ಪೆಟ್ರೋಲ್ ದರ 1 ರೂ., ಡೀಸೆಲ್ ದರ 2 ರೂ. ಕಡಿತ

ಬೆಂಗಳೂರು, ಆಗಸ್ಟ್ 16 : ಪೆಟ್ರೋಲ್ ಮತ್ತು ಡೀಸೆಲ್ ದರ ಕಡಿಮೆಯಾಗಿದೆ. ಪೆಟ್ರೋಲ್ ಲೀಟರ್‌ಗೆ 1 ರೂ. ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 2 ರೂ. ಇಳಿಕೆಯಾಗಿದೆ. ಆಗಸ್ಟ್ 15 ಮಧ್ಯರಾತ್ರಿಯಿಂದಲೇ ನೂತನ ದರ ಜಾರಿಗೆ ಬಂದಿದೆ.

ಜುಲೈ 31ರಂದು ಪೆಟ್ರೋಲ್ ಪ್ರತಿ ಲೀಟರ್ ಗೆ 1.42 ರೂ. ಮತ್ತು ಡೀಸೆಲ್ ದರ ಪ್ರತಿ ಲೀಟರ್‌ಗೆ 2.01 ರೂ. ಕಡಿತವಾಗಿತ್ತು. ಈಗ ಮತ್ತೆ 1 ಮತ್ತು 2 ರೂ. ಕಡಿತಮಾಡಲಾಗಿದೆ. ಕಳೆದ ಎರಡು ತಿಂಗಳಿನಿಂದ ಏರಿಕೆ ಕಾಣುತ್ತಿದ್ದ ತೈಲ ಬೆಲೆಗಳು ಜುಲೈ ತಿಂಗಳಿನಲ್ಲಿ ಕಡಿಮೆಯಾಗಿತ್ತು.[ಈ ನಗರದಲ್ಲಿ ಈಗ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 300 ರು!]

petrol

ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ (ಎಚ್‌ಪಿಸಿಎಲ್) ಪ್ರತಿ ತಿಂಗಳ 1 ಮತ್ತು 16ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪರಿಷ್ಕರಣೆ ಮಾಡುತ್ತವೆ. ಅದರಂತೆ ಆಗಸ್ಟ್ 16ರಂದು ಬೆಲೆ ಇಳಿಕೆ ಮಾಡಲಾಗಿದೆ.[ಸಿದ್ದರಾಮಯ್ಯ ಅವ್ರೇ, ಪೆಟ್ರೋಲ್ ಮೇಲೆ ವ್ಯಾಟ್ ಇಳಿಕೆ ಮಾಡ್ರಿ]

ನೂತನ ದರದ ಅನ್ವಯ ದೇಶದ ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 60.09 ಮತ್ತು ಡೀಸೆಲ್ ದರ ರೂ.50.27 ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+