‘ಪೆಟಿಎಂ’ ಬಳಕೆದಾರರಿಗೆ ಭರ್ಜರಿ ಸುದ್ದಿ, ತಪ್ಪದೆ ಓದಿ!
ಹಣ ಹಿಡಿದುಕೊಂಡು ಅಂಗಡಿಗೆ ಹೋಗುವ ಕಾಲ ಮುಗಿದು ಹೋಗಿದೆ. ಈಗ ಭಾರತದಲ್ಲಿ ಏನಿದ್ದರೂ ಆನ್‌ಲೈನ್ ಪೇಮೆಂಟ್ ಜಮಾನ ವರ್ಕೌಟ್ ಆಗುತ್ತಿದೆ. ಅದರಲ್ಲೂ ಆನ್‌ಲೈನ್ ಪೇಮೆಂಟ್ ಅಂದ್ರೆ ಅದು 'ಪೆಟಿಎಂ' ಅನ್ನುವ ಮಟ್ಟಿಗೆ ಕಳೆದ ಕೆಲವು ವರ್ಷಗಳಿಂದ ಇಡೀ ಭಾರತ, ಪೆಟಿಎಂ ಅಪ್ಲಿಕೇಷನ್ ಬಳಕೆ ಮಾಡುತ್ತಿತ್ತು. ಆದರೆ ಈಗ 'ಪೆಟಿಎಂ' ಸಂಸ್ಥೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ.
ಅಂದಹಾಗೆ ಆರ್‌ಬಿಐ ನಿರ್ಬಂಧ ಹೇರಿದ ನಂತರ 'ಪೆಟಿಎಂ' ಬುಡವೇ ಅಲುಗಾಡಿ ಹೋಗಿ ಭಾರಿ ದೊಡ್ಡ ಸುದ್ದಿಯಾಗುತ್ತಿದೆ. ಈ ನಡುವೆ ಎಲ್ಲಾ ಸರಿಯಾಗಲಿದೆ ಅನ್ನೋ ಸಮಾಧಾನ ಮೂಡುವ ಸಮಯದಲ್ಲೇ ಮತ್ತೊಂದು ಆಘಾತಕಾರಿ ಸುದ್ದಿ ಎದುರಾಗಿದೆ. ಅದು ಏನಪ್ಪಾ ಅಂದ್ರೆ ಪೆಟಿಎಂ ಎಂಡಿ & ಸಿಇಒ ರಾಜೀನಾಮೆ ನಂತರ, ಪೆಟಿಎಂ ಷೇರುಗಳ ಕುಸಿತ ಹೂಡಿಕೆಯ ಮಾಡಿದ್ದವರ ಮೇಲೆ ನೇರ ಪರಿಣಾಮ ಬೀರಿದೆ. ಇದರ ಜೊತೆಗೆ ಪೆಟಿಎಂ ಬಳಕೆದಾರರ ಕಥೆ ಏನು? ಅನ್ನೋ ಪ್ರಶ್ನೆ ಕೂಡ ಈಗ ಮೂಡಿದೆ.

ಸ್ವಲ್ಪ ಎಡವಟ್ಟು ಆದರೂ ಫಿನಿಶ್!
ಷೇರು ಮಾರುಕಟ್ಟೆಯಲ್ಲಿ ಸ್ವಲ್ಪ ಎಡವಟ್ಟು ಆದರೂ ಮುಗಿದು ಹೋಯಿತು ಕಥೆ ಅಂತಾ ಹೇಳಬಹುದು. ಯಾಕಂದ್ರೆ ಷೇರು ಮಾರುಕಟ್ಟೆಯಲ್ಲಿ ಸಣ್ಣ ಸುದ್ದಿ ಬಿರುಗಾಳಿ ಎಬ್ಬಿಸುತ್ತೆ. ಪಿಪಿಬಿಎಲ್ MD & CEO ಸುರೀಂದರ್ ಚಾವ್ಲಾ ವೈಯಕ್ತಿಕ ಕಾರಣ ಹೇಳಿ ತಮ್ಮ ರಾಜೀನಾಮೆಯ ಸಲ್ಲಿಸಿದ್ದಾರೆ. ಪರಸ್ಪರ ಒಪ್ಪಿಗೆ ಹೊರತಾಗಿ ಜೂನ್ 26, 2024 ರಂದು ತಮ್ಮ ಕರ್ತವ್ಯದಿಂದಲೇ ಬಿಡುಗಡೆ ಆಗಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಬಗ್ಗೆ ಪೇಟಿಎಂನ ಪೋಷಕ ಸಂಸ್ಥೆ ಆಗಿರುವ One97 ಕಮ್ಯುನಿಕೇಷನ್ಸ್ ಷೇರು ಮಾರುಕಟ್ಟೆಗೆ ಮಾಹಿತಿ ನೀಡಿದೆ. ಈ ಎಲ್ಲ ಬೆಳವಣಿಗೆ ನಡುವೆ ಇಂದು ಬೆಳಗ್ಗೆಯೇ 'ಪೆಟಿಎಂ' ಷೇರುಗಳು ಮಕಾಡೆ ಮಲಗಿ, ಹೂಡಿಕೆ ಮಾಡಿದ್ದವರಿಗೆ ಆತಂಕ ಎದುರಾಗಿ ಅಲ್ಲೋಲ ಕಲ್ಲೋಲವೇ ಉಂಟಾಗಿತ್ತು.
