ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ: ಯೋಧರ ಜತೆ ಮೋದಿ, ಯಡಿಯೂರಪ್ಪ ದೀಪಾವಳಿ ಸಂಭ್ರಮ

ಈ ಬಾರಿಯ ದೀಪಾವಳಿ ಹಬ್ಬವನ್ನು ನರೇಂದ್ರ ಮೋದಿ ಅವರು ಇಂಡೊ–ಟಿಬೆಟ್‌ ಗಡಿ ಯೋಧರ ಜೊತೆ ಆಚರಿಸದರೆ. ಇತ್ತ ರಾಜ್ಯದಲ್ಲಿ ಬಿಜೆಪಿ ಮುಖಂಡರು ಸಹ ಬಿಎಸ್ಎಫ್ ಸೈನಿಕರ ಜೊತೆ ದೀಪಾವಳಿ ಆಚರಿಸಿ ಸಂಭ್ರಮಿಸಿದರು.

By Ramesh
|
Google Oneindia Kannada News

ನವದೆಹಲಿ, ಅಕ್ಟೋಬರ್. 31: ನರೇಂದ್ರ ಮೋದಿ ಅವರು ಪ್ರಧಾನಿ ಆಗಿದ್ದಾಗಿನಿಂದ ದೀಪಾವಳಿ ಹಬ್ಬವನ್ನು ದೇಶದ ವಿವಿಧ ಬಾರ್ಡರ್ ಸೈನಿಕರೊಂದಗೆ ಆಚರಿಸಿಕೊಂಡು ಬಂದಿದ್ದಾರೆ. ಅದರಂತೆ ಮೋದಿ ಅವರು ಈ ಬಾರಿಯ ದೀಪಾವಳಿ ಹಬ್ಬವನ್ನು ಇಂಡೊ-ಟಿಬೆಟ್‌ ಗಡಿ ಯೋಧರ ಜೊತೆ ಆಚರಿಸಿ ಸಂಭ್ರಮಸಿದರು.

ದೀಪಾವಳಿ ಹಬ್ಬವನ್ನು ಸೈನಿಕರ ಜತೆ ಆಚರಿಸಬೇಕೆಂದು ಭಾನುವಾರ ಹಿಮಾಚಲ ಪ್ರದೇಶದ ಕಿನೌರ್ ಜಿಲ್ಲೆಯ ಸುಮ್ದೊ ಪ್ರದೇಶಕ್ಕೆ ಭೇಟಿ ನೀಡಿ ಇಂಡೊ-ಟಿಬೆಟ್‌ ಸೈನಿಕರಿಗೆ ಸಿಹಿ ತಿನಿಸಿ ದೀಪಾವಳಿ ಹಬ್ಬವನ್ನು ಆಚರಿಸಿದರು. ಯೋಧರೊಂದಿಗೆ ದೀಪಾವಳಿ ಆಚರಿಸಿದ ಕ್ಷಣಗಳನ್ನು ಮೋಧಿ ಟ್ವಿಟ್ಟರ್ ನಲ್ಲಿ ಸರಣಿ ಸಲಾಗಿ ಟ್ವೀಟ್ ಮಾಡಿ ಸಂತೋಷ ಹಂಚಿಕೊಂಡಿದ್ದಾರೆ. [ಈ ದೀಪಾವಳಿಯನ್ನು ಯೋಧರಿಗೆ ಸಮರ್ಪಿಸೋಣ: ಪ್ರಧಾನಿ ಮೋದಿ]

ಇದೇ ವೇಳೆ ಸುಮ್ದೊದಿಂದ ವಾಪಸ್‌ ಬರುವ ಸಂದರ್ಭದಲ್ಲಿ ನರೇಂದ್ರ ಮೋಧಿ ಅವರು, ಭಾರತ-ಚೀನಾ ಗಡಿಗೆ ಸಮೀಪದಲ್ಲಿರುವ ಚಾಂಗೊ ಹಳ್ಳಿಯ ಜನರ ಜೊತೆ ಕೆಲ ಕಾಲ ಮಾತುಕತೆ ನಡೆಸಿದರು. ಅಲ್ಲಿನ ಮಕ್ಕಳಿಗೆ ಸಿಹಿ ವಿತರಿಸಿ ದೀಪಾವಳಿ ಹಬ್ಬದ ಶುಭಾಶಯ ಕೋರಿದರು.

