ಆ. 11 ರ ಭಾಗಶಃ ಸೂರ್ಯಗ್ರಹಣ: ಏನಿದರ ಮಹತ್ವ?

ನವದೆಹಲಿ, ಆಗಸ್ಟ್ 09: ಜಗವನ್ನು ಬೆಳಗುವ ಸೂರ್ಯ ಆಗಸ್ಟ್ 11 ರಂದು ಕೆಲಕಾಲ ಮಂಕಾಗಲಿದ್ದಾನೆ. ಬೆಂಕಿಯುಗುಳುವ ಸೂರ್ಯ ಕೆಲ ಹೊತ್ತು ಶಾಂತವಾಗುತ್ತಾನೆ. ಕಾರಣ ಅಂದು ಸೂರ್ಯಗ್ರಹಣ!

ಆಗಸ್ಟ್ 11, ಶನಿವಾರದಂದು ಭಾಗಶಃ ಸೂರ್ಯಗ್ರಹಣ ಕಂಡುಬರಲಿದ್ದು, ಇದು ಈ ವರ್ಷದ ಮೂರನೇ ಸೂರ್ಯಗ್ರಹಣವಾಗಿದೆ. ಕಳೆದ ಫೆಬ್ರವರಿ ಮತ್ತು ಜುಲೈನಲ್ಲಿ ಸೂರ್ಯಗ್ರಹಣ ಸಂಭವಿಸಿತ್ತು.

ಈ ಸೂರ್ಯಗ್ರಹಣ ಭಾರತದಲ್ಲಿ ಗೋಚರವಾಗುವುದಿಲ್ಲವಾದರೂ ನಂಬಿಕೆ ಇರುವ ಕೆಲವರು ಈ ದಿನವನ್ನು ಆಚರಿಸುತ್ತಾರೆ. ಸೂರ್ಯ ಗ್ರಹಣ ಎಂದರೆ ಅದು ಖಗೋಳ ಶಾಸ್ತ್ರಜ್ಜರಿಗೆ ಮತ್ತು ವಿಜ್ಞಾನಿಗಳಿಗೆ ಹಬ್ಬ. ಅಷ್ಟಕ್ಕೂ ಈ ಗ್ರಹಣಗಳು ಯಾಕಷ್ಟು ಮುಖ್ಯ? ಅವುಗಳನ್ನು ಯಾಕೆ ನೋಡಬೇಕು?

ಭಾಗಶಃ ಸೂರ್ಯಗ್ರಹಣ ಎಂದರೇನು?

ಭಾಗಶಃ ಸೂರ್ಯಗ್ರಹಣ ಎಂದರೇನು?

ಸೂರ್ಯ, ಭೂಮಿ ಮತ್ತು ಚಂದ್ರ ಒಂದೇ ರೇಖೆಯಲ್ಲಿ ಬಂದಾಗ ಸಂಭವಿಸುವ ಖಗೋಳ ವಿಸ್ಮಯ ಇದು. ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ ಸೂರ್ಯ ಗ್ರಹಣ ಸಂಭವಿಸುತ್ತದೆ. ಖಗ್ರಾಸ ಸೂರ್ಯ ಗ್ರಹಣವೆಂದರೆ ಸೂರ್ಯನ ಬೆಳಕು ಭೂಮಿಯ ಮೇಲೆ ಬೀಳದಂತೆ ಸಂಪೂರ್ಣವಾಗಿ ಚಂದ್ರ ಮರೆಮಾಚುತ್ತಾನೆ. ಆಗ ಖಗ್ರಾಸ ಸೂರ್ಯ ಗ್ರಹಣ ಸಂಭವಿಸಿ, ಹಗಲಲ್ಲೇ ಕತ್ತಲಾಗುತ್ತದೆ. ಆದರೆ ಆಗಸ್ಟ್ 11 ರಂದು ಸಂಭವಿಸಲಿರುವ ಗ್ರಹಣ ಭಾಗಶಃ ಸೂರ್ಯಗ್ರಹಣವಾಗಿದ್ದು, ಇಲ್ಲಿ ಸೂರ್ಯ ಸಂಪೂರ್ಣವಾಗಿ ಮರೆಯಾಗದೆ ಕೊಂಚವಷ್ಟೇ ಗ್ರಹಣಕ್ಕೊಳಗಾಗುತ್ತಾನೆ.

ಗ್ರಹಣವನ್ನು ಏಕೆ ನೋಡಬೇಕು?

ಗ್ರಹಣವನ್ನು ಏಕೆ ನೋಡಬೇಕು?

