ಲೋಕಸಭಾ ಚುನಾವಣೆಯಲ್ಲಿ ಬ್ರ್ಯಾಂಡ್ ಮೋದಿಗೆ ಸವಾಲು ಎಸೆಯುತ್ತಿರುವುದು ಯಾರು ಗೊತ್ತಾ?
ದೇಶದಲ್ಲಿ ಸದ್ಯ ಚುನಾವಣೆಗಳ ಬಿಸಿ ಜೋರಾಗಿದೆ. ಎಲ್ಲ ಪಕ್ಷಗಳು ಚುನಾವಣೆಗಳ ಮೇಲೆ ದೃಷ್ಟಿ ನೆಟ್ಟಿವೆ. ಇನ್ನು ರಾಷ್ಟ್ರೀಯ ಪಕ್ಷಗಳ ಮುಖಂಡರು ಶತಾಯ ಗತಾಯ ಚುನಾವಣೆ ಗೆಲ್ಲಲೇ ಬೇಕು ಎಂದು ಪಣ ತೊಟ್ಟಿದ್ದಾರೆ. ಈ ನಡುವೆ ಮೋದಿ ಬ್ರ್ಯಾಂಡ್ ಬಗ್ಗೆ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಮಾತನಾಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಪ್ರಶಾಂತ್ ಕಿಶೋರ್, ಮೋದಿ ಅವರಿಗೆ ಯಾರೂ ಸವಾಲೇ ಹಾಕುತ್ತಿಲ್ಲ ಎಂದು ಏನಿಲ್ಲ. ಯಾವುದೇ ರಾಜಕೀಯ ಪಕ್ಷಗಳು ಅವರಿಗೆ ಸವಾಲು ಹಾಕಲಿ ಬಿಡಲಿ. ಆದರೆ, ಜನರು ಪ್ರಧಾನಿಗೆ ಸವಾಲು ಎಸೆಯುತ್ತಿದ್ದಾರೆ. ಇನ್ನು ಪ್ರಶಾಂತ್ ಅವರ ಅನಿಸಿಕೆಯಂತೆ ವಿರೋಧ ಪಕ್ಷಗಳ ಸರ್ಕಾರದ ವಿರುದ್ಧ ಧ್ವನಿ ಎತ್ತುವಲ್ಲಿ ಹಿಂದೆ ಬಿದ್ದರ ಬಹುದು, ಆದರೆ ಸರ್ಕಾರದ ವಿರುದ್ಧ ಜನರು ರಸ್ತೆಗಿಳಿದು ಪ್ರತಿಭಟನೆ ಮಾಡುತ್ತಿರುವುದು ಎಚ್ಚರಿಕೆಯ ಗಂಟೆಯಾಗಿದೆ ಎಂದಿದ್ದಾರೆ.

ಭಾರತದಂತಹ ದೇಶದಲ್ಲಿ 60 ಕೋಟಿಗೂ ಹೆಚ್ಚಿನ ಜನರ ದಿನ ಆದಾಯ 100 ರೂಪಾಯಿಗಿಂತ ಹೆಚ್ಚು ದುಡಿಯುತ್ತಿಲ್ಲ. ಈ ದೇಶದಲ್ಲಿ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಯಾವಾಗಲೂ ವೀಕ್ ಆಗಲು ಸಾಧ್ಯವೇ ಇಲ್ಲ. ನಾವೆಲ್ಲಾ ಹೀಗೆ ತಿಳಿಯುವುದು ತಪ್ಪಾಗಿದೆ. ವಿರೋಧಪಕ್ಷಗಳು ಕೊಂಚ ಮೃದು ಧೋರಣೆ ತೋರಬಹುದು, ಆದರೆ ದೇಶವಾಸಿಗಳು ನಿಶ್ಯಕ್ತರಾಗಲು ಸಾಧ್ಯವೇ ಇಲ್ಲ ಎಂದು ಪ್ರಶಾಂತ್ ಕಿಶೋರ್ ತಿಳಿಸಿದ್ದಾರೆ.
ದೇಶದಲ್ಲಿ ಎಷ್ಟು ಜನ ಖುಷಿಯಾಗಿದ್ದಾರೆ?
ಪ್ರಶಾಂತ್ ಕಿಶೋರ್ ಸರ್ಕಾರದ ವಿರುದ್ಧ ವಾದ ಮಂಡಿಸಿ ಅಂಕಿಅಂಶಗಳನ್ನು ಹಂಚಿಕೊಂಡಿದ್ದಾರೆ. ಯಾವ ಪಕ್ಷಕ್ಕೂ ಶೇ.50ರಷ್ಟು ಮತಗಳು ಬರುವುದಿಲ್ಲ. ಸರಳ ಭಾಷೆಯಲ್ಲಿ, 100 ರಲ್ಲಿ 40 ಜನರು ಪ್ರಧಾನಿಗೆ ಮತ ಹಾಕುತ್ತಾರೆ.

