Narendra Modi Speech: ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ; ಪಾಕಿಸ್ತಾನಕ್ಕೆ ಮೋದಿ ಕಠಿಣ ಎಚ್ಚರಿಕೆ

ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಳಿಕ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದು ಸಾಕಷ್ಟು ಕುತೂಹಲ ಕೆರಳಿಸಿದೆ. ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಬೆಂಬಲಿತ ಉಗ್ರರು 26 ಪ್ರವಾಸಿಗರನ್ನು ಹತ್ಯೆ ಮಾಡಿದ್ದಕ್ಕೆ ಪ್ರತೀಕಾರವಾಗಿ ಭಾರತದ ರಕ್ಷಣಾ ಪಡೆಗಳು ಪಾಕಿಸ್ತಾನಕ್ಕೆ ನುಗ್ಗಿ ಭಯೋತ್ಪಾದಕರ ಅಡಗುತಾಣಗಳನ್ನು ಧ್ವಂಸಗೊಳಿಸಿದ್ದವು.

ಭಾರತ ಪಾಕಿಸ್ತಾನದ ಮೇಲೆ ವಾಯುದಾಳಿ ಮಾಡಿದ ಬಳಿಕ ಪಾಕಿಸ್ತಾನ ಕೂಡ ಡ್ರೋನ್, ಕ್ಷಿಪಣಿ ಮೂಲಕ ಗಡಿ ಭಾಗದಲ್ಲಿ ದಾಳಿ ಮಾಡಿದ್ದು, ಭಾರತದ ರಕ್ಷಣಾ ಪಡೆಗಳು ಅದಕ್ಕೆ ಪ್ರತ್ಯುತ್ತರ ನೀಡಿವೆ. ಭಾರತ ಸೇನಾ ಪಡೆಯ ಮುಖ್ಯಸ್ಥರು ಈಗಾಗಲೇ ಕಾರ್ಯಾಚರಣೆ ಬಗ್ಗೆ ವಿವರವಾದ ಮಾಹಿತಿ ಹಂಚಿಕೊಂಡಿದ್ದಾರೆ.

pm narendra modi address nation on india pakistan conflict

ಮತ್ತೊಂದೆಡೆ ಏಟು ಬಿದ್ದರೂ ಬುದ್ದಿ ಕಲಿಯದ ಪಾಕಿಸ್ತಾನ ಯುದ್ಧದಲ್ಲಿ ನಾವು ಗೆದ್ದಿದ್ದೇವೆ ಎಂದು ಹೇಳಿಕೊಂಡಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಸುದ್ದಿಗೋಷ್ಠಿ ನಡೆಸಿ ಯುದ್ಧದಲ್ಲಿ ಪಾಕಿಸ್ತಾನ ಗೆದ್ದಿದೆ ಎಂದು ಹೇಳಿಕೊಂಡಿದ್ದರು. ಇದನ್ನೆಲ್ಲಾ ಭಾರತ ಗಮನಿಸಿದ್ದು ಸೋಮವಾರದ ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ನೆರೆಯ ರಾಷ್ಟ್ರಕ್ಕೆ ತಿರುಗೇಟು ನೀಡುವ ಸಾಧ್ಯತೆ ಇದೆ.

May 12, 2025, 8:50 pm IST

ನೀರು ಮತ್ತು ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ಎಂದಿರು ಪ್ರಧಾನಿ ನರೇಂದ್ರ ಮೋದಿ, ಭಾರತ ಕದನ ವಿರಾಮಕ್ಕೆ ಒಪ್ಪಿಕೊಂಡಿರಬಹುದು, ಆದರೆ ವಿಧಿಸಿದ ಸಿಂಧೂ ಜಲ ಒಪ್ಪಂದದ ಮೇಲಿನ ಹಿಡಿತವನ್ನು ತೆಗೆದುಹಾಕಲು ಅದು ಯಾವುದೇ ಯೋಚನೆಯಿಲ್ಲ ಎಂದು ಸ್ಪಷ್ಟ ಸಂದೇಶ ಕೊಟ್ಟಿದ್ದಾರೆ.
May 12, 2025, 8:40 pm IST

ಇನ್ಮುಂದೆ ನ್ಯೂಕ್ಲಿಯರ್‌ ಬ್ಲ್ಯಾಕ್‌ ಮೇಲ್‌ ನಡೆಯಲ್ಲ ಎಂದ ಮೋದಿ!

