ಭಾರತ ರತ್ನತ್ರಯರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದು ಹೀಗೆ...
ನವದೆಹಲಿ, ಜನವರಿ 26: ಭಾರತ ರತ್ನ ಪ್ರಶಸ್ತಿ ಪಡೆದ ಮೂವರು ಸಾಧಕರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮುಕ್ತಕಂಠದಿಂದ ಶ್ಲಾಘಿಸಿ, ಅಭಿನಂದಿಸಿದ್ದಾರೆ.
ಕೇಂದ್ರ ಸರ್ಕಾರ ಶುಕ್ರವಾರ 2019ನೇ ಸಾಲಿನ ಭಾರತ ರತ್ನ ಪ್ರಶಸ್ತಿ ಘೋಷಣೆ ಮಾಡಿದ್ದು, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಗಾಯಕ ಭೂಪೇನ್ ಹಜಾರಿಕಾ ಹಾಗೂ ನಾನಾಜಿ ದೇಶ್ ಮುಖ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಲಾಗಿದೆ.

ಕರ್ನಾಟಕದ ಪ್ರಭುದೇವ (ಸಂಗೀತ,ನೃತ್ಯ), ರೋಹಿಣಿ ಗೋಡುಬಳೆ (ವಿಜ್ಞಾನ, ಇಂಜಿನಿಯರಿಂಗ್), ಶಾರದಾ ಶ್ರೀನಿವಾಸನ್ (ಪುರಾತತ್ವ), ರಾಜೀವ್ ತಾರಾನಾಥ್ (ಸಂಗೀತ, ಕಲೆ), ಸಾಲುಮರದ ತಿಮ್ಮಕ್ಕ (ಸಮಾಜ ಸೇವೆ) ಅವರಿಗೆ ಪದ್ಮ ಪ್ರಶಸ್ತಿ ಲಭಿಸಿದ್ದು, ಎಲ್ಲಾ ಪದ್ಮ ಪ್ರಶಸ್ತಿ ವಿಜೇತರಿಗೂ ಪ್ರಧಾನಿ ಅಭಿನಂದನೆ ಸಲ್ಲಿಸಿದ್ದಾರೆ.
ಭಾರತ ರತ್ನತ್ರಯರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದು ಹೀಗೆ...
|
ನಾನಾಜಿ ದೇಶ್ ಮುಖ್
"ಗ್ರಾಮೀಣಾಭಿವೃದ್ಧಿಗಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದ, ಗ್ರಾಮೀಣ ಪ್ರದೇಶದ ಎಷ್ಟು ಜನರ ಸಬಲೀಕರಣಕ್ಕೆ ಕಾರಣರಾಗಿ ಮಾದರಿಯಾದವರು ನಾನಾಜಿ ದೇಶ್ ಮುಖ್. ಮಾನವೀಯತೆ, ಸೇವೆ ಮತ್ತು ಸಹಾನುಬೂತಿಯ ಖನಿ ನಾನಜಿ ಅವರಿಗೆ ಭಾರತ ರತ್ನ ಸಿಕ್ಕಿದ್ದು ಅತ್ಯಂತ ಸೂಕ್ತ" -ನರೇಂದ್ರ ಮೋದಿ
|
ಭೂಪೇನ್ ಹಜಾರಿಕಾ
"ಭೂಪೇನ್ ಹಜಾರಿಕಾ ಅವರ ಹಾಡುಗಳು ಹಲವು ಪೀಳಿಗೆಯ ಜನರಲ್ಲೂ ಸ್ಫೂರ್ತಿ ತುಂಬಲಿದೆ. ಆ ಹಾಡುಗಳು ನ್ಯಾಯ, ಸೌಹಾರ್ದತೆ ಮತ್ತು ಭ್ರಾತೃತ್ವದ ಕಿರಣವನ್ನು ಪಸರಿಸಲಿವೆ. ಅವರು ಜಾಗತಿಕ ಮಟ್ಟದಲ್ಲಿ ಭಾರತದ ಸಂಗೀತ ಪರಂಪರೆಯನ್ನು ಜನಪ್ರಿಯಗೊಳಿಸಿದರು. ಅವರಿಗೆ ಭಾರತರತ್ನ ದೊರಕಿದ್ದು ಕೇಳಿ ಸಂತಸವಾಗಿದೆ"- ನರೇಂದ್ರ ಮೋದಿ
|
ಪ್ರಣಬ್ ಮುಖರ್ಜಿ
"ನಮ್ಮ ಕಾಲದ ಅತ್ಯುತ್ತಮ ರಾಜನೀತಿಜ್ಞ ಪ್ರಣಬ್ ದಾ ಅವರು. ಅವರು ದಶಕಗಳಿಂದ ನಿಸ್ವಾರ್ಥವಾಗಿ ದೇಶ ಸೇವೆ ಮಾಡಿದ್ದಾರೆ. ದೇಶದ ಅಭಿವೃದ್ಧಿ ಪಧದಲ್ಲಿ ಅಚ್ಚಳಿಯದ ಗುರುತು ಮೂಡಿಸಿದ್ದಾರೆ. ಅವರ ಪಾಂಡಿತ್ಯ, ಬುದ್ಧಿಮತ್ತೆ ಆದರ್ಶನೀಯ. ಅವರಿಗೆ ಭಾರತ ರತ್ನ ಸಿಕ್ಕಿದೆ ಎನ್ನಲು ಹೆಮ್ಮೆಯಾಗುತ್ತಿದೆ"- ನರೇಂದ್ರ ಮೋದಿ
|
ಪದ್ಮ ಪ್ರಶಸ್ತಿ ವಿಜೇತರಿಗೆ ಅಭಿನಂದನೆ
"ಪದ್ಮ ಪ್ರಶಸ್ತಿಯನ್ನು ಗೆದ್ದ ಎಲ್ಲರಿಗೂ ಅಭಿನಂದನೆಗಳು. ತಮ್ಮದೇ ಆದ ಕ್ಷೇತ್ರದಲ್ಲಿ ಸಾಧನೆ ಮಾಡಿದ ಈ ಪ್ರಶಸ್ತಿ ವಿಜೇತರೆಲ್ಲರೂ ಭಾರತದ ಹೆಮ್ಮೆ. ಈ ಜಗತ್ತಿನಲ್ಲಿ ನಮ್ಮ ದೇಶದ ಕೀರ್ತಿಯನ್ನು ಅವರೆಲ್ಲ ಹೆಚ್ಚಿಸಿದ್ದಾರೆ"- ನರೇಂದ್ರ ಮೋದಿ
-
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ












Click it and Unblock the Notifications