PM Kissan ಹಣ ಬಿಡುಗಡೆ ಮುನ್ನವೇ ರೈತರಿಗೆ ಶಾಕಿಂಗ್ ನ್ಯೂಸ್! ಈ ಕೆಲಸ ಮಾಡದೇ ಹೋದ್ರೆ ದುಡ್ಡು ಬರೋಲ್ಲ

PM Kissan Scheme: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 24ನೇ ಕಂತಿನ ಹಣ ಇದೇ ಅಕ್ಟೋಬರ್ 30ರಂದು ಬಿಡುಗಡೆ ಆಗಲಿದೆ. ಇದರ ನಡುವೆ ಅರ್ಹ ಫಲಾನುಭವಿಗಳಿಗೆ ಕೇಂದ್ರ ಸರ್ಕಾರ ಶಾಕಿಂಗ್ ನ್ಯೂಸ್ ನೀಡಿದೆ. ಇನ್ನು ಮುಂದೆ ಪ್ರತಿ ವರ್ಷವು ನೀವು ಇ-ಕೆವೈಸಿ ಮಾಡಿಸಲೇಬೇಕೆಂದು ಕೃಷಿ ಇಲಾಖೆ ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ರಾಜ್ಯ ಸರ್ಕಾರವು ಅರ್ಹ ರೈತರ ಖಾತೆಗೆ 2000 ರೂ. ಸಹಾಯಧನವನ್ನು ಯೋಜನೆಯಡಿ ನೀಡುತ್ತಾ ಬಂದಿದೆ. ಇದೀಗ 24 ಕಂತಿನ ಹಣ ಬಿಡುಗಡೆ ಆಗಲಿದ್ದು, 9.34 ಕೋಟಿ ಅರ್ಹ ರೈತರಿಗೆ ಇದರ ಪ್ರಯೋಜನ ಸಿಗಲಿದೆ. ಕರ್ನಾಟಕದಲ್ಲಿ ಮೈಸೂರಿನಲ್ಲಿ ಅರ್ಹ ರೈತರ ಇ-ಕೆವೈಸಿ ಆಗಿಲ್ಲ ಎಂಬ ಅಂಕಿ ಅಂಶಗಳು ಲಭ್ಯವಾಗಿವೆ.!

PM Kisan 24th Installment

ಪಿಎಂ ಕಿಸಾನ್ ಹಣ ಪಡೆಯಬೇಕಾದರೇ ಕೂಡಲೇ ಅರ್ಹ ರೈತರು ತಮ್ಮ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಕೇಂದ್ರ ಕೃಷಿ ಇಲಾಖೆ ಪ್ರಕಾರ, ಇನ್ನು ಮುಂದೆ ಪ್ರತಿ ವರ್ಷವು ಅರ್ಹ ಫಲಾನುಭವಿಗಳಿಂದ ಇ-ಕೆವೈಸಿ ಮಾಡಿಸಿಕೊಳ್ಳಲಾಗುತ್ತದೆ. ಒಂದೊಮ್ಮೆ ಮಾಡಿದರೆ ಸಾಕು ಎಂದುಕೊಂಡಿದ್ದ ರೈತರಿಗೆ ಮತ್ತೆ ತಾಪತ್ರಯ ಎದುರಾಗುವ ಸಾಧ್ಯತೆ ಇದೆ. ದಾಖಲೆಗಳು ಸರಿ ಇದ್ದು, ಅರ್ಹರಾಗಿದ್ದಲ್ಲಿ ಸುಲಭವಾಗಿ ಇ-ಕೆವೈಸಿ ಮಾಡಿಕೊಂಡು ಹಣ ಪಡೆಯಬಹುದಾಗಿದೆ..

ಪ್ರತಿ ವರ್ಷ ಇ-ಕೆವೈಸಿ ಮಾಡಿಲ್ಲಾಂದ್ರೆ ಹಣ ಬರಲ್ಲ!

