ಕೇಂದ್ರ ಸರ್ಕಾರದಿಂದ ರಸಗೊಬ್ಬರ ಸಬ್ಸಿಡಿ 5 ಪಟ್ಟು ಹೆಚ್ಚಳ: ಪ್ರಕಾಶ್ ಜಾವಡೇಕರ್
ನವದೆಹಲಿ, ಜೂನ್ 12: ದೇಶದಲ್ಲಿ ಮುಂಗಾರು ಆರಂಭವಾಗಿದೆ. ನಿರೀಕ್ಷೆಯಂತೆ ಮಳೆಯಾದರೆ ಕೃಷಿ ಚಟುವಟಿಕೆಗಳು ಗರಿಗೆದರುತ್ತವೆ. ರೈತರು ಬಿತ್ತನೆಗೆ ಬೀಜ, ಗೊಬ್ಬರ ಖರೀದಿಯಲ್ಲಿ ನಿರತರಾಗಿದ್ದಾರೆ. ಈ ಮಧ್ಯೆ ಗೊಬ್ಬರ ಸಬ್ಸಿಡಿ ಕುರಿತು ಕೇಂದ್ರ ಸಚಿವರು ಮಾತನಾಡಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷದ ಸರ್ಕಾರವು ರೈತರ ಪರವಾಗಿ ಆಡಳಿತ ನೀಡುತ್ತಿದೆ. ಬಿಜೆಪಿ ಅಧಿಕಾರಾವಧಿಯಲ್ಲಿ ರಸಗೊಬ್ಬರ ಸಬ್ಸಿಡಿಯನ್ನು ಐದು ಪಟ್ಟು ಹೆಚ್ಚಳ ಮಾಡಲಾಗಿದೆ ಎಂದು ಮಾಜಿ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಭಾನುವಾರ ತಿಳಿಸಿದ್ದಾರೆ.

ತೆಲಂಗಾಣ ರಾಜ್ಯದ ಕರೀಂನಗರದ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಕಾಶ್ ಜಾವ್ಡೇಕರ್ ಅವರು, ಕಳೆದ ಮೂರು ದಶಕಗಳ (30 ವರ್ಷ) ನಂತರ, ಪೂರ್ಣ ಬಹುಮತದೊಂದಿಗೆ ಬಿಜೆಪಿ ಸರ್ಕಾರ ರಚನೆಯಾಗಿದೆ. ಕಳೆದ ಎರಡು ಬಾರಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮೂಲಕ ಜನಪರ, ಅಭಿವೃದ್ಧಿ ಮತ್ತು ದೇಶ ಮೊದಲು ಎನ್ನುವು ಪ್ರಧಾನಿ ಮೋದಿಯವರು ಅಧಿಕಾರ ಗದ್ದುಗೆ ಏರಿದ್ದಾರೆ.
ಬಜೆಟ್‌ನಲ್ಲಿ ಕೃಷಿಗಾಗಿ 1 ಲಕ್ಷ ಕೋಟಿ ಮೀಸಲು
ಎರಡು ಭಾರಿ ಆಡಳಿತಕ್ಕೆ ಬಂದರೂ ರೈತರನ್ನು ಕಡೆಗಣಿಸಿದ ಪ್ರಧಾನಿಗಳು ,ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಿಂದ ರೈತರಿಗೆ ತೊಂದರೆಯಾಗದಂತೆ ನೋಡಿಕೊಂಡಿದ್ದಾರೆ. ಆರ್ಥಿಕ ಹೊಡೆತ ನೀಡದಂತೆ ಸಹಾಯವಾಗಲು ರಸಗೊಬ್ಬರ ಸಮೇಲಿನ ಸಹಾಯಧನವನ್ನು (ಸಬ್ಸಿಡಿ) ಈವರೆಗೆ 5 ಪಟ್ಟು ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು.
ಪ್ರಧಾನಿ ನೇಂದ್ರ ಮೋದಿ ಸರ್ಕಾರ ದೇಶದ ಕೃಷಿ ಮೂಲಸೌಕರ್ಯಕ್ಕೆ 1 ಲಕ್ಷ ಕೋಟಿ ಮೀಸಲಿಟ್ಟಿದೆ. ಹಿಂದಿನ ಯುಪಿಎ ಅಧಿಕಾರಾಧಿಯಲ್ಲಿ ಕೃಷಿ ಬಜೆಟ್ ಕೇವಲ 21,000 ಕೋಟಿ ಮಾತ್ರವಾಗಿತ್ತು. ಆದರೆ ಇಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೃಷಿ ಬಜೆಟ್ ಅನ್ನು 1,25,000 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ.

