Parliament Security Breach: ಆರೋಪಿ ಲಲಿತ್‌ ಬಲೆಗೆ ಜಾಲ? ಈತ ಕೊನೆಯ ಬಾರಿಗೆ ಟ್ರೇಸ್ ಆಗಿದ್ದು ಏಲ್ಲಿ?

ಸಂಸತ್ತಿನ ಭದ್ರತಾ ಉಲ್ಲಂಘನೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಲಲಿತ್ ಝಾಗೆ ಸಂಬಂಧಿಸಿದಂತೆ ಪ್ರಮುಖ ಅಂಶವು ಬೆಳಕಿಗೆ ಬಂದಿದೆ. ಸಂಸತ್ತಿನ ನಡೆದ ಘಟನೆಯ ಬಳಿಕ ಲಲಿತ್‌ ಝಾ ತನ್ನ ಹಿಂಬಾಲಿಕರಿಗೆ ವಿಡಿಯೋ ತುಣಕನ್ನು ಕಳುಹಿಸಿದ್ದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ.

ಸಂಸತ್ತಿನ ಭದ್ರತಾ ಉಲ್ಲಂಘನೆ ಪ್ರಕರಣದಲ್ಲಿ ಬಂಧಿತಗೊಂಡ ಎಲ್ಲ ಆರೋಪಿಗಳನ್ನು, ವಿಚಾರಣೆ ವೇಳೆ ಎಲ್ಲಾ ಆರೋಪಿಗಳು ಭಗತ್ ಸಿಂಗ್ ಅಭಿಮಾನಿಗಳ ಸಂಘದೊಂದಿಗೆ ಸಂಬಂಧ ಹೊಂದಿದ್ದರು ಎಂಬ ಅಂಶವೂ ಬೆಳಕಿಗೆ ಬಂದಿದೆ.

Parliament Security Breach: Accused Lalit Trapped? Where Was He Last Traced?

ಲಲಿತಾ ಜಾ ಅವರು ತನ್ನ ಸಹಯೋಗಿ ಪಶ್ಚಿಮ ಬಂಗಾಳದಲ್ಲಿ ಎನ್‌ಜಿಒ ನಡೆಸುತ್ತಿದ್ದಾನೆ. ಇವನಿಗೆ ಲಲಿತ್ ಝಾ ಘಟನೆಯ ವಿವರನ್ನು ನೀಡಿ ವಿಡಿಯೋ ಸಂದೇಶವನ್ನು ರವಾನಿಸಿದ್ದಾನೆ. ಆತನನ್ನು ನೀಲಕ್ಷ ಎಂದು ಗುರುತಿಸಲಾಗಿದೆ.

ತಲೆಮರೆಸಿಕೊಂಡಿರುವ ಆರೋಪಿ ಲಲಿತ್‌ನ ಸ್ಥಳ ರಾಜಸ್ಥಾನದ ನೀಮ್ರಾನಾದಲ್ಲಿದ್ದಾರೆ ಎಂದು ಹೇಳಲಾಗಿದೆ. ಆತನನ್ನು ಬಂಧಿಸಲು ಪೊಲೀಸ್ ವಿಶೇಷ ದಳದ ತಂಡ ಸ್ಥಳಕ್ಕೆ ತಲುಪಿದೆ. ಶೀಘ್ರದಲ್ಲೇ ಅವರನ್ನೂ ಬಂಧಿಸಲು ಬಲೆ ಬೀಸಲಾಗಿದೆ. ಸದ್ಯಕ್ಕೆ ಸಾಗರ್ ಶರ್ಮಾ (26), ಮನೋರಂಜನ್ ಡಿ (34), ಅಮೋಲ್ ಶಿಂಧೆ (25) ಮತ್ತು ನೀಲಂ (42) ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಎಲ್ಲರನ್ನೂ ನಿರಂತರವಾಗಿ ವಿಚಾರಣೆ ನಡೆಸಲಾಗುತ್ತಿದೆ.

Parliament Security Breach: Accused Lalit Trapped? Where Was He Last Traced?

ಲಲಿತ್ ಅವರನ್ನೇ ಈ ಘಟನೆಯ ಮಾಸ್ಟರ್‌ ಮೈಂಡ್‌ ಎಂದು ಅಂದಾಜಿಸಲಾಗುತ್ತಿದೆ. ಇಂಡಿಯಾ ಟುಡೆ ವರದಿಯ ಪ್ರಕಾರ ನಿಲಕ್ಷ ಅವರು ಪಶ್ಚಿಮ ಬಂಗಾಳದಲ್ಲಿ ಎನ್‌ಜಿಒದಲ್ಲಿ ಕೆಲಸ ಮಾಡುತ್ತಿದ್ದಾರೆ. ಲಲಿತಾ ಝಾ ಅವರು ತನ್ನ ಸಹಯೋಗಿ ನೀಲಕ್ಷ ಅವರಿಗೆ ತಾವು ಬಂಗಾಳದ ಪುರ್ಲಿಯಾ, ಝಾಡಗ್ರಾಮ್‌ ಜಿಲ್ಲೆಗಳಲ್ಲಿ ನೆಟ್‌ ವರ್ಕ್‌ ಹೊಂದಿರುವುದಾಗಿ ತಿಳಿಸಿದ್ದರು.

ಸಂಸತ್ತಿನ ಮೇಲಿನ ಭಯೋತ್ಪಾದಕ ದಾಳಿಯ 22 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಭದ್ರತೆಯಲ್ಲಿ ಈ ಲೋಪ ಸಂಭವಿಸಿದೆ. ಪ್ರಾಥಮಿಕ ತನಿಖೆಯಲ್ಲಿ ಎಲ್ಲರೂ ಪರಸ್ಪರ ಪರಿಚಯವಿದ್ದರು ಎಂಬುದು ಬೆಳಕಿಗೆ ಬಂದಿದೆ. ಎಲ್ಲರೂ ಸಾಮಾಜಿಕ ಮಾಧ್ಯಮಗಳ ಮೂಲಕ ಪರಸ್ಪರ ಸಂಪರ್ಕಕ್ಕೆ ಬಂದಿದ್ದರು. ಸಾಗರ್, ಮನೋರಂಜನ್, ಅಮೋಲ್ ಮತ್ತು ನೀಲಂ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮತ್ತೊಬ್ಬ ಆರೋಪಿ ವಿಶಾಲ್‌ನನ್ನು ಗುರುಗ್ರಾಮದಲ್ಲಿ ಬಂಧಿಸಲಾಗಿದೆ.

Parliament Security Breach: Accused Lalit Trapped? Where Was He Last Traced?

ಸಂಸತ್ತನ್ನು ತಲುಪುವ ಮುನ್ನ ಆರೋಪಿಗಳೆಲ್ಲ ವಿಶಾಲ್ ಮನೆಯಲ್ಲಿ ತಂಗಿದ್ದರು. ಇನ್ನೋರ್ವ ಆರೋಪಿ ಲಲಿತ್ ಗೆ ಬಲೆ ಬೀಸಲಾಗಿದೆ. ಸಂಸತ್ತಿನ ಭದ್ರತಾ ಉಲ್ಲಂಘನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಕಾನೂನುಬಾಹಿರ ಚಟುವಟಿಕೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+