ನೀವು ತಿನ್ನುವ ಅಕ್ಕಿ ಯಾವುದರಿಂದ ಮಾಡಿದ್ದು!?
ಬೆಂಗಳೂರು, ಜು. 11:ನೀವು ತಿನ್ನುವ ಅಕ್ಕಿ ಯಾವುದರಿಂದ ಮಾಡಿದ್ದು? ಇದೆಂಥ ಎಡವಟ್ಟು ಪ್ರಶ್ನೆ ಅಂದುಕೊಂಡಿರಾ. ಹೀಗೆ ಕೇಳಬೇಕಾದ ಸಂದರ್ಭವೂ ಈಗ ಬಂದಿದೆ.
ಕಲಬೆರಕೆ ಎಣ್ಣೆ, ತರಕಾರಿ ಬಗ್ಗೆ ಕೇಳಿರಬಹುದು. ಪ್ಲಾಸ್ಟಿಕ್ ಮೇಡ್ ಚೀನಾ ಅಕ್ಕಿ ಇದೀಗ ದೇಶದ ಎಲ್ಲ ಕಡೆ ವ್ಯಾಪಿಸುತ್ತಿದ್ದು ಈ ಬಗ್ಗೆ ವಿಚಾರಣೆ ನಡೆಸುವಂತೆ ದೆಹಲಿ ನ್ಯಾಯಾಲಯಕ್ಕೆ ಅರ್ಜಿ ದಾಖಲಾಗಿದೆ. ಸಿಹಿ ಆಲೂಗಡ್ಡೆ ಮತ್ತು ಪ್ಲಾಸ್ಟಿಕ್ ಬಳಸಿ ತಯಾರಿಸಿದ ಚೀನಾ ಅಕ್ಕಿಯನ್ನು ಕೇರಳದದೆಲ್ಲಡೆ ಮಾರಾಟ ಮಾಡಲಾಗುತ್ತಿತ್ತು ಎಂದು ಹಿಂದೆ ವರದಿಯಾಗಿತ್ತು. [ಸಿಎಂ ಸಿದ್ರಾಮಣ್ಣನ ಅನ್ನಭಾಗ್ಯ ಸ್ಕೀಂನಲ್ಲಿ ಉಂಡವನೇ ಜಾಣ]

ಸಿಹಿ ಆಲೂಗಡ್ಡೆಯನ್ನು ಮೊದಲು ಅಕ್ಕಿ ಮಾದರಿಗೆ ತಂದುಕೊಳ್ಳಲಾಗಿತ್ತದೆ. ಕೈಗಾರಿಕೆ ತ್ಯಾಜ್ಯಗಳನ್ನು ಮಿಶ್ರಣ ಮಾಡಲು ಬಳಸಿಕೊಳ್ಳಲಾಗುತ್ತದೆ. ಚೈನೀಸ್ ಪಾಲಿಮರ್ ನ್ನು ಸಹ ಬಳಸಿಕೊಳ್ಳಲಾಗುತ್ತದೆ. ಅಕ್ಕಿಯನ್ನು ಬೇಯುಸಿದಾಗ ಪ್ಲಾಸ್ಟಿಲ್ ತರಹದ ವಸ್ತು ತೇಲುತ್ತಿರುವುದು ಕಂಡುಬಂದಿದೆ ಎಂದು ಜನರು ತಿಳಿಸಿದ್ದಾರೆ.
ಸದ್ಯ ಕೇರಳದ ಕೋಯಿಕೋಡ್ ಜಿಲ್ಲೆಯಲ್ಲಿ ಇಂಥ ಅಕ್ಕಿ ಮಾರಾಟವಾಗುತ್ತಿದೆ. ಹಲವಾರು ಬಗೆಯ ಬ್ರ್ಯಾಂಡ್ ಗಳಲ್ಲೂ ಇಂಥ ಅಕ್ಕಿ ಕಂಡುಬಂದಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಇಂಥ ಅಕ್ಕಿ ಸೇವನೆ ಹೊಟ್ಟೆ ನೋವಿನ ಸಮಸ್ಯೆ ಉಂಟು ಮಾಡಬಹುದು. ಸಾಮಾನ್ಯ ಅಕ್ಕಿಯೊಂದಿಗೆ ಇದನ್ನು ಬೆರೆಸಿ ಮಾರಾಟ ಮಾಡುತ್ತಿರುವುದು ಸಮಸ್ಯೆಯಾಗಿ ಪರಿಣಮಿಸಿದೆ. [ಪೇಟೆಂಟ್ ಪ್ರಾಬ್ಲಂ ಚೀನಾ ಮೊಬೈಲ್ ಸೇಲ್ ಬಂದ್!]
ಭಾರತಕ್ಕೆ ಆಮದಾಗುತ್ತಿರುವ ಅಕ್ಕಿ ಪರೀಕ್ಷೆ ಮಾಡಲು ಯಾವುದೇ ನಿರ್ದಿಷ್ಟ ವ್ಯವಸ್ಥೆ ಇಲ್ಲ. ಅಲ್ಲದೇ ಆನ್ ಲೈನ್ ಮೂಲಕ ಸಿಂಗಪುರ್ ಮತ್ತು ಚೀನಾದಿಂದ ಮಾರಾಟವಾಗುತ್ತಿರುವ ಅಕ್ಕಿಯಲ್ಲಿ ಇಂಥ ಅಂಶಗಳು ಕಂಡುಬಂದಿದೆ.












Click it and Unblock the Notifications