ಮಾನಸಿಕ ಸ್ಥಿಮಿತ ಕಳೆದುಕೊಂಡ ಮೋದಿಯಿಂದ ದೇಶ ಸುರಕ್ಷಿತವೇ, ಆಪ್?

Written By:
Subscribe to Oneindia Kannada

ನವದೆಹಲಿ, ಆಗಸ್ಟ್ 2 (ಪಿಟಿಐ) : ಪಕ್ಷದ ಹನ್ನೆರಡನೇ ಶಾಸಕ ಬಂಧನಕ್ಕೊಳಗಾದ ನಂತರ ನಿರೀಕ್ಷೆಯಂತೆ ಆಮ್ ಆದ್ಮಿ ಪಕ್ಷದ ಮುಖಂಡರು ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ದ ಟೀಕಾಪ್ರಹಾರ ಮುಂದುವರಿಸಿದ್ದಾರೆ.

ಪ್ರತೀಕಾರ ತೆಗೆದುಕೊಳ್ಳುವ ಮನುಷ್ಯನ ಕೈಯಲ್ಲಿ ದೇಶ ಸುರಕ್ಷಿತವಾಗಿರುತ್ತದೆಯೇ, ಅನರ್ಹ ಪ್ರಧಾನಿ ಮೋದಿ ಏನಾದರೂ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆಯೇ ಎನ್ನುವ ಪದವನ್ನು ಆಮ್ ಆದ್ಮಿ ಪಕ್ಷದ ಮುಖಂಡ ಆಶಿಷ್ ಖೇತಾನ್ ಬಳಸಿದ್ದಾರೆ. (ಮುಂದುವರಿದ ಆಮ್ ಆದ್ಮಿ ಶಾಸಕರ ಬಂಧನ ಪರ್ವ)

ಪಕ್ಷದ ಕಾರ್ಯಕರ್ತೆ ಸೋನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಕರಣದ ಆರೋಪ ಹೊತ್ತಿರುವ ಆಮ್ ಆದ್ಮಿ ಪಕ್ಷದ ಶಾಸಕ ಶರದ್ ಚೌಹಾಣ್ ಅವರನ್ನು ದೆಹಲಿ ಪೊಲೀಸರು ಭಾನುವಾರ (ಜುಲೈ 31) ಬಂಧಿಸಿದ ನಂತರ, ಕೇಂದ್ರ ಸರಕಾರದ ವಿರುದ್ದ ಆಮ್ ಆದ್ಮಿ ಪಕ್ಷದ ಮುಖಂಡರ ಆಕ್ರೋಶ ತಾರಕಕ್ಕೇರಿದೆ.

ಪ್ರಧಾನಮಂತ್ರಿ ಎನ್ನುವ ಶಿಷ್ಟಾಚಾರಕ್ಕೂ ಬೆಲೆಕೊಡದೇ ಮೋದಿ ವಿರುದ್ದ ವಾಕ್ ಪ್ರಹಾರ ನಡೆಸಿದ ಆಶಿಷ್ ಖೇತಾನ್, ತನ್ನ ರಾಜಕೀಯ ವಿರೋಧಿಗಳ ಮೇಲೆ ದ್ವೇಷ ಕಾರುವ ಇವರಿಂದ ದೇಶ ಸುಭದ್ರವಾಗಿರಲು ಹೇಗೆ ಸಾಧ್ಯ. ಇವರೊಬ್ಬ ದೇಶ ಕಂಡ ಅತ್ಯಂತ ಅನರ್ಹ ಪ್ರಧಾನಿ ಎಂದು ಟೀಕಿಸಿದ್ದಾರೆ.

ಗುಜರಾತಿನ ಐಎಎಸ್ ಅಧಿಕಾರಿ ಪ್ರದೀಪ್ ಶರ್ಮಾ ಅವರನ್ನು ಉಲ್ಲೇಖಿಸಿ ಮಾತನಾಡುತ್ತಿದ್ದ ಆಶಿಷ್, ತಮ್ಮ ವಿರೋಧಿಗಳನ್ನು ಕ್ರಮಬದ್ದವಾಗಿ ಮೂಲೆಗೆ ತಳ್ಳುವ ಇವರಿಂದ ದೇಶಕ್ಕೆ ಮುಂದಿನ ದಿನದಲ್ಲಿ ಅಪಾಯ ಕಾದಿದೆ ಎಂದು ಭವಿಷ್ಯ ನುಡಿದಿದ್ದಾರೆ.

