• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೀತಿ ಆಯೋಗದ 'ಮೆಂಟರ್ ಆಫ್ ಚೇಂಜ್'ಗೆ ನೀವೂ ಕೈ ಜೋಡಿಸಿ

|
Google Oneindia Kannada News

ನೀತಿ ಆಯೋಗವು ಅಟಲ್ ಇನೊವೇಷನ್ ಮಿಷನ್ ಅಡಿಯಲ್ಲಿ ಮೆಂಟರ್ ಇಂಡಿಯಾ ಎಂಬ ದೇಶ ಕಟ್ಟುವ ಕಾರ್ಯಕ್ರಮವೊಂದಕ್ಕೆ ಚಾಲನೆ ನೀಡಿದೆ. ದೇಶದಾದ್ಯಂತ ಇರುವ ನಾಯಕರು ಯಾರು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಾರೋ, ಮಾರ್ಗದರ್ಶನ ನೀಡಬಲ್ಲರೋ ಅಂಥವರನ್ನು ಇದರಲ್ಲಿ ತೊಡಗಿಸಿಕೊಳ್ಳಲಾಗುತ್ತದೆ.

ಅಪನಗದೀಕರಣದಿಂದ ನಗದು ವ್ಯವಹಾರ ಇಳಿಕೆ: ಜೇಟ್ಲಿಅಪನಗದೀಕರಣದಿಂದ ನಗದು ವ್ಯವಹಾರ ಇಳಿಕೆ: ಜೇಟ್ಲಿ

ಅದಕ್ಕಾಗಿ ಒಂಬೈನೂರಕ್ಕೂ ಹೆಚ್ಚು ಅಟಲ್ ಆಲೋಚನಾ ಪ್ರಯೋಗಶಾಲೆಗಳು ಆರಂಭವಾಗಿವೆ. ಇಡೀ ದೇಶದಾದ್ಯಂತ ಈ ಪ್ರಯೋಗ ಶಾಲೆಗಳು ಆರಂಭವಾಗಲಿವೆ. ಪ್ರತಿ ವಾರವೂ ವಿದ್ಯಾರ್ಥಿಗಳೊಂದಿಗೆ ಕನಿಷ್ಠ ಒಂದೆರಡು ಗಂಟೆ ಮೀಸಲಾಗಿ ಇಡಬಲ್ಲ ನಾಯಕರಿಗಾಗಿ ಎದುರು ನೋಡಲಾಗುತ್ತಿದೆ.

ಆ ಮೂಲಕ ವಿದ್ಯಾರ್ಥಿಗಳಿಗೆ ತಮ್ಮ ಅನುಭವ ದಾಟಿಸುವಂಥವರು, ಭವಿಷ್ಯಕ್ಕಾಗಿ ಕೌಶಲದ ಜತೆಗೆ ಸನ್ನದ್ಧರಾಗಲು ಮಾರ್ಗದರ್ಶನ ನೀಡಬಲ್ಲಂಥ ನಾಯಕರಿಗಾಗಿ ಎದುರು ನೋಡಲಾಗುತ್ತಿದೆ. ಈ ಯೋಜನೆಯಲ್ಲಿ ವಿವಿಧ ಕ್ಷೇತ್ರದ ನಾಯಕರು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ, ಉತ್ತೇಜಿಸುವಂತಿರಬೇಕು.

ರೈಲ್ವೆ ಸುರಕ್ಷತೆಗೆ ಸಚಿವ ಗೋಯೆಲ್ ಸುದೀರ್ಘ ಸಭೆ, ಐದು ಸೂಚನೆಗಳುರೈಲ್ವೆ ಸುರಕ್ಷತೆಗೆ ಸಚಿವ ಗೋಯೆಲ್ ಸುದೀರ್ಘ ಸಭೆ, ಐದು ಸೂಚನೆಗಳು

ಟೆಕ್ನಿಕಲ್ ನೌ ಹೌ
ಆವಿಷ್ಕಾರ ಹಾಗೂ ಡಿಸೈನ್
ಪ್ರೇರಣೆ ಹಾಗೂ ನಾಯಕತ್ವ ಗುಣಕ್ಕೆ ಪ್ರೋತ್ಸಾಹ
ವ್ಯಾಪಾರ ಹಾಗೂ ಉದ್ಯಮಶೀಲತೆ

ಹೀಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ತಮ್ಮ ಅನುಭವವನ್ನು ಭವಿಷ್ಯದ ತಲೆಮಾರಿನವರೊಂದಿಗೆ ಹಂಚಿಕೊಳ್ಳಬೇಕು ಎಂಬುದು ಈ ಯೋಜನೆಯ ನಿರೀಕ್ಷೆ.

ಮೆಂಟರ್ ಆಫ್ ಚೇಂಜ್ ಗೆ ಅರ್ಜಿ ಸಲ್ಲಿಸುವುದಕ್ಕೆ ಸೆಪ್ಟೆಂಬರ್ 30, 2017 ಕೊನೆ ದಿನ. ಇಡೀ ಕಾರ್ಯಕ್ರಮದ ಬಗ್ಗೆ ಮತ್ತಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

English summary
Mentor India is a strategic nation building initiative to engage leaders who can guide and mentor students in 900+ Atal Tinkering Labs that Atal Innovation Mission has established / is in the process of establishing across India. They are looking for leaders who can spend 1 – 2 hours every week in one or more such labs and enable students to experience, learn and practice future skills.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X