Get Updates
Get notified of breaking news, exclusive insights, and must-see stories!

ಗಡಿಯಲ್ಲಿ ಪುಂಡಾಟ ನಡೆಸಿ ಭಾರತವನ್ನು ದೂರಿದ ಪಾಕ್

ನವದೆಹಲಿ, ಮೇ 11: ನಮ್ಮ ಹಳ್ಳಿಗಾಡಿನ ಕಡೆಗೆ ಒಂದು ಗಾದೆಯಿದೆ. 'ಕೋತಿ ತಾನು ತಿಂದು ಮುಸುರೆಯನ್ನು ಮೇಕೆ ಮೂತಿಗೆ ಒರೆಸಿತು' ಅಂತ.
ತಾನು ಮಾಡಿದ ತಪ್ಪನ್ನು ಬೇರೆಯವರ ಕಡೆಗೆ ತಿರುಗಿಸುವುದು ಎಂಬುದನ್ನು ಸೂಚಿಸುವ ಗಾದೆ ಮಾತಿದು.

ಗಡಿ ನಿಯಂತ್ರಣಾ ರೇಖೆಯ ಬಳಿ ಗುರುವಾರ ಬೆಳಗ್ಗೆ ಕದನ ವಿರಾಮ ಉಲ್ಲಂಘಿಸಿರುವ ಪಾಕಿಸ್ತಾನ, ಈಗ ಇದಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಸಮನ್ಸ್ ಜಾರಿಗೊಳಿಸಿದೆ!

Pakistan summons Indian Deputy HC over ceasefire violations

ಹೌದು. ನಂಬಿದ್ರೆ ನಂಬಿ, ಬಿಟ್ರೆ ಬಿಡಿ. ಗುರುವಾರ, ಗಡಿ ನಿಯಂತ್ರಣಾ ರೇಖೆಯಲ್ಲಿ ಪಾಕಿಸ್ತಾನ ಸೇನೆ ತಾನೇ ಸ್ವಯಂಪ್ರೇರಿತವಾಗಿ ಗುಂಡಿನ ಚಕಮಕಿ ಆರಂಭಿಸಿತ್ತು.

ಇದರ ಪರಿಣಾಮವಾಗಿ, ಭಾರತದ ಗಡಿ ಭಾಗದ ಹಳ್ಳಿಯಲ್ಲಿನ ಓರ್ವ ಮಹಿಳೆ ಮೃತಪಟ್ಟು ಪುರುಷನೊಬ್ಬ ಗಾಯಗೊಂಡಿದ್ದಾನೆಂದು ಭಾರತೀಯ ಮಾಧ್ಯಮಗಳು ಅಳಲು ತೋಡಿಕೊಂಡಿವೆ.

ಆದರೆ, ಅತ್ತ, ಪಾಕಿಸ್ತಾನ, ಭಾರತವೇ ಕದನ ವಿರಾಮ ಉಲ್ಲಂಘಿಸಿದ್ದು, ಇದರ ಪರಿಣಾಮವಾಗಿ ಓರ್ವ ಪಾಕಿಸ್ತಾನ ನಾಗರಿಕ ಸಾವನ್ನಪ್ಪಿದ್ದಾನೆ ಎಂದು ಬೊಬ್ಬೆಯಿಟ್ಟಿದೆ.

ಅದರ ಬೆನ್ನಲ್ಲೇ, ಇಸ್ಲಾಮಾಬಾದ್ ನಲ್ಲಿರುವ ಭಾರತೀಯ ಹೈ ಕಮೀಷನರ್ ಗೆ ಸಮನ್ಸ್ ಜಾರಿಗೊಳಿಸಿರುವ ಪಾಕಿಸ್ತಾನ, ಭಾರತವೇ ಸ್ವಯಂ ಪ್ರೇರಿತವಾಗಿ ಕದನ ವಿರಾಮ ಉಲ್ಲಂಘಿಸಿರುವ ಬಗ್ಗೆ ಭಾರತ ಸರ್ಕಾರದ ವಿವರಣೆ ಕೇಳುವಂತೆ ತಾಕೀತು ಮಾಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+