Palash Muchhal: ಸ್ಮೃತಿ ಮಂಧನಾ ಜೊತೆ ಸಂಬಂಧ ಮುರಿದುಕೊಂಡಿದ್ಧ ಪಲಾಶ್ ಮುಚ್ಚಾಲ್ ವಿರುದ್ಧ ಮತ್ತೊಂದು ದೂರು ದಾಖಲು
Palash Muchhal: ಇತ್ತೀಚೆಗಷ್ಟೇ ಟೀಮ್ ಇಂಡಿಯಾ ತಂಡದ ಉಪನಾಯಕಿ ಸ್ಮೃತಿ ಮಂಧಾನ ಹಾಗೂ ಪಲಾಶ್ ಮುಚ್ಚಲ್ ಅವರ ವಿವಾಹ ಕೊನೇ ಗಳಿಗೆಯಲ್ಲಿ ಮುರಿದುಬಿದ್ದಿತ್ತು. ಇದೀಗ ಪಲಾಶ್ ಮುಚ್ಚಾಲ್ ಅವರ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗಿದ್ದು, ಅವರ ವಿರುದ್ಧ ಸಾಂಗ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಾಗಾದ್ರೆ ಕಾರಣ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಭಾರತ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಸ್ಮೃತಿ ಮಂಧನಾ 2025ರ ಕೊನೆಯಲ್ಲಿ ತಮ್ಮ ವೈಯಕ್ತಿಕ ಜೀವನದಿಂದಾಗಿ ಸಾಕಷ್ಟು ಸುದ್ದಿಯಲ್ಲಿದ್ದರು. ಅವರು ಮದುವೆ ಹೊಸ್ತಿಲಲ್ಲಿ ಇದ್ದಾಗಲೇ ಪಲಾಶ್ ಮುಚ್ಚಾಲ್ ಜೊತೆಗಿನ ಸಂಬಂಧವನ್ನು ಕಡಿದುಕೊಂಡಿದ್ದರು. ಕೊನೆಗೆ ಈ ಮದುವೆ ನಡೆಯೋದಿಲ್ಲ ಎಂದು ಸ್ಮೃತಿ ಮಂಧಾನ ಅವರೇ ತಿಳಿಸಿದ್ದರು.

ಸ್ಮೃತಿ ಮಂಧಾನ ಜೀವನದಲ್ಲಿ ನಡೆದ ಈ ವಿಚಾರದಿಂದ ಅಭಿಮಾನಿಗಳು ಆಘಾತಗೊಂಡಿದ್ದರು. ವಿವಾಹದ ದಿನನೇ ಮಂಧನಾ ಅವರ ತಂದೆಗೆ ಹೃದಯಾಘಾತ ಆಗಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕೆಲ ದಿನಗಳ ನಂತರ ಅವರು ಸಾಮಾಜಿಕ ಜಾಲತಾಣದಲ್ಲಿ ವಿವಾಹದ ದಿನ ಆದ ಘಟನೆಯ ಬಗ್ಗೆ ಮಾಹಿತಿ ನೀಡಿ, ಮದುವೆ ಮುರಿದುಬಿದ್ದಿರುವ ಕುರಿತು ಸ್ಪಷ್ಟನೆ ನೀಡಿದರು. ಆಗ ಈ ವಿಚಾರವನ್ನು ಇಲ್ಲಿಗೆ ಬಿಟ್ಟುಬಿಡು ಅಂತಲೂ ಕೇಳಿಕೊಂಡಿದ್ದರು.
ಇದೀಗ ಪಲಾಶ್ ಮುಚ್ಚಾಲ್ ಅವರ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗಿದ್ದು, ಅವರ ವಿರುದ್ಧ ಸಾಂಗ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪಲಾಶ್ ಮುಚ್ಚಾಲ್ ವಿರುದ್ಧ ಸಾಂಗ್ಲಿ ಪೊಲೀಸ್ ಠಾಣೆಯಲ್ಲಿ ಆರ್ಥಿಕ ವಂಚನೆಯ ದೂರು ದಾಖಲಾಗಿದೆ. ಸ್ಮೃತಿ ಮಂಧನಾ ಅವರ ಬಾಲ್ಯದ ಗೆಳೆಯ ವಿಜ್ಞಾನ್ ಮಾನೆ, ಪಲಾಶ್ ವಿರುದ್ಧ ದೂರು ದಾಖಲಿಸಿದ್ದಾರೆ.