ಇತ್ತ ರಾಜ್ಯ ಬಿಜೆಪಿ ಮುಖಂಡರು ಭಾನುವಾರ ಬಿ.ಎಸ್‌.ಎಫ್ ಯೋಧರ ಜತೆ ದೀಪಾವಳಿಯ ಸಂಭ್ರಮ ಆಚರಿಸಿದರು. ಯಲಹಂಕದಲ್ಲಿನ ಗಡಿ ಭದ್ರತಾ ಪಡೆ (ಬಿಎಸ್ಎಫ್) ಶಿಬಿರಕ್ಕೆ ಭೇಟಿ ನೀಡಿದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಂಸದೀಯ ವ್ಯವಹಾರ ಹಾಗೂ ರಸಗೊಬ್ಬರ ಸಚಿವ ಅನಂತಕುಮಾರ್, ಕೇಂದ್ರ ಸಾಂಖ್ಯಿಕ ಮತ್ತು ಯೋಜನೆ ಅನುಷ್ಠಾನ ಸಚಿವ ಡಿ.ವಿ. ಸದಾನಂದಗೌಡ ಅವರು ಯೋಧರಿಗೆ ಸಿಹಿ ವಿತರಿಸಿದರು.

ಇಂಡೊ-ಟಿಬೆಟ್‌ ಯೋಧರೊಂದಿಗೆ ದೀಪಾವಳಿ

ಇಂಡೊ-ಟಿಬೆಟ್‌ ಯೋಧರೊಂದಿಗೆ ದೀಪಾವಳಿ

ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಹಿಮಾಚಲ ಪ್ರದೇಶದ ಕಿನೌರ್ ಜಿಲ್ಲೆಯ ಸುಮ್ದೊ ಪ್ರದೇಶಕ್ಕೆ ಭೇಟಿ ನೀಡಿ ಇಂಡೊ-ಟಿಬೆಟ್‌ ಸೈನಿಕರಿಗೆ ಸಿಹಿ ತಿನಿಸಿ ದೀಪಾವಳಿ ಹಬ್ಬವನ್ನು ಆಚರಿಸಿದರು.

ಚಾಂಗೊ ಹಳ್ಳಿಯ ಜನರ ಜೊತೆ ಮೋದಿ ದೀಪಾವಳಿ

ಚಾಂಗೊ ಹಳ್ಳಿಯ ಜನರ ಜೊತೆ ಮೋದಿ ದೀಪಾವಳಿ

ಸುಮ್ದೊದಿಂದ ವಾಪಸ್‌ ಬರುವ ಸಂದರ್ಭದಲ್ಲಿ ನರೇಂದ್ರ ಮೋಧಿ ಅವರು, ಭಾರತ-ಚೀನಾ ಗಡಿಗೆ ಸಮೀಪದಲ್ಲಿರುವ ಚಾಂಗೊ ಹಳ್ಳಿಯ ಜನರ ಜೊತೆ ಕೆಲ ಕಾಲ ಮಾತುಕತೆ ನಡೆಸಿದರು. ಅಲ್ಲಿನ ಮಕ್ಕಳಿಗೆ ಸಿಹಿ ವಿತರಿಸಿ ದೀಪಾವಳಿ ಹಬ್ಬದ ಶುಭಾಶಯ ಕೋರಿದರು.

ಬೆಂಗಳೂರಿನಲ್ಲಿ ಯೋಧರೊಂದಿಗೆ ಬಿಜೆಪಿ ನಾಯಕರು

ಬೆಂಗಳೂರಿನಲ್ಲಿ ಯೋಧರೊಂದಿಗೆ ಬಿಜೆಪಿ ನಾಯಕರು

ಯಲಹಂಕದಲ್ಲಿನ ಗಡಿ ಭದ್ರತಾ ಪಡೆ (ಬಿಎಸ್ಎಫ್) ಶಿಬಿರಕ್ಕೆ ಭೇಟಿ ನೀಡಿದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಕೇಂದ್ರ ಸಂಸದೀಯ ವ್ಯವಹಾರ ಹಾಗೂ ರಸಗೊಬ್ಬರ ಸಚಿವ ಅನಂತಕುಮಾರ್, ಕೇಂದ್ರ ಸಾಂಖ್ಯಿಕ ಮತ್ತು ಯೋಜನೆ ಅನುಷ್ಠಾನ ಸಚಿವ ಡಿ.ವಿ. ಸದಾನಂದಗೌಡ ಅವರು ಯೋಧರಿಗೆ ಸಿಹಿ ವಿತರಿಸಿದರು.