ರೈತರು ಮುಖ ಚಹರೆ (ಫೇಸ್ ಅಥೆಂಟಿಕೇಷನ್), ಬಯೋಮೆಟ್ರಿಕ್ ನಂತರಹ ಇ-ಕೆವೈಸಿ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಅದಕ್ಕಾಗಿ ನೀವು ಹತ್ತಿರದ ಬೆಂಗಳೂರು ಒನ್, ಕರ್ನಾಟಕ ಒನ್, ರೈತ ಸಂಪರ್ಕ ಕೇಂದ್ರಗಳು, ಗ್ರಾಮ್ ಒನ್‌ಗಳಿಗೆ ಇಲ್ಲವೇ ಕಂಪ್ಯೂಟರ್ ಸೆಂಟರ್‍‌ಗಳಿಗೆ ಭೇಟಿ ನೀಡಬೇಕು. ದಾಖಲೆ ಸಮೇತ ತೆರಳಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಒಂದು ಪ್ರತಿ ವರ್ಷ ಇ-ಕೆವೈಸಿ ಮಾಡಿಸಿಕೊಳ್ಳದೇ ಹೋದರೆ ಹಣ ನಿಮ್ಮ ಖಾತೆಗೆ ಬರುವುದಿಲ್ಲ. ನಿರ್ಲಕ್ಷ್ಯ ವಹಿಸದಂತೆ ಎಂದು ತಿಳಿಸಿದೆ.

ಮೈಸೂರಲ್ಲಿ ಬಾಕಿ ಇ-ಕೆವೈಸಿ ಬಾಕಿ

ಪಿಎಂ ಕಿಸಾನ್ ಯೋಜನೆಯಡಿ ನೋಂದಣಿ ಮಾಡಿಕೊಂಡ ರಾಜ್ಯದ ರೈತರ ಪೈಕಿ ಮೈಸೂರಿನ ಸುಮಾರು 12000ಕ್ಕೂ ಅಧಿಕ ರೈತರ ಇ-ಕೆವೈಸಿ ಬಾಕಿ ಇದೆ. ತಾಲೂಕಿನಲ್ಲಿ ಒಟ್ಟು 12,000ಕ್ಕೂ ಹೆಚ್ಚು ರೈತರು ಕೂಡಲೇ ಕೆವೈಸಿ ಪ್ರಕ್ರಿಯೆಗೆ ಒಳಗೊಳ್ಳಬೇಕು. ನಿರ್ಲಕ್ಷ್ಯ ಮಾಡಿದ್ರೆ ಹಣ ವಿತರಣೆ ಪ್ರಕ್ರಿಯೆಯಲ್ಲಿ ಸಮಸ್ಯೆ ಆಗಲಿದೆ, ಹಣ ಜಮೆ ಆಗುವುದಿಲ್ಲ ಎಂದು ಮೈಸೂರು ಜಿಲ್ಲಾ ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯ ಇಲವಾಲ ಹೋಬಳಿಯಲ್ಲಿ 3,496 ರೈತ ಫಲಾನುಭವಿಗಳು, ಜಯಪುರದಲ್ಲಿ 4,758, ಕಸಬಾ ಹೋಬಳಿಯಲ್ಲಿ 1,171 ಫಲಾನುಭವಿಗಳು ಮತ್ತು ವರುಣದಲ್ಲಿನ ಸುಮಾರು 3,042 ಅರ್ಹ ರೈತ ಫಲಾನುಭವಿಗಳು ಇ-ಕೆವೈಸಿ ಮಾಡಿಕೊಂಡಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪಿಎಂ ಕಿಸಾನ್ ಯೋಜನೆಯಡಿ 23 ನೇ ಕಂತಿನ ಹಣವು ಕಳೆದ ಜೂನ್ 20 ರಂದು ಬಿಡುಗಡೆ ಆಗಿತ್ತು. ಅಂದು ಎಲ್ಲ ಫಲಾನುಭವಿಗಳ ಖಾತೆಗೆ ಬರೋಬ್ಬರಿ 18,880 ಕೋಟಿ ರೂಪಾಯಿ ಪಾವತಿಯಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+