ಸೆಲ್ಫಿಯೊಂದಿಗೆ ನರೇಂದ್ರ ಮೋದಿ ಮೆಟ್ರೋ ಪ್ರಯಾಣ
ನವದೆಹಲಿ, ಸೆಪ್ಟೆಂಬರ್, 06: ಹರ್ಯಾಣದ ಫರಿದಾಬಾದ್ ನಿಂದ ನವದೆಹಲಿಗೆ ತಲುಪಲು ಇನ್ನು ಕೇವಲ 21 ನಿಮಿಷ ಸಾಕು. ರಾಜ್ಯಗಳ ನಡುವಿನ ನೂತನ ಮೆಟ್ರೋ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಿದರು.
ಅಲ್ಲದೇ ಪ್ರಯಾಣಿಕರೊಂದಿಗೆ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದರು. ನಾಗರಿಕರು ಪ್ರಧಾನಿಯೊಂದಿಗೆ ಸೆಲ್ಫಿ ತೆಗೆದು ಸಂಭ್ರಮಿಸಿದರು. ಭಾನುವಾರ ಸಂಜೆಯಿಂದ ಸೇವೆ ಸಾರ್ವಜನಿಕರಿಗೆ ಮುಕ್ತವಾಗಲಿದೆ.[ಮೋದಿ ಪಾಠಶಾಲೆ: ತಾಯಿ ಜನ್ಮ ನೀಡಿದರೆ, ಶಿಕ್ಷಕರು ಜೀವನ ನೀಡುತ್ತಾರೆ]

2,550 ಕೋಟಿ ರೂ, ವೆಚ್ಚದಲ್ಲಿ ಪೂರ್ಣಗೊಂಡ ಈ ಯೋಜನೆಗೆ ಹರ್ಯಾಣ ಸರ್ಕಾರ 1,557 ಕೋಟಿ ರೂ.ಕೇಂದ್ರ ಸರ್ಕಾರ 537 ಕೋಟಿ ರೂ. ದೆಹಲಿ ಮೆಟ್ರೋ 400 ಕೋಟಿ ರೂ. ಅನುದಾನ ನೀಡಿತ್ತು.
ಈ ರೈಲು ಸಂಚಾರದಿಂದಾಗಿ ಸುಮಾರು 2 ಲಕ್ಷ ಜನರಿಗೆ ಅನುಕೂಲವಾಗಲಿದೆ. ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹಾಜರಿದ್ದರು.ಇದರ ಜತೆಗೆ ವಿವಿಧ ಅಭಿವೃದ್ಧಿ ಯೋಜನೆಗೂ ಚಾಲನೆ ನೀಡಲಾಯಿತು.[ಪಾಠ ಹೇಳಿದವರು ನಂತರ ರಾಜಕಾರಣಕ್ಕೆ ಬಂದರು]
ಇಡೀ ಪ್ರಪಂಚವೇ ಆರ್ಥಿಕ ಸಂಕಷ್ಟ ಎದುರಿಸುತ್ತದೆ. ಆದರೆ ಭಾರತದ ಅರ್ಥವ್ಯವಸ್ಥೆ ಸುಭದ್ರವಾಗಿದೆ. ನಮ್ಮ ದೇಶದ ಬೆಳವಣಿಗೆ ಸರಿಯಾದ ಮಾರ್ಗದಲ್ಲಿ ಸಾಗುತ್ತಿದೆ. ಹೊಸ ಹೊಸ ಉದ್ಯೋಗವಕಾಶ ಸೃಷ್ಟಿಯಾಗುತ್ತಿದೆ. ಡಿಜಿಟಲ್ ಇಂಡಿಯಾದತ್ತ ಪ್ರಯಾಣ ಬೆಳೆಯುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಪ್ರಧಾನಿ ಹೇಳಿದರು.
PM @narendramodi on board the Metro. pic.twitter.com/2deBVlWj0J
— PMO India (@PMOIndia) September 6, 2015 











Click it and Unblock the Notifications