ಪ್ರಧಾನಿಗೆ ಪಂಚ ಪ್ರಶ್ನೆ ಕೇಳಿದ ಬಿಜೆಪಿಯ ಜೇಟ್ಲಿ
ನವದೆಹಲಿ,
ಜ.3: ಕಳೆದ 10 ವರ್ಷಗಳಲ್ಲಿ ಇಂದು ಮೂರನೇ ಬಾರಿಗೆ ಸುದ್ದಿಗೋಷ್ಠಿ ನಡೆಸುತ್ತಿರುವ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರಿಗೆ ಬಿಜೆಪಿ ಹಿರಿಯ ನಾಯಕ ಅರುಣ್ ಜೇಟ್ಲಿ ಅವರು ಐದು ಪ್ರಶ್ನೆಗಳು ಕೇಳಿದ್ದಾರೆ. id="toptextpromo">ಮುಂದಿನ
ಅವಧಿಗೆ ತಾನು ಪ್ರಧಾನಿ ಆಗುವುದಿಲ್ಲವೆಂದು ಸುದ್ದಿಗೋಷ್ಠಿಯ ಆರಂಭದಲ್ಲೇ ಕಡ್ಡಿಮುರಿದಂತೆ ಹೇಳಿರುವ ಪ್ರಧಾನಿ ಸಿಂಗ್ ಅವರಿಗೆ ರಾಜ್ಯಸಭೆಯ ಪ್ರತಿಪಕ್ಷದ
ನಾಯಕ
ಅರುಣ್
ಜೇಟ್ಲಿ
ಈ
ಕೆಳಗಿನ
ಪ್ರಶ್ನೆಗಳನ್ನು
ಕೇಳಿದ್ದಾರೆ.
id='are-slot-1'
class='oiad
oi-axt
oiadv'>
id='top-searched-articles'>
1.
ಪ್ರಧಾನಿಯಾಗಿ ತಮ್ಮ ಆಡಳಿತಾವಧಿಯನ್ನು ಚರಿತ್ರೆ ಹೇಗೆ ಗುರುತಿಸಬಯಸುತ್ತದೆ?2. ಪ್ರಧಾನಿ ನರಸಿಂಹರಾವ್ ಆಡಳಿತಾವಧಿಯಲ್ಲಿ ನೀವು ಹಣಕಾಸು ಸಚಿವಾರಗಿದ್ದುದು ಹೆಚ್ಚುತೃಪ್ತಿ ಕೊಟ್ಟಿದೆಯೋ ಅಥವಾ ಪ್ರಧಾನಿಯಾಗಿ ನಿಮ್ಮ ಆಡಳಿತ ಉತ್ತಮವಾಗಿದೆಯೋ, ದಯವಿಟ್ಟು ತಿಳಿಸಿ.
3. ನಿಮ್ಮ ಸರಕಾರ ಅತ್ಯಂತ ಭ್ರಷ್ಟ ಸರಕಾರ ಎಂದು ಪರಿಭಾವಿಸಲಾಗಿದೆ. ನೀವು ಎಲ್ಲಿ ಎಡವಿದಿರಿ ಎಂಬುದರ ಅರಿವು ನಿಮಗಿದೆಯಾ?
4. ಬಂಡವಾಳ ಹೂಡಿಕೆಯ ಚಕ್ರವೇ ಮುರಿದುಬೀಳುವಂತಹ ಆರ್ಥಿಕ ಸ್ಥಿತಿ ನಮ್ಮದಾಗಿದೆ. ದೇಶದ ಆರ್ಥಿಕತೆಯ ನಿರ್ವಹಣೆಯಲ್ಲಿ ಎಲ್ಲಿ ತಪ್ಪು ಮಾಡಿದಿರಿ ಅನಿಸುತ್ತಿದೆ, ನಿಮಗೆ?
5. ತಮ್ಮ ಆಳ್ವಿಕೆಯಲ್ಲಿ CBI, CVC, JPC ಮತ್ತು Civil Services ನಂತಹ ಸಾಂಸ್ಥಿಕ ವ್ಯವಸ್ಥೆಗಳು ಶಿಥಿತಗೊಂಡವು. ಅದರ ಜವಾಬ್ದಾರಿಯನ್ನು ನೀವು ಹೊರುತ್ತೀರಾ?












Click it and Unblock the Notifications