ದೇಶದಲ್ಲಿ ಕೃಷಿ ಸಾಲ ಈಗ ಹೆಚ್ಚಾಗಿದೆ. ದೇಶದಲ್ಲಿ 20 ಲಕ್ಷ ಕೋಟಿ ರೂ. ಮತ್ತು 13 ಕೋಟಿ ರೈತರು ಮಣ್ಣಿನ ಆರೋಗ್ಯ ಕಾರ್ಡ್‌ಗಳನ್ನು ಪಡೆದಿದ್ದಾರೆ. ರೈತರು ಕೃಷಿ ಜೊತೆಗೆ ಆರ್ಥಿಕವಾಗಿ ಸುಧಾರಣೆ ಕಾಣುತ್ತಿದ್ದಾರೆ. ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಗಳಲ್ಲಿ ತೆಲಂಗಾಣ ರಾಜ್ಯದ ಕರೀಂನಗರದ 30 ಲಕ್ಷ ರೈತರಿದ್ದಾರೆ. ಅವರೆಲ್ಲರಿಗೂ ವಾರ್ಷಿಕವಾಗಿ ಒಟ್ಟು ಮೂರು ಕಂತುಗಳು ಪಡೆಯುತ್ತಿದ್ದಾರೆ ಎಂದು ಸಚಿವರು ಬಿಜೆಪಿ ಸರ್ಕಾರದ ಕಾರ್ಯ ಶ್ಲಾಘಿಸಿದರು.
ರೈತರಿಗೆ ಆರ್ಥಿಕವಾಗಿ ಸಹಾಯ
ದೇಶದ ರೈತರಿಗೆ ಸರ್ಕಾರ ಫಸಲ್ ವಿಮಾ ಯೋಜನೆಯಡಿ 1,33,000 ಕೋಟಿ ರೂಪಾಯಿಗಳ ಪರಿಹಾರ ವಿತರಿಸಿದೆ. ಅಂತೆಯೇ ಕಿಸಾನ್ ಸಮ್ಮಾನ್ ನಿಧಿಯಡಿ ದೇಶದ 11 ಕೋಟಿ ರೈತ ಫಲಾನುಭವಿಗಳಿಗೆ ಒಟ್ಟು 2,60,000 ಕೋಟಿ ರೂಪಾಯಿಗಳ ಆರ್ಥಿಕ ಪ್ರಯೋಜನವನ್ನು ಒದಗಿಸಲಾಗಿದೆ. ಈ ಫಲಾನುಭವಿಗಳಲ್ಲಿ 30 ಲಕ್ಷ ರೈತರು ತೆಲಂಗಾಣದವರು ಎಂದು ಅವರು ಪುನರುಚ್ಚರಿಸಿದರು.
2014ರಿಂದ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿ ಮೋದಿ ನೇತೃತ್ವದ ಸರ್ಕಾರವು ಅಭಿವೃದ್ಧಿಯ ರಾಜಕೀಯ ಮಾಡಿದ್ದಾರೆ. ಯಾವ ರಾಜ್ಯಗಳೊಂದಿಗೆ ತಾರತಮ್ಯ ಮಾಡದೇ ಕೆಲಸ ಮಾಡಿದ್ದಾರೆ. ದೇಶ ಮೊದಲು ಎಂಬ ನಿಲುವಿನೊಂದಿಗೆ ರೈತ ಹಿತ ಕಾಪಾಡಿಕೊಂಡೆ ಆಡಳಿತ ನೀಡುತ್ತಾ ಬಂದಿದೆ ಎಂದು ಅವರು ಹೇಳಿದರು.












Click it and Unblock the Notifications