ಸೂರ್ಯ, ಚಂದ್ರ ಗ್ರಹಣಗಳು ಶುಭ ಸೂಚನೆಯಲ್ಲ ಎಂಬ ನಂಬಿಕೆ ನಮ್ಮಲ್ಲಿದೆ. ವೈಜ್ಞಾನಿಕವಾಗಿ ಹೇಳುವುದಾದರೆ ಈ ಸಮಯದಲ್ಲಿ ಹೊರಬರುವ ಸೂರ್ಯ ಕಿರಣಗಳು ಆರೋಗ್ಯಕ್ಕೆ ಹಾನಿಕರವಾದ್ದರಿಂದ ಈ ಸಮಯದಲ್ಲಿ ಮನೆಯಿಂದ ಆಚೆ ಬರಬಾರದು. ಆದರೆ ಸೂರ್ಯಗ್ರಹಣವೆಂಬ ಖಗೋಳ ವಿಸ್ಮಯದ ಕುರಿತ ಕುತೂಹಲ ತಣಿಸಿಕೊಳ್ಳುವ ನಿಟ್ಟಿನಲ್ಲಿ ಈ ಗ್ರಹಣವನ್ನು ಪ್ರತಿಯೊಬ್ಬರೂ ನೋಡುವುದು ಅತ್ಯಗತ್ಯ. ಹೊಸ ತಲೆಮಾರಿನ ಮಕ್ಕಳಲ್ಲಿ ಗ್ರಹಣಗಳ ಕುರಿತು ಮೂಢನಂಬಿಕೆ ಬಿತ್ತುವ ಬದಲು, ವೈಜ್ಞಾನಿಕ ಮನೋಭಾವ ಬಿತ್ತಲು ಇದು ಸಹಕಾರಿ.

ಮೂರೂವರೆ ಗಂಟೆ ಕಾಣಲಿರುವ ಗ್ರಹಣ

ಮೂರೂವರೆ ಗಂಟೆ ಕಾಣಲಿರುವ ಗ್ರಹಣ

ಈ ಭಾಗಶಃ ಸೂರ್ಯಗ್ರಹಣ ಮೂರೂವರೆ ಗಂಟೆಗಳಷ್ಟು ದೀರ್ಘಕಾಲ ಕಾಣಿಸಿಕೊಳ್ಳಲಿದೆ. ಆಸಗಸ್ಟ್ 11 ರಂದು ಮಧ್ಯಾಹ್ನ 1:32 ಕ್ಕೆ ಆರಂಭವಾಗುವ ಗ್ರಹಣ ನಂತರ ಸಂಜೆ 5:02 ಕ್ಕೆ ಮುಕ್ತಾಯವಾಗಲಿದೆ. ಈ ಗ್ರಹಣವನ್ನು ಜನರು ಬರಿಗಣ್ಣಿನಲ್ಲಿ ನೋಡುವುದಕ್ಕೆ ಸಾಧ್ಯವಿಲ್ಲ. ಬರಿಗಣ್ಣಿನಲ್ಲಿ ನೋಡುವುದು ಅಪಾಯಕಾರಿ. ಗ್ರಹಣ ನೋಡುವುದಕ್ಕೆಂದೇ ಮಾರುಕಟ್ಟೆಗಳಲ್ಲಿ ಕನ್ನಡಕಗಳು ಲಭ್ಯವಿದ್ದು ಇವುಗಳ ಸಹಾಯದಿಂದ ಗ್ರಹಣ ನೋಡಬಹುದಾಗಿದೆ.

ಎಲ್ಲೆಲ್ಲಿ ಕಂಡುಬರಲಿದೆ?

ಎಲ್ಲೆಲ್ಲಿ ಕಂಡುಬರಲಿದೆ?

ಗ್ರೀನ್ ಲ್ಯಾಂಡ್ , ಸ್ಕಾಟ್ಲೆಂಡ್, ಐಸ್ ಲ್ಯಾಂಡ್, ನಾರ್ವೆ, ಸ್ವೀಡನ್, ಫಿನ್ ಲ್ಯಾಂಡ್ , ಈಸ್ಟೋನಿಯಾ, ಲಾಟ್ವಿಯಾ, ರಷ್ಯಾ, ಕಜಕಿಸ್ತಾನ್, ಕೈರ್ಗಿಸ್ತಾನ್, ಮಂಗೋಲಿಯಾ, ಚೀನಾ, ಉತ್ತರ, ಕೊರಿಯಾ, ದಕ್ಷಿಣ, ಕೊರಿಯಾ, ಪೂರ್ವ, ಸೈಬಿರಿಯಾ, ಸಮದ್ರ ರಾಂಗಲ್ ದ್ವೀಪ ಗಳಲ್ಲಿ ಗ್ರಹಣ ಗೋಚರವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+