆ ಹೊರಟು ಮಧ್ಯಾಹ್ನ 1.30 ಕ್ಕೆ ಬೆಳಗಾವಿ ತಲುಪುತ್ತದೆ. ಹಿಂತಿರುಗುವ ದಿಕ್ಕಿನಲ್ಲಿ ಅದು ಬೆಳಗಾವಿಯಿಂದ ಮಧ್ಯಾಹ್ನ 2 ಗಂಟೆಗೆ ಹೊರಟು ರಾತ್ರಿ 10.10 ಕ್ಕೆ ಕೆಎಸ್‌ಆರ್ ಬೆಂಗಳೂರಿಗೆ ಆಗಮಿಸುತ್ತದೆ ಎಂದು ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+