ಇನ್ಮುಂದೆ ನ್ಯೂಕ್ಲಿಯರ್‌ ಬ್ಲ್ಯಾಕ್‌ ಮೇಲ್‌ ನಡೆಯಲ್ಲ ಎಂದ ಮೋದಿ!
ಇನ್ಮುಂದೆ ಪಾಕಿಸ್ತಾನದ ಯಾವುದೇ ನ್ಯೂಕ್ಲಿಯರ್ ಬಾಂಬ್‌ನ ಬ್ಲ್ಯಾಕ್‌ ಮೇಲೆ ನಡೆಯುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಅಲ್ಲದೇ ಇಡೀ ವಿಶ್ವವೇ ಉಗ್ರರ ವಿಚಾರದಲ್ಲಿ ಪಾಕಿಸ್ತಾನ ಯಾವ ರೀತಿ ನಡೆದುಕೊಂಡಿದೆ ಎನ್ನುವುದನ್ನು ನೋಡಿದೆ. ಉಗ್ರರ ಅಂತ್ಯ ಸಂಸ್ಕಾರದಲ್ಲಿ ಪಾಕ್‌ ಸೇನೆ ಹಾಗೂ ಪಾಕಿಸ್ತಾನದ ಸರ್ಕಾರ ಭಾಗಿಯಾಗಿದೆ.
May 12, 2025, 8:30 pm IST

ನಮ್ಮ ಸೈನ್ಯವು ಪಾಕಿಸ್ತಾನದ ಡ್ರೋನ್‌ಗಳನ್ನು ಹೇಗೆ ಕಸದ ಬುಟ್ಟಿಗೆ ಎಸೆದಿದೆ ಎನ್ನುವುದನ್ನು ಇಡೀ ಜಗತ್ತು ನೋಡಿದೆ. ಪಾಕಿಸ್ತಾನದ ಹೃದಭಾಗದ ಮೇಲೂ ಭಾರತದ ಸೈನ್ಯ ದಾಳಿ ಮಾಡಿದೆ. ನಮ್ಮ ಕ್ಷಿಪಣಿಗಳು ಪಾಕ್‌ನ ಹಲವು ವಾಯುನೆಲೆಗಳನ್ನು ಧ್ವಂಸಗೊಳಿಸಿವೆ ಎಂದು ಹೇಳಿದ್ದಾರೆ.
May 12, 2025, 8:25 pm IST

ಭಯೋತ್ಪಾದನೆ ಮತ್ತು ವ್ಯಾಪಾರ ಜೊತೆಗೆ ಇರಲು ಸಾಧ್ಯವಿಲ್ಲ. ರಕ್ತ ಮತ್ತು ನೀರು ಕೂಡ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ. ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ ಪ್ರಧಾನಿ ನರೇಂದ್ರ ಮೋದಿ.
May 12, 2025, 8:22 pm IST

ಭಾರತದ ಮೂರು ಸೇನೆಯು ಹೈ ಅಲರ್ಟ್‌ನಲ್ಲಿದೆ. ಸರ್ಜಿಕಲ್‌ ಸ್ಟ್ರೈಕ್‌ ಹಾಗೂ ಏರ್‌ಸ್ಟ್ರೈಕ್‌ನ ನಂತರ ನಾವು ಆಪರೇಷನ್‌ ಸಿಂಧೂರ ಕಾರ್ಯಾಚರಣೆಯನ್ನು ನಡೆಸಿದ್ದೇವೆ. ಆಪರೇಷನ್‌ ಸಿಂಧೂರ ಭಾರತದ ಹೊಸ ಅಧ್ಯಾಯ ಎಂದ ಮೋದಿ
May 12, 2025, 8:17 pm IST

ಭಾರತದ ಗುರುದ್ವಾರ, ಶಾಲಾ - ಕಾಲೇಜು, ಮಂದಿರ ಹಾಗೂ ಜನಸಾಮಾನ್ಯರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲು ಪಾಕ್‌ ಮುಂದಾಯಿತು. ಆದರೆ, ಅದರಲ್ಲೂ ಪಾಕ್‌ ವಿಫಲವಾಯಿತು. ಪಾಕಿಸ್ತಾನದ ಡ್ರೋನ್‌ ಹಾಗೂ ಕ್ಷಿಪಣಿಗಳು ಭಾರತೀಯ ಸೇನೆ ಹೊಡೆದುರುಳಿಸಿದೆ ಎಂದ ಮೋದಿ
May 12, 2025, 8:16 pm IST