ಚಾಂಗೊ ಹಳ್ಳಿ ಜನರ ಬಗ್ಗೆ ಮೋದಿ ಹರ್ಷ

ಚಾಂಗೊ ಹಳ್ಳಿ ಜನರ ಬಗ್ಗೆ ಮೋದಿ ಹರ್ಷ

'ಪೂರ್ವನಿಗದಿತ ಅಲ್ಲದಿದ್ದರೂ, ಚಾಂಗೊ ಹಳ್ಳಿಯಲ್ಲಿ ತುಸು ಹೊತ್ತು ಇದ್ದೆ. ಅಲ್ಲಿನವರಿಗೆ ದೀಪಾವಳಿಯ ಶುಭಾಶಯ ತಿಳಿಸಿದೆ. ಯಾವ ಪೂರ್ವಸಿದ್ಧತೆಯೂ ಇಲ್ಲದೆ ಅವರು ನನ್ನನ್ನು ಸ್ವಾಗತಿಸಿದ್ದನ್ನು, ಅವರಲ್ಲಿನ ಖುಷಿಯನ್ನು ಕಂಡು ಸಂತಸವಾಯಿತು' ಎಂದು ಮೋದಿ ಅವರು ಟ್ವಿಟರ್ ನಲ್ಲಿ ಬರೆದಿದ್ದಾರೆ.

ಯೋಧರೊಂದಿಗೆ ದೀಪಾವಳಿ ಮೋದಿ ಏನಂದ್ರು?

ಯೋಧರೊಂದಿಗೆ ದೀಪಾವಳಿ ಮೋದಿ ಏನಂದ್ರು?

'ನಮ್ಮ ಐಟಿಬಿಪಿಯ ಧೈರ್ಯಶಾಲಿ ಅಧಿಕಾರಿಗಳು ಹಾಗೂ ಸೈನಿಕರ ಜೊತೆ ಸಮಯ ಕಳೆದಿರುವುದ ಸಂತೋಷವಾಗಿದೆ. ಜೈ ಜವಾನ್, ಜೈ ಹಿಂದ್‌!'ಎಂದು ಮೋದಿ ಅವರು ಟ್ವೀಟ್ ಮಾಡಿದ್ದಾರೆ.

ವಿವಿಧ ಪಡೆಗಳನ್ನು ಭೇಟಿ ಮಾಡಿದ ಮೋದಿ

ವಿವಿಧ ಪಡೆಗಳನ್ನು ಭೇಟಿ ಮಾಡಿದ ಮೋದಿ

ಈ ವೇಳೆ ಬಾರ್ಡರ್ ರೋಡ್ಸ್ ಆರ್ಗನೈಸೇಷನ್ ನ (ಬಿಆರ್ ಒ) ಜನರಲ್ ರಿಸರ್ವ್ ಎಂಜಿನಿಯರಿಂಗ್ ಪೋರ್ಸ್ ನ (ಜಿಆರ್ ಇಎಫ್ ) ಸಿಬ್ಬಂದಿಯನ್ನೂ ಪ್ರಧಾನಿ ಭೇಟಿ ಮಾಡಿದರು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಪ್ರಧಾನಿ ಆದ ನಂತರ ಮೋದಿ ದೀಪಾವಳಿ ಆಚರಣೆ

ಪ್ರಧಾನಿ ಆದ ನಂತರ ಮೋದಿ ದೀಪಾವಳಿ ಆಚರಣೆ

2014ರಲ್ಲಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ದೀಪಾವಳಿ ಹಬ್ಬವನ್ನು ಮೋದಿ ಅವರು, ಸಿಯಾಚಿನ್ ನಲ್ಲಿ ಯೋಧರ ಜೊತೆ ಆಚರಿಸಿದ್ದರು. 2015ರ ದೀಪಾವಳಿಯನ್ನು ಪಂಜಾಬ್‌ ರಾಜ್ಯದ ಭಾರತ-ಪಾಕ್‌ ಗಡಿಯಲ್ಲಿ ಆಚರಿಸಿದ್ದರು.
ಈ ಬಾರಿ 2016ರ ದೀಪಾವಳಿಯನ್ನು ಇಂಡೊ-ಟಿಬೆಟ್‌ ಯೋಧರೊಂದಿಗೆ ಆಚರಿಸಿದರು.

English summary
Prime Minister Narendra Modi on Sunday celebrated Diwali with soldiers in a remote and strategic area in Himachal Pradesh, adjoining the Chinese border.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X