ಕೋವಿಡ್ ನಿರ್ವಹಣೆ: ನರವಾಣೆ ಜೊತೆ ಪ್ರಧಾನಿ ಮೋದಿ ಚರ್ಚೆ

ನವದೆಹಲಿ, ಏಪ್ರಿಲ್ 29: ಭಾರತೀಯ ಸೇನಾ ಪಡೆಯ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಇಂದು ಭೇಟಿ ಮಾಡಿದರು.
ಕೋವಿಡ್ ನಿರ್ವಹಣೆಗಾಗಿ ಸೇನೆಯ ನೆರವಿನ ವಿವಿಧ ಉಪಕ್ರಮಗಳ ಕುರಿತಂತೆ ಇಬ್ಬರು ಚರ್ಚಿಸಿದರು ಎಂದು ಪ್ರಧಾನಿ ಸಚಿವಾಲಯ ಹೇಳಿದೆ.

ಸೇನೆಯ ವೈದ್ಯಕೀಯ ಸಿಬ್ಬಂದಿಗಳನ್ನು ವಿವಿಧ ರಾಜ್ಯ ಸರ್ಕಾರಗಳ ಸೇವೆಗೆ ಲಭ್ಯವಾಗುವಂತೆ ಮಾಡಲಾಗಿದೆ ಎಂದು ಜನರಲ್ ಎಂ.ಎಂ. ನರವಾಣೆ ಅವರು ಪ್ರಧಾನಮಂತ್ರಿಯವರಿಗೆ ತಿಳಿಸಿದರು. ದೇಶದ ವಿವಿಧ ಭಾಗಗಳಲ್ಲಿ ತಾತ್ಕಾಲಿಕ ಆಸ್ಪತ್ರೆಗಳನ್ನು ಸೇನೆ ಸ್ಥಾಪಿಸುತ್ತಿದೆ ಎಂದು ಅವರು ತಿಳಿಸಿದರು.

ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ನಾಗರಿಕರಿಗಾಗಿ ಸೇನೆ ತನ್ನ ಆಸ್ಪತ್ರೆಗಳನ್ನು ತೆರೆಯುತ್ತಿದೆ ಎಂದು ಜನರಲ್ ಎಂ.ಎಂ. ನರವಾಣೆ ಅವರು ಪ್ರಧಾನಮಂತ್ರಿಯವರಿಗೆ ತಿಳಿಸಿದರು. ನಾಗರಿಕರು ತಮಗೆ ಹತ್ತಿರದ ಸೇನಾ ಆಸ್ಪತ್ರೆಗಳನ್ನು ಸಂಪರ್ಕಿಸಬಹುದು ಎಂದೂ ತಿಳಿಸಿದರು.

PM reviews Army’s preparedness & initiatives for Covid management

ಆಮದು ಮಾಡಿಕೊಳ್ಳಲಾದ ಆಕ್ಸಿಜನ್ ಟ್ಯಾಂಕರ್‌ಗಳು ಮತ್ತು ವಾಹನಗಳನ್ನು ನಿರ್ವಹಿಸಲು ಎಲ್ಲಿ ವಿಶೇಷ ಕೌಶಲ್ಯದ ಅಗತ್ಯವಿದೆಯೋ ಅಲ್ಲಿ ಸೈನ್ಯವು ಮಾನವಶಕ್ತಿಯೊಂದಿಗೆ ನೆರವಾಗುತ್ತಿದೆ ಎಂದು ಪ್ರಧಾನಮಂತ್ರಿಯವರಿಗೆ ಜನರಲ್ ಎಂ. ಎಂ. ನರವಾಣೆ ವಿವರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+