ಪಾಕಿಸ್ತಾನದ ಮೇಲೆ ಆಕ್ರೋಶ

ಪಾಕಿಸ್ತಾನದ ಮೇಲೆ ಆಕ್ರೋಶ
ಭಯೋತ್ಪಾದಕರನ್ನು ಮಟ್ಟ ಹಾಕಲು ಭಾರತಕ್ಕೆ ಸಹಕರಿಸುವ ಬದಲು ಪಾಕಿಸ್ತಾನ ನಮ್ಮ ಮೇಲೆಯೇ ದಾಳಿ ಮಾಡಲು ಪ್ರಯತ್ನಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನ ಉಗ್ರರಿಗೆ ಬೆಂಬಲ ಕೊಡುತ್ತಿದೆ ಎನ್ನುವುದು ಮತ್ತೊಮ್ಮೆ ಜಗಜ್ಜಾಹೀರಾಗಿದೆ ಎಂದು ಹೇಳಿದ್ದಾರೆ.
May 12, 2025, 8:15 pm IST

ಭಾರತದ ಹೆಣ್ಣು ಮಕ್ಕಳ ಸಿಂಧೂರ ಅಳಿಸಿದವರನ್ನು ಮಟ್ಟ ಹಾಕಿದ್ದೇವೆ. ಉಗ್ರವಾದಿಗಳು ಇದನ್ನು ಕನಸಿನಲ್ಲೂ ಊಹಿಸಿರಲಿಲ್ಲ. ಉಗ್ರರನ್ನು ಸರ್ವನಾಶ ಮಾಡಲು ಸೇನೆಗೆ ಸಂಪೂರ್ಣ ಸ್ವಾತಂತ್ರ ನೀಡಲಾಗಿದೆ. ಉಗ್ರರು ಅಡಗಿದ್ದ ಸ್ಥಳಗಳನ್ನು ಧ್ವಂಸ ಮಾಡಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
May 12, 2025, 8:14 pm IST

ದೇಶದಲ್ಲಿ ಎಲ್ಲರೂ ಒಂದಾಗಿ ನಿಂತಿದ್ದೇವೆ ಎಂದು ಮೋದಿ. ಸಂಕಷ್ಟದ ಸಮಯದಲ್ಲಿ ದೇಶದ ಎಲ್ಲರೂ ಒಂದಾಗಿ ನಿಂತಿದ್ದೇವೆ ಎಂದು ಮೋದಿ ಹೇಳಿದ್ದಾರೆ. ಉಗ್ರರು ಕನಸಿನಲ್ಲೂ ಅಂದಾಜಿಸದ ಕ್ರಮವನ್ನು ಭಾರತ ತೆಗೆದುಕೊಂಡಿದೆ ಎಂದಿದ್ದಾರೆ.
May 12, 2025, 8:13 pm IST

ಪೂರ್ಣ ಕ್ರೆಡಿಟ್‌ ತೆಗೆದುಕೊಂಡ ಅಮೆರಿಕ!

ಪೂರ್ಣ ಕ್ರೆಡಿಟ್‌ ತೆಗೆದುಕೊಂಡ ಅಮೆರಿಕ!
ಭಾರತ ಹಾಗೂ ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಯಾಗಿರುವ ಪೂರ್ಣ ಕ್ರೆಡಿಟ್‌ ಅನ್ನು ಅಮೆರಿಕ ತೆಗೆದುಕೊಂಡಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ನಾವು ಮಧ್ಯಪ್ರವೇಶ ಮಾಡಿದ್ದರಿಂದಲೇ ಭಾರತ ಹಾಗೂ ಪಾಕಿಸ್ತಾನದ ನಡುವೆ ಕದನ ವಿರಾಮ ಏರ್ಪಟ್ಟಿದೆ ಎಂದು ಹೇಳಿಕೊಂಡಿದ್ದಾರೆ.
May 12, 2025, 8:12 pm IST