ಸಾಂಗ್ಲಿಯ ಸ್ಮೃತಿ ಮಂಧಾನ ಅವರ ಬಾಲ್ಯದ ಗೆಳೆಯ ವಿಜ್ಞಾನ್ ಮಾನೆ, ಸಾಂಗ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪಲಾಶ್ ಮುಚ್ಚಾಲ್ ವಿರುದ್ಧ ಆರ್ಥಿಕ ವಂಚನೆ ದೂರು ದಾಖಲು ಮಾಡಿದ್ದಾರೆ. ಸಾಂಗ್ಲಿಯಲ್ಲಿ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಯುವಕ ವಿಜ್ಞಾನ್ ಮಾನೆ, ಸಂಗೀತ ನಿರ್ದೇಶಕ ಪಲಾಶ್ ಮುಚ್ಚಾಲ್ ವಿರುದ್ಧ ಒಟ್ಟು 40 ಲಕ್ಷ ರೂಪಾಯಿಗಳ ಆರ್ಥಿಕ ವಂಚನೆ ಆರೋಪ ಹೊರಿಸಿದ್ದಾರೆ.
ಆರಂಭದಲ್ಲಿ ಅವರು ನಜರಿಯಾ ಎಂಬ ಚಿತ್ರವನ್ನು ನಿರ್ದೇಶಿಸುವುದಾಗಿ ಮತ್ತು ಚಿತ್ರದ ನಿರ್ಮಾಪಕರಾಗಿ ಅದರಲ್ಲಿ ಹೂಡಿಕೆ ಮಾಡಬೇಕೆಂದು ಹೇಳಿದ್ದರು. ಚಿತ್ರವು ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾದ ಬಳಿಕ 25 ಲಕ್ಷ ರೂಪಾಯಿಗಳ ಹೂಡಿಕೆಯಲ್ಲಿ 12 ಲಕ್ಷ ರೂಪಾಯಿಗಳವರೆಗೆ ಸಂಭಾವನೆ ಪಡೆಯುವುದಾಗಿ ಪಲಾಶ್ ವಿಜ್ಞಾನ್ ಮಾನೆಗೆ ತಿಳಿಸಿದ್ದರು.
ಈ ನಡುವೆ ವಿಜ್ಞಾನ್ ಮಾನೆ ತಮ್ಮ ದೂರಿನಲ್ಲಿ ಈ ಚಿತ್ರದಲ್ಲಿ ತಮಗೂ ಕೆಲಸ ನೀಡುವುದಾಗಿ ಹೇಳಿದ್ದಾರೆ. ಪಲಾಶ್ ನನ್ನಿಂದ ಒಟ್ಟು 40 ಲಕ್ಷ ರೂಪಾಯಿಗಳನ್ನು ಕಾಲಕಾಲಕ್ಕೆ ಪಡೆದು ನನ್ನ ನಂಬಿಕೆಗೆ ದ್ರೋಹ ಮಾಡಿದ್ದಾರೆ ಎಂದು ವಿಜ್ಞಾನ್ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಆರ್ಥಿಕ ವಂಚನೆಗೆ ಸಂಬಂಧಿಸಿದಂತೆ ವಿಜ್ಞಾನ್ ಮಾನೆ ಪಲಾಶ್ ಮುಚ್ಚಾಲ್ ವಿರುದ್ಧ ಐಪಿಸಿ 406, 420ರ ಅಡಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಯನ್ನು ಸಂಪರ್ಕಿಸಿದಾಗ, ಅವರು ದೂರು ಮಾತ್ರ ದಾಖಲಿಸಿದ್ದಾರೆ ಮತ್ತು ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಹೇಳಿದರು ಎಂದು ತಿಳಿದುಬಂದಿದೆ.












Click it and Unblock the Notifications