ಮೋದಿಯವರಿಗೆ ಜನರ ಭಾವನೆ ಅರ್ಥವಾಗ್ತಿಲ್ಲ : ರಾಹುಲ್ ವಾಗ್ದಾಳಿ

Subscribe to Oneindia Kannada

ನವದೆಹಲಿ, ಅಕ್ಟೋಬರ್ 30: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೇಂದ್ರ ಸರಕಾರದ ಮೇಲೆ ಮತ್ತೆ ಕಿಡಿಕಾರಿದ್ದಾರೆ.

ನವದೆಹಲಿಯಲ್ಲಿ ಮಾತನಾಡಿದ ಅವರು, "ಅಪನಗದೀಕರಣ ಜಾರಿಯಾದ ನವೆಂಬರ್ 8ರಂದು ಸಂಭ್ರಮಾಚರಣೆ ಮಾಡುವುದಾಗಿ ನರೇಂದ್ರ ಮೋದಿ ಹೇಳುತ್ತಿದ್ದಾರೆ. ಮೋದಿಯವರಿಗೆ ದೇಶದ ಜನರ ಭಾವನೆಯನ್ನು ಅರ್ಥ ಮಾಡಿಕೊಳ್ಳಲು ಆಗಿಲ್ಲ. ಭಾರತದ ಪಾಲಿಗೆ ನವೆಂಬರ್ 8 ನೋವಿನ ದಿನ. ಅದು ಅವರಿಗೆ ಅರ್ಥವಾಗಿಲ್ಲ," ಎಂದು ಹೇಳಿದ್ದಾರೆ.

PM Modi has not been able to understand the feeling of the nation : Rahul Gandhi

ಇದೇ ವೇಳೆ 'ಅಪನಗದೀಕರಣ ಒಂದು ದುರಂತ' ಎಂದು ಅವರು ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ.

"ಅಪನಗದೀಕರಣದಿಂದಾಗಿ ದೇಶದಲ್ಲಿ ಸಣ್ಣ ಸಣ್ಣ ವ್ಯವಹಾರಗಳು ಬಂದ್ ಆಗಿವೆ. ಇನ್ನೊಂದು ಕಡೆ ಜಿಎಸ್ಟಿ ಉತ್ತಮ ಯೋಜನೆಯಾದರೂ ಜಾರಿಯಲ್ಲಾದ ಗೊಂದಲದಿಂದಾಗಿ ಸಮಸ್ಯೆಯಾಗಿದೆ. ದೇಶದ ಬೊಕ್ಕಸಕ್ಕೆ ನಷ್ಟವಾಗಿದೆ. ಜಿಡಿಪಿ ಕುಸಿತವಾಗಿದೆ. ದೇಶದ ಅರ್ಥ ವ್ಯವಸ್ಥೆಗೆ ಹೊಡೆತ ಬಿದ್ದಿದೆ," ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
8 Nov is a sad day for India. Prime minister Narendra Modi has not been able to understand the feeling of the nation. Demonetisation was a disaster,” said Congress vice president Rahul Gandhi here in New Delhi.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