ಚೀ... ಚೀ... ಎಂಥಾ ಅಸಹ್ಯ! ಮೆಟ್ರೋದಲ್ಲಿ ಹೀಗೆ ಮಾಡಿದ ಈ ವ್ಯಕ್ತಿ ಕಂಡು ಬಂದರೆ ಈ ನಂಬರ್‌ಗೆ ಕರೆ ಮಾಡಿ...

ಚೀ... ಚೀ... ಎಂಥಾ ಅಸಹ್ಯ! ಮೆಟ್ರೋ ಇರುವುದು ಸಾರ್ವಜನಿಕರ ಪ್ರಯಾಣಕ್ಕಾಗಿ, ಇಂತಹ ಅಸಭ್ಯ ವರ್ತನೆಗೆ ಅಲ್ಲ ಎಂದು ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಮುಖ್ಯಸ್ಥೆ ಸ್ವಾತಿ ಮಲಿವಾಲ್ ಆಕ್ರೋಶ ಹೊರ ಹಾಕಿದ್ದಾರೆ. ಅಷ್ಟಕ್ಕೂ ಡಿಸಿಡಬ್ಲ್ಯು ಹೀಗೆ ಹೇಳಲು ಕಾರಣ ದೆಹಲಿ ಮೆಟ್ರೋದಲ್ಲಿ ವ್ಯಕ್ತಿಯೊಬ್ಬ ಹಸ್ತಮೈಥುನ ಮಾಡುವ ದೃಶ್ಯ ವೈರಲ್ ಆಗಿರುವುದು.

ಹೌದು.. ಇತ್ತೀಚೆಗೆ ದೆಹಲಿ ಮೆಟ್ರೋದಲ್ಲಿ ವ್ಯಕ್ತಿಯೊಬ್ಬರು ಹಸ್ತಮೈಥುನ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಹೊರಬಿದ್ದ ಬಳಿಕ ದೆಹಲಿ ಮೆಟ್ರೋ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ. ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು ಈ ಅಸಹ್ಯಕರ ಮತ್ತು ಹೇಯ ಘಟನೆಯ ವಿರುದ್ಧ ಸಿಡಿದೆದ್ದಿದ್ದಾರೆ. ಬಳಿಕ ಈ ಘಟನೆಯ ವಿರುದ್ಧ ದೆಹಲಿ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ. ವಿಡಿಯೋ ವೈರಲ್ ಆದಾಗಿನಿಂದ ಈ ವ್ಯಕ್ತಿಯ ಹುಡುಕಾಟವನ್ನು ತೀವ್ರಗೊಳಿಸಿದ್ದಾರೆ.

Delhi Metro

ದೆಹಲಿ ಪೊಲೀಸರು ಈ ಆರೋಪಿಯನ್ನು ವಾಂಟೆಡ್ ಲಿಸ್ಟ್‌ಗೆ ಸೇರಿಸಿದ್ದಾರೆ. ಜೊತೆಗೆ ಈ ವ್ಯಕ್ತಿಯನ್ನು ಗುರುತಿಸಲು ಡಿಸಿಪಿ ಮೆಟ್ರೋ ಸಾರ್ವಜನಿಕರ ಸಹಾಯವನ್ನು ಕೋರಿದ್ದಾರೆ. ದೆಹಲಿ ಮೆಟ್ರೋ ಕೂಡ ಇದಕ್ಕಾಗಿ ಸಂಖ್ಯೆಯನ್ನು ಹಂಚಿಕೊಂಡಿದೆ.

