ಎಚ್ ಡಿ ಕುಮಾರಸ್ವಾಮಿಯವರಿಗೆ ಮೋದಿ ಫಿಟ್ನೆಸ್ ಚಾಲೆಂಜ್

Recommended Video

      ಕುಮಾರಸ್ವಾಮಿಯವರಿಗೆ ಟ್ವಿಟ್ಟರ್ ನಲ್ಲಿ ಸವಾಲೆಸೆದ ಪಿಎಂ ಮೋದಿ | Oneindia Kannada

      ಬೆಂಗಳೂರು, ಜೂನ್ 13: ಕರ್ನಾಟಕ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸವಾಲೆಸೆದಿದ್ದಾರೆ. ಇದೇನಿದು ಮತ್ತೆ ಶುರುವಾಯ್ತಾ ರಾಜಕೀಯದ ಕೆಸರೆರಚಾಟ ಎಂದುಕೊಳ್ಳಬೇಡಿ. ಅಸಲಿ ಸುದ್ದಿ ಬೇರೆಯೇ ಇದೆ!

      ಸಾಮಾಜಿಕ ಮಾಧ್ಯಮಗಳಲ್ಲಿ ಇತ್ತೀಚಿನ ದಿನಗಳಲ್ಲಿ ಸೆನ್ಸೇಶನ್ ಸೃಷ್ಟಿಸಿದ್ದ ಫಿಟ್ನೆಸ್ ಚಾಲೆಂಜಿಗೆ ಪ್ರಧಾನಿ ಮೋದಿಯವರು ಕುಮಾರಸ್ವಾಮಿಯವರನ್ನು ನಾಮಿನೇಟ್ ಮಾಡಿದ್ದಾರೆ!

      ಅಷ್ಟಕ್ಕೂ ಪ್ರಧಾನಿ ನರೇಂದ್ರ ಮೋದಿಯವರು ಬೇರೆಲ್ಲರನ್ನೂ ಬಿಟ್ಟು ಎಚ್ ಡಿ ಕುಮಾರಸ್ವಾಮಮಿ ಅವರನ್ನೇ ಈ ಚಾಲೆಂಜಿಗೆ ಆರಿಸಿಕೊಂಡಿದ್ದೇಕೆ ಎಂಬುದು ಅಚ್ಚರಿಯ ವಿಷಯವಾಗಿದ್ದರೂ, ಈ ಸವಾಲನ್ನು ಎಚ್ಡಿಕೆ ಸ್ವೀಕರಿಸುತ್ತಾರಾ ಎಂಬುದು ಸದ್ಯಕ್ಕೆ ಕುತೂಹಲ ಕೆರಳಿಸಿರುವ ವಿಷಯ.

      ಯಾರ್ಯಾರಿಗೆ ಚಾಲೆಂಜ್?

      "ಈ ಕೆಳಗಿನವರನ್ನು ನಾನು ಫಿಟ್ನೆಸ್ ಚಾಲೆಂಜಿಗೆ ನಾಮಿನೇಟ್ ಮಾಡಲು ಬಯಸುತ್ತೇನೆ:

      ಕರ್ನಾಟಕ ಮುಖ್ಯಮಂತ್ರಿ ಶ್ರೀ ಎಚ್ ಡಿ ಕುಮಾರಸ್ವಾಮಿ, ಗೋಲ್ಡ್ ಕೋಸ್ಟ್ ನಲ್ಲಿ ನಡೆದ ಕಾಮನ್ ವೆಲ್ತ್ ಗೇಮ್ ನಲ್ಲಿ ಚಿನ್ನದ ಪದಕ ಗೆದ್ದ ಟೇಬಲ್ ಟೆನ್ನಿಸ್ ಆಟಗಾರ್ತಿ ಮಾಣಿಕ್ ಬಾತ್ರಾ ಮತ್ತು 40 ವರ್ಷ ದಾಟಿದ ಎಲ್ಲಾ ಧೈರ್ಯವಂತ ಐಪಿಎಸ್ ಆಫೀಸರ್ ಗಳಿಗೆ ನನ್ನ ಫಿಟ್ನೆಸ್ ಚಾಲೆಂಜ್" ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

