ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇವಿಎಂ ಹ್ಯಾಕ್ ಹೇಳಿಕೆ : ಸೈಯದ್ ವಿರುದ್ಧ ದೂರು ದಾಖಲು

|
Google Oneindia Kannada News

ನವದೆಹಲಿ, ಜನವರಿ 24 : ಸ್ವಯಂ ಘೋಷಿತ ಸೈಬರ್ ತಜ್ಞ ಸೈಯದ್ ಸೂಜಾ ವಿರುದ್ಧ ದೆಹಲಿ ಪೊಲೀಸರು ದೂರು ದಾಖಲು ಮಾಡಿಕೊಂಡಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಇವಿಎಂ ಹ್ಯಾಕ್ ಮಾಡಲಾಗಿತ್ತು ಎಂದು ಸೂಜಾ ನೀಡಿದ ಹೇಳಿಕೆ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ.

ಕೇಂದ್ರ ಚುನಾವಣಾ ಆಯೋಗ ಸೈಯದ್ ಸೂಜಾ ವಿರುದ್ಧ ನೀಡಿದ ದೂರನ್ನು ದೆಹಲಿ ಪೊಲೀಸರು ದಾಖಲು ಮಾಡಿಕೊಂಡಿದ್ದಾರೆ. ಐಪಿಸಿ ಸೆಕ್ಷನ್‌ಗಳನ್ನು ಉಲ್ಲಂಘಿಸಿ, ಹೇಳಿಕೆ ನೀಡಿ ಸಾರ್ವಜನಿಕರಲ್ಲಿ ಗೊಂದಲ ಉಂಟು ಮಾಡುವ ಸೈಯದ್ ವಿರುದ್ಧ ತನಿಖೆ ನಡೆಸಬೇಕು ಎಂದು ಆಯೋಗ ಮನವಿ ಮಾಡಿದೆ.

ಸ್ಫೋಟಕ ಸುದ್ದಿ: ಇವಿಎಂ ಹ್ಯಾಕ್ ಬಗ್ಗೆ ತಿಳಿದಿದ್ದಕ್ಕೆ ಗೋಪಿನಾಥ್ ಮುಂಡೆ ಹತ್ಯೆ?ಸ್ಫೋಟಕ ಸುದ್ದಿ: ಇವಿಎಂ ಹ್ಯಾಕ್ ಬಗ್ಗೆ ತಿಳಿದಿದ್ದಕ್ಕೆ ಗೋಪಿನಾಥ್ ಮುಂಡೆ ಹತ್ಯೆ?

EVM hacker Syed Shuja

ಸೈಯದ್ ಸೂಜಾ ಅವರು ಐಪಿಸಿ ಸೆಕ್ಷನ್ 505(1) (ಬಿ)ಯನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಚುನಾವಣಾ ಆಯೋಗ ದೂರಿನಲ್ಲಿ ಹೇಳಿದೆ. 'ನಾನು ಇವಿಎಂ ಡಿಸೈನ್ ಮಾಡಿದ ತಂಡದಲ್ಲಿದ್ದೆ ಭಾರತದ ಚುನಾವಣೆಯಲ್ಲಿ ಬಳಸಿದ ಇವಿಎಂ ಹ್ಯಾಕ್ ಮಾಡಿದ್ದೆ' ಎಂದು ಜನವರಿ 21ರಂದು ಸೈಯದ್ ಹೇಳಿಕೆ ನೀಡಿದ್ದ.

'ಲೋಕಸಭೆ ಚುನಾವಣೆಗೆ ಬ್ಯಾಲೆಟ್ ಪೇಪರ್ಸ್ ಇರಲಿ, ಇವಿಎಂ ಬೇಡ''ಲೋಕಸಭೆ ಚುನಾವಣೆಗೆ ಬ್ಯಾಲೆಟ್ ಪೇಪರ್ಸ್ ಇರಲಿ, ಇವಿಎಂ ಬೇಡ'

ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಸೈಯದ್ ಸೂಜಾ ವಿರುದ್ಧ ದೂರು ದಾಖಲಾಗಿದೆ. ಆತಂಕ ಸೃಷ್ಟಿ ಮಾಡುವ ವದಂತಿಗಳನ್ನು ಹರಡುತ್ತಿದ್ದಾರೆ ಎಂಬ ಆರೋಪವನ್ನು ಅವರ ವಿರುದ್ಧ ಚುನಾವಣಾ ಆಯೋಗ ಮಾಡಿದೆ.

ಇವಿಎಂ ಹ್ಯಾಕ್ ಬಗ್ಗೆ ಮಾತನಾಡಿದ ಶುಜಾ ವಿರುದ್ಧ ಎಫ್ಐಆರ್?ಇವಿಎಂ ಹ್ಯಾಕ್ ಬಗ್ಗೆ ಮಾತನಾಡಿದ ಶುಜಾ ವಿರುದ್ಧ ಎಫ್ಐಆರ್?

English summary
Delhi Police Wednesday registered a case based on a complaint filed by the Election Commission regarding allegations of hacking EVMs and rigging polls levelled by self-proclaimed cyber expert Syed Shuja.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X