ದೆಹಲಿ ಸರಕಾರದ ಜನಪರ ಕೆಲಸವನ್ನು ಗುರುತಿಸುವ ಬದಲು ಕೇಂದ್ರ ಸರಕಾರ ನಮ್ಮ ಪಕ್ಷದ ಶಾಸಕರನ್ನು ಜೈಲಿಗೆ ಕಳುಹಿಸುವ ಕೆಲಸಕ್ಕೆ ಮುಂದಾಗಿದೆ. ಜನರು ಮೋದಿಗೆ ಮುಂದಿನ ದಿನಗಳಲ್ಲಿ ಸರಿಯಾದ ಪಾಠ ಕಲಿಸಲಿದ್ದಾರೆಂದು ಆಶಿಷ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಕೇಜ್ರಿವಾಲ್ ಸೇರಿದಂತೆ ಮೋದಿ ವಿರುದ್ದ ಆಪ್ ಮುಖಂಡರ ಕೆಲವೊಂದು ವಿವಾದಕಾರಿ ಹೇಳಿಕೆಗಳನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ...

ಮೋದಿ ವಿದ್ಯಾರ್ಹತೆ

ಪ್ರಧಾನಮಂತ್ರಿಯಂತಹ ಘನ ಸ್ಥಾನದಲ್ಲಿರುವ ಮೋದಿ ತಮ್ಮ ವಿದ್ಯಾಹರ್ತೆಯ ವಿಚಾರದಲ್ಲಿ ಇಡೀ ದೇಶಕ್ಕೆ ಸುಳ್ಳು ಹೇಳಿದ್ದಾರೆ. ಇವರು ಚುನಾವಣೆಯ ವೇಳೆ ನೀಡಿದ ಸರ್ಟಿಫಿಕೇಟ್ ಎಲ್ಲಾ ಬೋಗಸ್. ಮಾಧ್ಯಮದವರ ಮುಂದೆ ತೋರಿಸಲಾಗಿರುವ ಸರ್ಟಿಫಿಕೇಟ್ ಗಳು ಸೃಷ್ಟಿಸಿದ್ದು ಎಂದು ಕೇಜ್ರಿವಾಲ್ ಹೇಳಿದ್ದರು.

ಮೋದಿ ಸರ್ಕಾರದ ಷಡ್ಯಂತ್ರ

ಮೋದಿ ಸರ್ಕಾರದ ಷಡ್ಯಂತ್ರ

ದೆಹಲಿ ಸರ್ಕಾರದ ವಿರುದ್ಧ ಮೋದಿ ಸರ್ಕಾರ ಷಡ್ಯಂತ್ರ ನಡೆಸಿದೆ. ದೇಶದ ಎಲ್ಲಾ ಮುಖ್ಯಮಂತ್ರಿಗಳನ್ನು ಬಿಟ್ಟು ನನ್ನ ಮೇಲೆ ಹದ್ದಿನ ಕಣ್ಣು ಇಟ್ಟು ಮೋದಿ ಸರ್ಕಾರ ಏನು ಸಾಧಿಸುತ್ತಿದೆ. ಮುಂದೊಂದು ದಿನ ಮೋದಿ ನನ್ನನ್ನು ಸಾಯಿಸಲೂ ಬಹುದು - ಕೇಜ್ರಿವಾಲ್.

ಪ್ರಧಾನಿ ಮೋದಿಯಿಂದ ತುರ್ತು ಪರಿಸ್ಥಿತಿ ನಿರ್ಮಾಣ

ರಾಷ್ಟ್ರ ರಾಜಧಾನಿಯಲ್ಲಿ ಪ್ರಧಾನಿ ಮೋದಿ ತುರ್ತು ಪರಿಸ್ಥಿತಿಯಂತಹ ವಾತಾವರಣ ನಿರ್ಮಿಸಿದ್ದಾರೆ. ದೆಹಲಿಯನ್ನು ಬಂಧನ, ದಾಳಿ, ಭಯೋತ್ಪಾದನೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ನಾಯಕರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವುದು ಮೋದಿಯವರಿಗೆ ಹವ್ಯಾಸವಾಗಿದೆ ಎಂದು ಕೇಜ್ರಿವಾಲ್ ಟೀಕಿಸಿದ್ದರು.

ಪ್ರಧಾನಿ ಮೋದಿಗೆ ಧೈರ್ಯವಿಲ್ಲ

ಪ್ರಧಾನಿ ಮೋದಿಗೆ ಧೈರ್ಯವಿಲ್ಲ

ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಹಗರಣದಲ್ಲಿ 'ಆರೋಪಿ' ಸ್ಥಾನದಲ್ಲಿರುವ ಸೋನಿಯಾ ಗಾಂಧಿಯನ್ನು ಬಂಧಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧೈರ್ಯವಿಲ್ಲ. ಮೋದಿಯವರ ಶಿಕ್ಷಣಾರ್ಹತೆಯನ್ನು ಕಾಂಗ್ರೆಸ್ ಪ್ರಶ್ನಿಸುವುದಿಲ್ಲ - ಕೇಜ್ರಿವಾಲ್.