ಪಹಲ್ಗಾಮ್‌ನಲ್ಲಿ ಧರ್ಮವನ್ನು ಕೇಳಿ ಅಮಾಯಕರನ್ನು ಕೊಂದಿದ್ದಾರೆ. ಹೆಂಡತಿ, ಮಕ್ಕಳ ಮುಂದೆಯೇ ಕೊಲೆ ಮಾಡಿದ್ದಾರೆ. ಆಪರೇಷನ್ ಸಿಂಧೂರವನ್ನು ದೇಶದ ಪ್ರತಿ ತಾಯಿ, ಸಹೋದರಿಗೆ ಅರ್ಪಣೆ ಎಂದ ಪ್ರಧಾನಿ ನರೇಂದ್ರ ಮೋದಿ.
May 12, 2025, 8:11 pm IST

ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ

ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ
ದೇಶವನ್ನು ಉದ್ದೇಶಿಸಿ ಭಾಷಣ ಆರಂಭಿಸಿ ಪ್ರಧಾನಿ ನರೇಂದ್ರ ಮೋದಿ. ದೇಶದ ಸಶಸ್ತ್ರ ಪಡೆಗಳಿಗೆ ದೊಡ್ಡ ಸಲ್ಯೂಟ್ ಮಾಡುತ್ತೇನೆ ಎಂದು ಮೋದಿ. ಆಪರೇಷನ್ ಸಿಂಧೂರ ಯಶಸ್ವಿಯಾಗಿದೆ ಎಂದ ಪ್ರಧಾನಿ. ವಿಜ್ಞಾನಿಗಳು, ಸೈನಿಕರಿಗೆ ಧನ್ಯವಾದ ತಿಳಿಸಿದ ಪ್ರಧಾನಿ ಮೋದಿ.
May 12, 2025, 8:10 pm IST

ಕದನ ವಿರಾಮದ ನಂತರ ಮೊದಲ ಬಾರಿಗೆ ಭಾರತ, ಪಾಕಿಸ್ತಾನ ಮಿಲಿಟರಿ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ. ಭಾನುವಾರ ರಾತ್ರಿ ಗಡಿಭಾಗದಲ್ಲಿ ಯಾವುದೇ ಸ್ಫೋಟಗಳು ಸಂಭವಿಸಿದ ವರದಿಗಳಾಗಿಲ್ಲ. ಸೋಮವಾರ ಕೂಡ ಯಾವುದೇ ಸ್ಫೋಟಗಳು ಸಂಭವಿಸಿದ ವರದಿಗಳು ಬಂದಿಲ್ಲ
May 12, 2025, 8:05 pm IST

ಭವಿಷ್ಯದಲ್ಲಿ ಭಾರತದ ಮೇಲೆ ಉಗ್ರರ ದಾಳಿಯನ್ನು ಆಕ್ಟ್ ಆಫ್ ವಾರ್ ಎಂದು ಪರಿಗಣಿಸುವುದಾಗಿ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆಯನ್ನು ನೀಡಿದೆ. ಇದರಿಂದ ಮುಂದಿನ ದಿನಗಳಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ಕೊಡಲು ಪಾಕಿಸ್ತಾನ ಹಿಂದೇಟು ಹಾಕುವ ಸಾಧ್ಯತೆ ಇದೆ ಎಂದು ಭಾರತ ಸರ್ಕಾರ ಅಂದಾಜಿಸಿದೆ
May 12, 2025, 8:00 pm IST

ಪಸ್ರೂರ್ ಮತ್ತು ಸಿಯಾಲ್‌ಕೋಟ್ ವಾಯುಯಾನ ನೆಲೆಯಲ್ಲಿರುವ ರಾಡಾರ್ ತಾಣಗಳ ಮೇಲೂ ದಾಳಿ ಮಾಡಲಾಗಿದೆ. ಇದರಿಂದಾಗಿ ಪಾಕಿಸ್ತಾನಕ್ಕೆ ಭಾರಿ ಹಾನಿಯಾಯಿತು, ಯುದ್ಧದಲ್ಲಿ 35-40 ಪಾಕಿಸ್ತಾನಿ ಮಿಲಿಟರಿ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕ (ಡಿಜಿಎಂಒ) ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಮಾಹಿತಿ ನೀಡಿದ್ದಾರೆ.
May 12, 2025, 7:52 pm IST

