ಪಾಕಿಸ್ತಾನವು ಚೀನಾ ನೀತಿಗಳ ಕೈಗೊಂಬೆಯಾಗಿದೆ: ಭದೌರಿಯಾ ಆರೋಪ

ನವದೆಹಲಿ, ಡಿಸೆಂಬರ್ 30: ಪಾಕಿಸ್ತಾನವು ಚೀನಾ ನೀತಿಗಳ ಕೈಗೊಂಬೆಯಾಗಿದೆ ಎಂದು ಭಾರತೀಯ ವಾಯುಪಡೆ ಏರ್‌ಚೀಫ್ ಮಾರ್ಷಲ್ ಆರ್‌ಕೆಎಸ್ ಬದೌರಿಯಾ ಹೇಳಿದ್ದಾರೆ.

ದುರ್ಬಲ ರಾಷ್ಟ್ರಗಳ ಮೇಲೆ ಏಕಪಕ್ಷೀಯ ನಿಲುವುಗಳನ್ನು ಹೇರಲು ಆರ್ಥಿಕ ಅವಲಂಬನೆ ಹಾಗೂ ಬಲವಂತ ಮಾಡಲಾಗುತ್ತಿದೆ. ದುರ್ಬಲ ರಾಷ್ಟ್ರಗಳನ್ನು ಮರು ಪಾವತಿಸಲಾಗದ ಸಾಲದ ಬಾಧೆಗೆ ಸಿಕ್ಕಿ ಹಾಕಿಸಿಕೊಳ್ಳುವ ಮೂಲಕ ಭೌಗೋಳಿಕ ರಾಜಕೀಯ ಗುರಿಗಳನ್ನು ಸಾಧಿಸುತ್ತಾರೆ ಎಂದು ಚೀನಾವನ್ನು ಬೊಟ್ಟು ಮಾಡಿ ಹೇಳಿದ್ದಾರೆ.

ಅಫ್ಘಾನಿಸ್ತಾನದಿಂದ ಅಮೆರಿಕದ ಪಡೆಗಳನ್ನು ಹಿಂಪಡೆದುಕೊಂಡಿರುವುದು ಚೀನಾಗೆ ಇಸ್ಲಾಮಾಬಾದ್ ಮೂಲಕ ಈ ಪ್ರದೇಶದಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸಲು ಬಾಗಿಲು ತೆರೆಯಿತು.

 Pakistan Has Become Pawn In Chinese Policy: IAF Chief RKS Bhadauria

ಚೀನಾ ಹಾಗೂ ಅದರ ತಂತ್ರಗಾರಿಕೆ ಬಗ್ಗೆ ಅರಿತುಕೊಳ್ಳುವುದು ಭಾರತದ ಮುಂದಿರುವ ಪ್ರಮುಖ ಭದ್ರತಾ ಸವಾಲಾಗಿದೆ ಎಂದರು.

ಅಫ್ಘಾನಿಸ್ತಾನದಿಂದ ಅಮೆರಿಕ ನಿರ್ಗಮಿಸಿರುವುದು ಈ ಪ್ರದೇಶದಲ್ಲಿ ಪಾಕಿಸ್ತಾನದ ಮೂಲಕ ಚೀನಾಗೆ ಹೆಚ್ಚಿನ ಆಯ್ಕೆ ನೀಡಿದಂತಾಗಿದೆ. ಇದು ಮಧ್ಯ ಏಷ್ಯಾಕ್ಕೆ ಪ್ರವೇಶಿಸಲು ಅನುವು ಮಾಡಿಕೊಟ್ಟಿದೆ. ಈ ಪ್ರದೇಶದಲ್ಲಿ ದೀರ್ಘ ಕಾಲದಿಂದ ಕಣ್ಣಿಟ್ಟಿದೆ ಎಂದು ಹೇಳಿದರು.

ಪಾಕಿಸ್ತಾನವು ಚೀನಾ ನೀತಿಯ ಕೈಗೊಂಬೆಯಾಗಿದೆ, ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್‌ಗೆ ಸಂಬಂಧಿಸಿದಂತೆ ಚೀನಾದ ಬೋನಿನಲ್ಲಿ ಸಿಲುಕಿದ್ದು, ಭವಿಷ್ಯದಲ್ಲಿ ಮತ್ತಷ್ಟು ಮಿಲಿಟರಿ ಅವಲಂಬನೆಗೆ ಸಾಕ್ಷಿಯಾಗಲಿದೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+