ಗದ್ದಲದಲ್ಲೇ ಮುಗಿದ ಅಧಿವೇಶನ, ಹಾಗೇ ಉಳಿದ ಜಿಎಸ್‌ಟಿ
ನವದೆಹಲಿ, ಡಿಸೆಂಬರ್, 22: ಸಂಸತ್ ಚಳಿಗಾಲದ ಅಧಿವೇಶನ ಗಲಾಟೆ, ಗೊಂದಲ, ಆರೋಪ-ಪ್ರತ್ಯಾರೋಪಗಳ ನಡುವೆಯೇ ಮುಗಿದು ಹೋಗಿದೆ. ಈ ಬಾರಿ ಲೋಕಸಭೆಯಲ್ಲಿ 14 ಹಾಗೂ ರಾಜ್ಯಸಭೆಯಲ್ಲಿ 9 ಮಸೂದೆಗಳು ಅಂಗೀಕಾರ ಪಡೆದುಕೊಂಡಿವೆ.
ಸರಕು ಮತ್ತು ಸೇವೆಗಳ ಮಸೂದೆ(ಜಿಎಸ್ ಟಿ ಬಿಲ್) ಮತ್ತು ದಿವಾಳಿತನದ ಬಿಲ್ ಮಂಡನೆಗೆ ಅವಕಾಶವೇ ಸಿಕ್ಕಿಲ್ಲ. ಕಲಾಪ ಪ್ರತಿಪಕ್ಷಗಳ ಸಲ್ಲದ ಆರೋಪಕ್ಕೆ ಬಲಿಯಾಗಿಗುದೆ ಎಂದು ಆಡಳಿತಾರೂಢ ಬಿಜೆಪಿ ಆರೋಪಿಸಿದೆ.[ಅಡ್ವಾಣಿಗೆ ಕುರ್ಚಿ ಬಿಟ್ಟುಕೊಟ್ಟ ನರೇಂದ್ರ ಮೋದಿ]

ಬುಧವಾರ 20 ದಿನಗಳ ಸಂಸತ್ ಚಳಿಗಾಲದ ಅಧಿವೇಶನಕ್ಕೆಅಂತ್ಯ ಹಾಡಲಾಯಿತು. ಕೊನೆ ದಿನ ಸಹ ರಾಮಮಂದಿರ ನಿರ್ಮಾಣ ವಿಷಯದಲ್ಲಿ ವಿರೋಧ ಪಕ್ಷಗಳು ಕೊಲಾಹಲ ಎಬ್ಬಿಸಿದ್ದವು. ಕಲಾಪ ನಡೆಸಲು ಸಾಧ್ಯವಾಗದೇ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಲೋಕಸಭೆ ಕಲಾಪವನ್ನು ಅನಿರ್ಧಾವಧಿಗೆ ಮುಂದೂಡಿದರು.[ಎಎಪಿ ಸಂಸದನಿಗೆ ನೀರು ಕುಡಿಸಿದ ಮೋದಿ, ಕಿಲಕಿಲ ನಕ್ಕ ಸೋನಿಯಾ]
ನವೆಂಬರ್ 26ರಿಂದ ಆರಂಭವಾದ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಬಹುತೇಕ ಗಲಾಟೆಯದ್ದೇ ದರ್ಬಾರು. ಅಸಹಿಷ್ಣುತೆ, ಅರುಣ್ ಜೇಟ್ಲಿ ರಾಜೀನಾಮೆ ವಿಷಯಗಳು ಕೆಲ ದಿನಗಳನ್ನು ತಿಂದು ಹಾಕಿದ್ದು ಸುಳ್ಳಲ್ಲ. ಈ ಬಾರಿಯ ರಾಜ್ಯಸಭೆ ಕಲಾಪದ 112 ಗಂಟೆಗಳಲ್ಲಿ ಸುಮಾರು 55 ಗಂಟೆ ವಿರೋಧಪಕ್ಷಗಳ ಗದ್ದಲಕ್ಕೆ ಬಲಿಯಾಗಿತ್ತು. ಲೋಕಸಭೆಯಲ್ಲಿ ಬಿಜೆಪಿಗೆ ಬಹುಮತ ಇದ್ದಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಗದ್ದಲಕ್ಕೆ ಅವಕಾಶವಾಗದೆ 115 ಗಂಟೆಗಳ ಕಾಲ ಕಲಾಪ ನಡೆದಿದೆ. ಅಧಿವೇಶನ ಹಾಳಾದ ಹಿನ್ನೆಲಯಲ್ಲಿ ಸರ್ಕಾರದ ಬೊಕ್ಕಸಕ್ಕೆ 10 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಲೆಕ್ಕ ಹಾಕಲಾಗಿದೆ.












Click it and Unblock the Notifications