ಮೋದಿ ಭಾಷಣಕ್ಕೆ ಕೌಂಟ್‌ಡೌನ್‌

ಮೋದಿ ಭಾಷಣಕ್ಕೆ ಕೌಂಟ್‌ಡೌನ್‌
ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವದ ಭಾಷಣಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಭಾರತೀಯ ಸೇನೆಯ ಆಪರೇಷನ್‌ ಸಿಂಧೂರ ಕಾರ್ಯಾಚರಣೆ, ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ಎದುರಾದ ಮೇಲೆ ಮತ್ತು ಕದನ ವಿರಾಮ ಪ್ರಕ್ರಿಯೆಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಮೊದಲ ಬಾರಿ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
May 12, 2025, 7:41 pm IST

ಭಾರತೀಯ ಸೇನೆಯು ಆಪರೇಷನ್‌ ಸಿಂಧೂರ ಹೆಸರಿನಲ್ಲಿ ನಡೆಸಿದ ಕಾರ್ಯಾಚರಣೆಯ ನಂತರ ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ಎದುರಾಗಿತ್ತು. ಇದೀಗ ಅಮೆರಿಕ ಮಧ್ಯಪ್ರವೇಶದಿಂದಾಗಿ ಭಾರತ ಹಾಗೂ ಪಾಕಿಸ್ತಾನದ ನಡುವೆ ಕದನ ವಿರಾಮ ಏರ್ಪಟ್ಟಿದೆ. ಇಂದು ರಾತ್ರಿ 8 ಗಂಟೆಗೆ ದೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಹತ್ವದ ಸಂದೇಶವನ್ನು ಹಂಚಿಕೊಳ್ಳಲಿದ್ದಾರೆ. ಮೋದಿ ಅವರ ಮಾತು ಈ ಸಂದರ್ಭದಲ್ಲಿ ಮಹತ್ವ ಪಡೆದುಕೊಂಡಿದೆ.
May 12, 2025, 7:32 pm IST

ಏಪ್ರಿಲ್‌ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದಿದ್ದ ಉಗ್ರರ ದಾಳಿಯಲ್ಲಿ 26 ಜನ ಭಾರತೀಯರು ಮೃತಪಟ್ಟಿದ್ದರು. ಉಗ್ರರ ದಾಳಿಯಲ್ಲಿ ಮೃತಪಟ್ಟವರು ಹಾಗೂ ಅವರ ಕುಟುಂಬದವರಿಗೆ ನ್ಯಾಯ ದೊರಕಿಸಲು ಭಾರತೀಯ ಸೇನೆಯು ಆಪರೇಷನ್‌ ಸಿಂಧೂರ ಕಾರ್ಯಾಚರಣೆಯನ್ನು ನಡೆಸಿತ್ತು. ಇದರಲ್ಲಿ ಉಗ್ರರ 9 ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿತ್ತು. ಮೋಸ್ಟ್‌ವಾಂಟೆಡ್‌ ಉಗ್ರರು ಮೃತಪಟ್ಟಿದ್ದರು.
May 12, 2025, 7:20 pm IST

ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಜನರ ಸಾವಿಗೆ ಪ್ರತೀಕಾರವಾಗಿ ಭಾರತ ಮೇ 6 ಮತ್ತು 7ರಂದು ಆಪರೇಷನ್ ಸಿಂಧೂರ ಮಿಲಿಟರಿ ಕಾರ್ಯಾಚರಣೆ ನಡೆಸಿತು. ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿ ಒಂಬತ್ತು ಭಯೋತ್ಪಾದಕ ತಾಣಗಳನ್ನು ಗುರಿಯಾಗಿಸಿಕೊಂಡು 100 ಕ್ಕೂ ಹೆಚ್ಚು ಭಯೋತ್ಪಾದಕರ ಹೊಡೆದುಹಾಕಿವೆ.
May 12, 2025, 7:03 pm IST

ಎರಡೂ ದೇಶಗಳ ನಡುವೆ ಕದನ ವಿರಾಮ ಘೋಷಣೆಯಾಗಿದ್ದು, ಪಾಕಿಸ್ತಾನ ಮತ್ತೆ ದಾಳಿ ಮಾಡುತ್ತಿದ್ದು ಇದನ್ನು ಪ್ರಧಾನಿ ಮೋದಿ ಭಾಷಣದಲ್ಲಿ ಉಲ್ಲೇಖಿಸುವ ಸಾಧ್ಯತೆ ಇದೆ.
May 12, 2025, 7:03 pm IST

ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಳಿಕ ದೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿ ಭಾಷಣ ಮಾಡುತ್ತಿದ್ದು ನಾಗರಿಕರಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+