ಸನ್ನಿ ಲಿಯೋನ್ ಕಾಂಡೋಮ್ 'ಆಡ್' ವಿರುದ್ಧ ಸಮನ್ಸ್
ನವದೆಹಲಿ, ಸೆ. 14: ಕನ್ನಡದ 'ಲವ್ ಯೂ ಆಲಿಯಾ' ಚಿತ್ರದಲ್ಲಿ ಸೃಜನ್ ಜೊತೆ ಕುಣಿಯಲು ಬಂದ ಮಾಜಿ ಪೋರ್ನ್ ತಾರೆ ಸನ್ನಿ ಲಿಯೋನ್ ವಿರುದ್ಧ ಪೊಲೀಸರು ಸಮನ್ಸ್ ಜಾರಿಗೊಳಿಸಿದ್ದಾರೆ. ಎಂದೋ ಯಾವುದೋ ಕಾಂಡೋಮ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಸನ್ನಿಗೆ ಈಗ ತೊಂದರೆ ಶುರುವಾಗಿದೆ.
ಲೂಧಿಯಾನಾ ಪೊಲೀಸರು ಸನ್ನಿ ಲಿಯೋನ್ ಇರುವ ಕಾಂಡೋಮ್ ಜಾಹೀರಾತು ಚಿತ್ರೀಕರಿಸಿದ ಸಂಸ್ಥೆ ಹಾಗೂ ಸನ್ನಿ ವಿರುದ್ಧ ಸಮನ್ಸ್ ಜಾರಿ ಮಾಡಿದ್ದಾರೆ. ಸನ್ನಿ ಲಿಯೋನ್ ವಿರುದ್ಧ ರಕ್ಷಾ ಜ್ಯೋತಿ ಫೌಂಡೇಷನ್ ಎಂಬ ಸಂಸ್ಥೆ ದೂರು ನೀಡಿತ್ತು. ಸನ್ನಿ ಹಾಗೂ ಜಾಹೀರಾತು ಸಂಸ್ಥೆ ವಿರುದ್ಧ ಪೊಲೀಸರು ಕ್ರಿಮಿನಲ್ ಕೇಸ್ ದಾಖಲಿಸಿಕೊಂಡಿದ್ದರು.

ಸಾರ್ವಜನಿಕರು ನೋಡುವಂಥ ಜಾಹೀರಾತು ಇದಾಗಿಲ್ಲ, ಯಾವುದೇ ಸೆನ್ಸಾರ್ ಇಲ್ಲದೆ ಅಶ್ಲೀಲ ಜಾಹೀರಾತು ಎಲ್ಲೆಡೆ ಲಭ್ಯವಾಗುತ್ತಿದೆ. ಇದೆಲ್ಲ ಗೊತ್ತಿದ್ದರೂ ಸನ್ನಿ ಲಿಯೋನ್ ಅವರು ಕಾಂಡೋಮ್ ಉತ್ಪನ್ನ ಪರ ಜಾಹೀರಾತಿನಲ್ಲಿ ಭಾಗವಹಿಸಿದ್ದಾರೆ ಎಂದು ಎನ್ ಜಿಒ ದೂರಿದೆ.
ಪೊಲೀಸ್ ಆಯುಕ್ತ ಪರಮ್ ರಾಜ್ ಸಿಂಗ್ ಉಮ್ರನಂಗಲ್ ಅವರು ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಕೇಸು ದಾಖಲಿಸಿಕೊಂಡ ಪೊಲೀಸರಿಗೆ ಸೂಚಿಸಿದ್ದಾರೆ. ಈಗ ಬಗ್ಗೆ ಉತ್ತರಿಸುವಂತೆ ಸನ್ನಿ ಲಿಯೋನ್ ಹಾಗೂ ಜಾಹೀರಾತು ಸಂಸ್ಥೆಗೆ ಒಂದು ವಾರಗಳ ಕಾಲ ಕಾಲಾವಾಕಾಶ ನೀಡಲಾಗಿದೆ.
ಇಂಥ ಜಾಹೀರಾತಿನಿಂದ ನಗ್ನತೆಗೆ ಬೆಂಬಲ ನೀಡಿದಂತಾಗುತ್ತದೆ, ಕಾಮಪ್ರಚೋದಕ ಜಾಹೀರಾತುಗಳಿಗೆ ಕಡಿವಾಣ ಅಗತ್ಯ. ಈ ಬಗ್ಗೆ ಪ್ರಧಾನಿ ಮೋದಿ ಅವರಿಗೂ ಪತ್ರ ಬರೆಯಲಾಗಿದೆ ಎಂದು ಎನ್ ಜಿಒ ಅಧ್ಯಕ್ಷ ಅಶ್ವನಿ ಬೆಹಾಲ್ ಹೇಳಿದ್ದಾರೆ.
ಇತ್ತೀಚೆಗೆ ಸನ್ನಿ ಇರುವ ಕಾಂಡೋಮ್ ಜಾಹೀರಾತಿನಿಂದ ಅತ್ಯಾಚಾರ ಹೆಚ್ಚಾಗುತ್ತಿದೆ ಎಂದು ಸಿಪಿಐ ನಾಯಕ ಹೇಳಿಕೆ ನೀಡಿ ನಾಲಿಗೆ ಕಚ್ಚಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಸನ್ನಿ ಹಾಗೂ ಸನ್ನಿ ಪರ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮೇಲೆ ಸಿಪಿಐ ಮುಖಂಡ ಪೆಚ್ಚಾಗಿ ಉತ್ತರಿಸಿದ್ದನ್ನು ನೆನಯಬಹುದು.
ದೆಹಲಿ ಮಹಿಳಾ ಆಯೊಗದ ಬರ್ಖಾ ಶುಕ್ಲಾ ಅವರು ಕೂಡಾ ಇಂಥ ಜಾಹೀರಾತಿಗೆ ಕಡಿವಾಣ ಹಾಕಬೇಕು. ಟಿವಿ ಆಡ್ಸ್ ಗೂ ಸೆನ್ಸಾರ್ ಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. (ಒನ್ ಇಂಡಿಯಾ ಸುದ್ದಿ)












Click it and Unblock the Notifications