ಮೊದಲು ಆಘಾತ.. ನಂತರ ಚೇತರಿಕೆ!
ಹೀಗೆ ಷೇರು ಮಾರುಕಟ್ಟೆ ಆರಂಭ ಆಗುತ್ತಿದ್ದಂತೆ ಇಂದು ದೊಡ್ಡ ಆಘಾತವೇ ಎದುರಾಗಿತ್ತು. ಆರಂಭದಲ್ಲಿ 'ಪೆಟಿಎಂ' ಷೇರುಗಳು ಮಕಾಡೆ ಮಲಗಿದರೂ ನಂತರ ಷೇರು ಮಾರುಕಟ್ಟೆಯಲ್ಲಿ ಚೇತರಿಕೆ ಕಂಡಿವೆ. ಹೀಗಾಗಿ ಷೇರು ಪೇಟೆಯಲ್ಲಿ ಹೂಡಿಕೆದಾರರು ಒಂದಷ್ಟು ನಿಟ್ಟುಸಿರನ್ನು ಬಿಟ್ಟಿದ್ದಾರೆ. ಮತ್ತೊಂದು ಕಡೆ 'ಪೆಟಿಎಂ' ಸಂಸ್ಥೆಯ ಒಳಗೆ ಸಾಕಷ್ಟು ವಿವಾದಗಳು ಮತ್ತು ಬದಲಾವಣೆ ನಡೆಯುತ್ತಿರುವ ಕಾರಣಕ್ಕೆ ಮುಂದಿನ ದಿನಗಳಲ್ಲಿ ಕೂಡ ಪೆಟಿಎಂ ಷೇರುಗಳ ಏರಿಳಿತ ಮಾಮೂಲಿ ಎಂಬ ಮಾತುಗಳೂ ಕೇಳಿಬರುತ್ತಿವೆ. ಇದು ಒಂದು ಕಡೆ ಇರಲಿ, ಇದೇ ರೀತಿ ಪರಿಸ್ಥಿತಿ ಮುಂದುವರಿದರೆ ಪೆಟಿಎಂ ಬಳಕೆದಾರರ ಕಥೆ ಏನಾಗಲಿದೆ? ಎಂಬ ಪ್ರಶ್ನೆಯು ಈಗ ಮೂಡಿದೆ.
ಒಟ್ನಲ್ಲಿ ಸಣ್ಣ ವಿಚಾರ ಒಂದು ಹೇಗೆಲ್ಲಾ ದೊಡ್ಡ ಬಿರುಗಾಳಿ ಎಬ್ಬಿಸಬಹುದು ಎಂಬುದಕ್ಕೆ ಪೆಟಿಎಂ ಘಟನೆಯೇ ಒಂದು ಉದಾಹರಣೆ ಎನ್ನಬಹುದು. ಯುಪಿಐ ಪೇಮೆಂಟ್ ಮೂಲಕ ಇಡೀ ದೇಶದ ಗಮನ ಸೆಳೆದು ಜಾಗತಿಕವಾಗಿ ಬೆಳೆದ 'ಪೆಟಿಎಂ' ಈಗ ಮೂಲೆ ಗುಂಪಾಗಿದೆ. ಪೆಟಿಎಂ ಸಂಸ್ಥೆ ಸ್ಥಿತಿ ಈಗ ಹೇಗಾಗಿದೆ ಅಂದ್ರೆ ಕಂಪನಿ ಉಳಿಸಿಕೊಂಡರೆ ಸಾಕಪ್ಪಾ ಅಂತಿದ್ದಾರೆ ಉದ್ಯೋಗಿಗಳು. ಏಕೆಂದರೆ ಸಾಲು ಸಾಲು ಸಮಸ್ಯೆ ಎದುರಿಸುತ್ತಿರುವ 'ಪೆಟಿಎಂ' ಇನ್ನೇನು ಸಂಪೂರ್ಣ ಮುಳುಗಿ ಹೋಗುವ ಪರಿಸ್ಥಿತಿ ಕೂಡ ಎದುರಾಗುತ್ತಿದೆ ಎಂಬ ಆರೋಪಗಳು ಈ ಸಮಯದಲ್ಲಿ ಕೇಳಿಬರುತ್ತಿವೆ. ಇದೇ ಕಾರಣಕ್ಕೆ ಉದ್ಯೋಗಿಗಳಲ್ಲಿ ಕೂಡ ಕೆಲಸದ ಕುರಿತಾಗಿ ಆತಂಕ ಶುರುವಾಗಿದೆ.












Click it and Unblock the Notifications