      ವೈರಲ್ ಆದ ಮೋದಿ ವಿಡಿಯೋ

      ಹಮ್ ಫಿಟ್ ತೋ ಇಂಡಿಯಾ ಫಿಟ್ ಎಂಬ ಹ್ಯಾಶ್ ಟ್ಯಾಗ್ ನಲ್ಲಿ ನರೇಂದ್ರ ಮೋದಿಯವರು ತಮ್ಮ ಬೆಳಗ್ಗಿನ ವ್ಯಾಯಾಮದ ವಿಡಿಯೋವನ್ನು ಅಪ್ಲೋಡ್ ಮಾಡಿದ್ದು ವೈರಲ್ ಆಗಿದೆ. ಪಂಚಮಹಾಭೂತಗಳಾದ ಭೂಮಿ, ನೀರು, ಅಗ್ನಿ, ವಾಯು ಮತ್ತು ಆಕಾಶದ ಸನ್ನಿಧಿಯಲ್ಲಿ ನಾನು ಬೆಳಗ್ಗಿನ ವಾಕ್ ಮಾಡುತ್ತೇನೆ ಎಂದು ಅವರು ಹೇಳಿಕೊಂಡಿದ್ದಾರೆ.

      ಏನಿದು ಫಿಟ್ನೆಸ್ ಚಾಲೆಂಜ್?

      ಕೇಂದ್ರ ಸರ್ಕಾರದ ಹುವಜನ ಮತ್ತು ಕ್ರೀಡಾ ಖಾತೆಯ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಆರಂಭಿಸಿದ ಆನ್ ಲೈನ್ ಅಭಿಯಾನ ಇದು! ಫಿಟ್ನೆಸ್ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಹಮ್ ಫಿಟ್ ತೋ ಇಂಡಿಯಾ ಫಿಟ್ ಎಂಬ ಹ್ಯಾಶ್ ಟ್ಯಾಗ್ ನಲ್ಲಿ ಟ್ವಿಟ್ಟರ್ ಯಾತ್ರೆ ಆರಂಭವಾಗಿದ್ದು, ಯಾರು, ಯಾರಿಗೆ ಬೇಕಾದರೂ ಫಿಟ್ನೆಸ್ ಚಾಲೆಂಜ್ ಹಾಕಬಹುದು. ಅದನ್ನು ಸ್ವೀಕರಿಸುವವರು ತಾವು ಆರೋಗ್ಯ ಕಾಪಾಡಿಕೊಳ್ಳಲು ಮಾಡುವ ಯಾವುದೇ ರೀತಿಯ ವ್ಯಾಯಾಮದ ಚಿತ್ರವನ್ನು ಅಥವಾ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಬಹುದು.

      ಧನಾತ್ಮಕ ಪರಿಣಾಮಕ್ಕಾಗಿ ವ್ಯಾಯಾಮ ಮಾಡಿ

      ಪ್ರತಿಯೊಬ್ಬ ಭಾರತೀಯರು ತಮ್ಮ ದಿನದ ಕೆಲವು ಭಾಗವನ್ನು ಫಿಟ್ನೆಸ್ ಗೋಸ್ಕರ ಮೀಸಲಿಡಿ ಎಂದು ನಾನು ಮನವಿ ಮಾಡುತ್ತೇನೆ. ನಿಮಗೆ ಅನುಕೂಲವಾಗುವಂಥ ಯಾವುದೇ ರೀತಿಯ ವ್ಯಾಯಾಮವನ್ನು ಮಾಡಿ, ನಿಮ್ಮ ಬದುಕಿನಲ್ಲಿ ಅದು ಬೀರುವ ಧನಾತ್ಮಕ ಪರಿಣಾಮವನ್ನು ಗಮನಿಸಿ ಎಂದು ಅವರು ಟ್ವೀಟ್ ಮಾಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+