ವಾಂಟೆಡ್ ಲಿಸ್ಟ್‌ನಲ್ಲಿ ಹಸ್ತಮೈಥುನ ಮಾಡಿಕೊಂಡ ಆರೋಪಿ

ದೆಹಲಿ ಮೆಟ್ರೋದಲ್ಲಿ ಹಸ್ತಮೈಥುನ ಮಾಡಿಕೊಂಡ ವ್ಯಕ್ತಿ ಇದೀಗ ಎಫ್‌ಐಆರ್‌ನಲ್ಲಿ ವಾಂಟೆಡ್ ಪಟ್ಟಿಯನ್ನು ನಮೂದಿಸಲಾಗಿದೆ ಎಂದು ಡಿಸಿಪಿ ಮೆಟ್ರೋ ಟ್ವೀಟ್ ಮಾಡಿದ್ದಾರೆ. ದಯವಿಟ್ಟು ಈ ವ್ಯಕ್ತಿ ಕಂಡುಬಂದರೆ IGIA ಮೆಟ್ರೋದ SHO ಗೆ 8750871326 ಅಥವಾ 1511 (ನಿಯಂತ್ರಣ ಕೊಠಡಿ) ಅಥವಾ 112 (ಪೊಲೀಸ್ ಸಹಾಯವಾಣಿ) ಗೆ ತಿಳಿಸಿ. ಮಾಹಿತಿ ನೀಡುವವರ ಗುರುತನ್ನು ಗೌಪ್ಯವಾಗಿಡಲಾಗುವುದು ಎಂದು ಡಿಸಿಪಿ ಟ್ವೀಟ್ ಮಾಡಿದ್ದಾರೆ.

ದೆಹಲಿ ಮಹಿಳಾ ಆಯೋಗವೂ ನೋಟಿಸ್

ಈ ವೀಡಿಯೋ ಮುನ್ನೆಲೆಗೆ ಬಂದ ನಂತರ ದೆಹಲಿ ಮಹಿಳಾ ಆಯೋಗ ದೆಹಲಿ ಮೆಟ್ರೋಗೆ ನೋಟಿಸ್ ಜಾರಿ ಮಾಡಿದ್ದು, ದೆಹಲಿ ಮೆಟ್ರೋದಲ್ಲಿ ವ್ಯಕ್ತಿಯೊಬ್ಬರು ನಾಚಿಕೆಯಿಲ್ಲದೆ ಹಸ್ತಮೈಥುನ ಮಾಡಿಕೊಳ್ಳುತ್ತಿರುವ ವೈರಲ್ ವಿಡಿಯೋವೊಂದು ಮುನ್ನೆಲೆಗೆ ಬಂದಿದೆ. ಇದು ಸಂಪೂರ್ಣ ಹೇಯ ಕೃತ್ಯ. ಈ ನಾಚಿಕೆಗೇಡಿನ ಕೃತ್ಯದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದೆಹಲಿ ಪೊಲೀಸರು ಮತ್ತು ದೆಹಲಿ ಮೆಟ್ರೋಗೆ ನಾನು ನೋಟಿಸ್ ನೀಡುತ್ತಿದ್ದೇನೆ. ದೆಹಲಿ ಮೆಟ್ರೋದಲ್ಲಿ ಇಂತಹ ಪ್ರಕರಣಗಳು ಹೆಚ್ಚು ಹೆಚ್ಚು ಮುನ್ನೆಲೆಗೆ ಬರುತ್ತಿದ್ದು, ಮೆಟ್ರೋದಲ್ಲಿ ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಮಲಿವಾಲ್ ಹೇಳಿದ್ದರು.

Delhi Metro

ಘಟನೆ ಏನು?

ವಾಸ್ತವವಾಗಿ ದೆಹಲಿ ಮೆಟ್ರೋದಲ್ಲಿ ಈ ನಾಚಿಕೆಗೇಡಿನ ವೀಡಿಯೊ ಕಾಣಿಸಿಕೊಂಡಿದೆ. ಇದರಲ್ಲಿ ಒಬ್ಬ ವ್ಯಕ್ತಿ ಹುಡುಗಿಯ ಪಕ್ಕದ ಸೀಟಿನಲ್ಲಿ ಕುಳಿತು ಹಸ್ತಮೈಥುನ ಮಾಡುತ್ತಿರುವುದು ಕಂಡುಬಂದಿದೆ. ಒಟ್ಟು 27 ಸೆಕೆಂಡ್‌ಗಳ ಈ ವೈರಲ್ ವಿಡಿಯೋದಲ್ಲಿ ಮೆಟ್ರೋ ರೈಲಿನಲ್ಲಿದ್ದ ಯುವಕನೊಬ್ಬ ಹಸ್ತಮೈಥುನ ಮಾಡುತ್ತಿದ್ದು, ಜೊತೆಗೆ ಮೊಬೈಲ್ ಫೋನ್ ನೋಡುತ್ತಿದ್ದಾನೆ. ಅವರು ಪೋರ್ನ್ ವಿಡಿಯೋ ನೋಡುತ್ತಿರುವಂತೆ ತೋರುತ್ತಿದೆ. ಈ ದೃಶ್ಯವನ್ನು ಆರೋಪಿಯ ಎದುರು ಕುಳಿತ ಪ್ರಯಾಣಿಕರೊಬ್ಬರು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ದೆಹಲಿ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+