ಮೋದಿ ದೇಶದ ಕ್ಷಮೆ ಕೇಳಬೇಕು

ಮೋದಿ ದೇಶದ ಕ್ಷಮೆ ಕೇಳಬೇಕು

ಪಠಾಣ್ ಕೋಟ್ ದಾಳಿ ತನಿಖೆ ನಡೆಸಲು ಪಾಕಿಸ್ತಾನ ತನಿಖಾ ತಂಡ ಭಾರತಕ್ಕೆ ಬರಲು ಅವಕಾಶ ನೀಡಿದ ಕೇಂದ್ರ ಸರ್ಕಾರ ಭಾರತ ಮಾತೆಗೆ ಅವಮಾನ ಮಾಡಿದೆ. ಪ್ರಧಾನಿ ಮೋದಿ ದೇಶದ ಕ್ಷಮೆ ಕೇಳಬೇಕು. ಒಂದು ಕಡೆ "ಭಾರತ ಮಾತಾ ಕೀ ಜೈ" ಎಂದು ಒಂದು ಬುದ್ದಿ ಹೇಳುತ್ತಾ, ಮತ್ತೊಂದು ಕಡೆ ಐಎಸ್ ಐಗೆ ಭಾರತಕ್ಕೆ ಬರಲು ಅವಕಾಶ ಮಾಡಿಕೊಟ್ಟ ಬಿಜೆಪಿ ಸರ್ಕಾರ ದೇಶದ ಜನತೆಗೆ ಅವಮಾನ ಮಾಡಿದೆ - ಕೇಜ್ರಿವಾಲ್.

ಮೋದಿ ಒಬ್ಬ ಹೇಡಿ

ಪ್ರಧಾನಿ ಮೋದಿ ಒಬ್ಬ ಹೇಡಿ, ಸೈಕೋಪಾತ್. ಅವರಿಗೆ ನನ್ನನ್ನು ಎದುರಿಸಲು ಧೈರ್ಯವಿಲ್ಲದೇ ಸರಕಾರದ ಪ್ರಧಾನ ಕಾರ್ಯದರ್ಶಿ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ದ್ವೇಷದ ರಾಜಕಾರಣಕ್ಕೆ ಬಿಜೆಪಿ ಸರಿಯಾದ ಉದಾಹರಣೆ - ಕೇಜ್ರಿವಾಲ್.

ಮಹಿಳೆಯರಿಗೆ ರಕ್ಷಣೆಯಿಲ್ಲ

ಮಹಿಳೆಯರಿಗೆ ರಕ್ಷಣೆಯಿಲ್ಲ

ನಮ್ಮ ಶಾಸಕರನ್ನು ಬಂಧಿಸಲೆಂದೇ ಪೊಲೀಸರನ್ನು ಕೇಂದ್ರ ಗೃಹ ಸಚಿವಾಲಯ ನೇಮಿಸಿದೆ. ಹಾಗಾಗಿ, ಪೊಲೀಸರಿಗೆ ದೆಹಲಿಯ ಮಹಿಳೆಯರಿಗೆ ರಕ್ಷಣೆ ನೀಡಲು ಸಮಯವಿಲ್ಲ, ನಮ್ಮ ಎಷ್ಟಾದರೂ ಶಾಸಕರನ್ನು ಜೈಲಿಗೆ ಅಟ್ಟಿ ನಾವು ತಿಹಾರ್ ಜೈಲಿನಿಂದಲೇ ಅಧಿಕಾರ ನಡೆಸಿ ತೋರಿಸುತ್ತೇವೆ - ಕೇಜ್ರಿವಾಲ್.

ಕೆಲಸ ಮಾಡುವುದಿಲ್ಲ, ಮಾಡಲೂ ಬಿಡುವುದಿಲ್ಲ

ಮೋದಿ ಖುದ್ದು ಕೆಲಸ ಮಾಡುವುದಿಲ್ಲ, ಮಾಡುವವರಿಗೂ ಕೆಲಸ ಮಾಡಲು ಬಿಡುವುದಿಲ್ಲ. ಕೇಂದ್ರ ಸರಕಾರ ದೆಹಲಿಯ ಹೆಡ್ ಮಾಸ್ಟರಾ? ದೆಹಲಿಯ ಜನತೆಯ ಮೇಲೆ ದ್ವೇಷ ಸಾಧಿಸಬೇಡಿ - ಕೇಜ್ರಿವಾಲ್.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
After the arrest of its Narela MLA Sharad Chauhan, the Aam Aadmi Party has launched a sharp attack on PM Narendra Modi asking whether he (PM Modi) has lost his "mental balance" and questioned whether the country is "safe" in the hands of a person who acts with such "vengeance".
Please Wait while comments are loading...