ಆ 40 ಜನ ಅವರ ಕೆಲಸ, ಹಿಂದುತ್ವ, ರಾಮಮಂದಿರ, ಆರ್ಟಿಕಲ್ 370 ಅನ್ನು ಬೆಂಬಲಿಸುತ್ತಾರೆ. ಒಟ್ಟಿನಲ್ಲಿ 40 ಜನ ಮಾತ್ರ ಖುಷಿಯಲ್ಲಿದ್ದಾರೆ, 60 ರಿಂದ 62 ಜನ ನೆಮ್ಮದಿ ಇಂದ ಇಲ್ಲ. ಬಿಜೆಪಿ ಮುಂದೆ ಗ್ರಾಮೀಣ ಬಿಕ್ಕಟ್ಟು ದೊಡ್ಡ ಸಮಸ್ಯೆಯಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಮೋದಿ ಬ್ರ್ಯಾಂಡ್‌ನ ಶಕ್ತಿ ಕ್ಷೀಣ
ಕಳೆದ ಎರಡು ಚುನಾವಣೆಗಳಿಗೆ ಹೋಲಿಸಿದರೆ ದೇಶದಲ್ಲಿ ಪ್ರಧಾನಿ ಮೋದಿ ಬ್ರ್ಯಾಂಡ್ ಕಡಿಮೆ ಆಗುತ್ತಿದೆ ಎಂದು ತಿಳಿಸಿದ್ದಾರೆ. 2014 ಮತ್ತು 2019ಕ್ಕೆ ಹೋಲಿಸಿದರೆ ಮೋದಿ ಬ್ರ್ಯಾಂಡ್‌ನ ಶಕ್ತಿ ಕಡಿಮೆಯಾಗುತ್ತಿದೆ. 2014ರಲ್ಲಿ ಮತದಾರರಲ್ಲಿ ಉತ್ಸಾಹವಿತ್ತು.

2019 ರಲ್ಲಿ, ಸರ್ಕಾರವು ಅಭಿವೃದ್ಧಿಗೆ ಇನ್ನೂ ಐದು ವರ್ಷಗಳನ್ನು ಪಡೆಯಬೇಕು ಎಂದು ಜನರು ಭಾವಿಸಿದರು. ಮೋದಿ ಸರ್ಕಾರ ಬಂದರೆ ದೇಶ ಬದಲಾಗುತ್ತದೆ ಎಂದು ದೊಡ್ಡ ವರ್ಗ ನಂಬಿತ್ತು ಎಂದು ತಿಳಿಸಿದ್ದಾರೆ.
2024 ರ ಲೋಕ ಸಭಾ ಚುನಾವಣೆಯಲ್ಲಿ ಜನರು ಪರ್ಯಾಯವಿಲ್ಲ ಎಂದು ಭಾವಿಸುತ್ತಾರೆ. 2014ರಿಂದ 2019ರ ಅವಧಿಯಲ್ಲಿ ಬಿಜೆಪಿ ಸಾಧನೆ ಶೇ.3ರಷ್ಟು ಕಡಿಮೆಯಾಗಿದೆ ಎಂದು ಕಿಶೋರ್ ಹೇಳಿದ್ದಾರೆ. ರಾಮ ಮಂದಿರದ ವಿಚಾರವಾಗಿ ಅವರಿಗೆ ಹೆಚ್ಚು ಮತಗಳು ಬರುತ್ತಿಲ್ಲ ಎಂಬುದನ್ನು ಅವರು ಉಲ್ಲೇಖಿಸಿದ್ದಾರೆ.











Click it and Unblock the Notifications